AAPs Lone Lok Sabha, MP Sushil Rinku: ಆಮ್ ಆದ್ಮಿ ಪಕ್ಷದ ಏಕೈಕ ಸಂಸದ ಸುಶೀಲ್ ರಿಂಕು ಬಿಜೆಪಿ ಸೇರ್ಪಡೆ ; ವರ್ಷದ ಹಿಂದೆ ಆಪ್ ಸೇರಿದ್ದ ರಿಂಕು ಮತ್ತೆ ಪಕ್ಷಾಂತರ

27-03-24 10:24 pm       HK News Desk   ದೇಶ - ವಿದೇಶ

ಆಮ್ ಆದ್ಮಿ ಪಕ್ಷದ ಏಕೈಕ ಸಂಸದ ಸುಶೀಲ್ ಕುಮಾರ್ ರಿಂಕು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜಲಂಧರ್ ಪಶ್ಚಿಮ ಅಸೆಂಬ್ಲಿ ಕ್ಷೇತ್ರದ ಆಪ್ ಶಾಸಕ ಶೀತಲ್ ಅಂಗುರಾಲ್ ಜೊತೆಗೆ ದೆಹಲಿ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದ್ದಾರೆ.

ನವದೆಹಲಿ, ಮಾ.27: ಆಮ್ ಆದ್ಮಿ ಪಕ್ಷದ ಏಕೈಕ ಸಂಸದ ಸುಶೀಲ್ ಕುಮಾರ್ ರಿಂಕು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜಲಂಧರ್ ಪಶ್ಚಿಮ ಅಸೆಂಬ್ಲಿ ಕ್ಷೇತ್ರದ ಆಪ್ ಶಾಸಕ ಶೀತಲ್ ಅಂಗುರಾಲ್ ಜೊತೆಗೆ ದೆಹಲಿ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದ್ದಾರೆ.

2023ರಲ್ಲಿ ಪಂಜಾಬಿನ ಜಲಂಧರ್ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸುಶೀಲ್ ಕುಮಾರ್ ರಿಂಕು ಆಪ್ ಪಕ್ಷದಿಂದ ಭರ್ಜರಿ ಮತಗಳಿಂದ ಜಯ ಗಳಿಸಿದ್ದರು. ಜೂನ್ 1ರಂದು ನಡೆಯುವ ಕೊನೆಯ ಹಂತದ ಲೋಕಸಭೆ ಚುನಾವಣೆಯಲ್ಲಿ ರಿಂಕು ಬಿಜೆಪಿಯಿಂದ ಜಲಂಧರ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

2022ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸುಶೀಲ್ ರಿಂಕು ಮತ್ತು ಶೀತಲ್ ಅಂಗುರಾಲ್ ಒಂದೇ ಕ್ಷೇತ್ರದಲ್ಲಿ ಎದುರೆದುರು ಸ್ಪರ್ಧಿಸಿದ್ದರು. ಜಲಂಧರ್ ಪಶ್ಚಿಮ ಕ್ಷೇತ್ರದ ಚುನಾವಣೆಯಲ್ಲಿ ಆಪ್ ನಿಂದ ಸ್ಪರ್ಧಿಸಿದ್ದ ಶೀತಲ್ ಅಂಗುರಾಲ್ ಗೆದ್ದುಕೊಂಡಿದ್ದರೆ, ಆಗ ಕಾಂಗ್ರೆಸಿನಲ್ಲಿದ್ದ ಸುಶೀಲ್ ರಿಂಕ್ ಸೋಲು ಕಂಡಿದ್ದರು. 2023ರಲ್ಲಿ ಆಪ್ ಪಕ್ಷ ಸೇರಿದ್ದ ರಿಂಕು, ಲೋಕಸಭೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು.

543 ಸಂಸತ್ ಸ್ಥಾನಗಳ ಪೈಕಿ ಸುಶೀಲ್ ರಿಂಕ್ ಆಪ್ ಪಕ್ಷದಿಂದ ಆಯ್ಕೆಯಾಗಿದ್ದ ಏಕೈಕ ಸಂಸದರಾಗಿದ್ದರು. ಜಲಂಧರ್ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ. ಆಪ್ ಪಕ್ಷವು ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ಮಾಡಿದೆ ಎಂದು ಸುಶೀಲ್ ರಿಂಕು ಹೇಳಿದ್ದಾರೆ. ನಾನು ಅಧಿಕಾರಕ್ಕಾಗಿ ಬಿಜೆಪಿ ಸೇರಿದ್ದಲ್ಲ, ಜಲಂಧರ್ ನಗರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ್ದ ಆಪ್ ಪಕ್ಷವು ಪಂಜಾಬಿನಲ್ಲಿ ಅಧಿಕಾರ ಹಿಡಿದಿದೆ.

AAP's only Lok Sabha member, Sushil Kumar Rinku, joined the BJP today. The move was accompanied by Jalandhar West MLA Sheetal Angural also joining the BJP ranks at the party headquarters in Delhi.