ಬ್ರೇಕಿಂಗ್ ನ್ಯೂಸ್
29-03-24 10:57 pm HK News Desk ದೇಶ - ವಿದೇಶ
ನವದೆಹಲಿ, ಮಾ.29: ಐಸಿಸ್ ಉಗ್ರವಾದಿ ಸಂಘಟನೆಯಿಂದ ಭಾರತಕ್ಕೆ ಗಂಭೀರ ಅಪಾಯ ಎದುರಾಗಲಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ಇಂಗ್ಲಿಷ್ ವರದಿ ಮಾಡಿದೆ.
ತಾಲಿಬಾನ್ ದುರ್ಬಲಗೊಂಡ ಬಳಿಕ ಐಸಿಸ್ ಉಗ್ರರು ಪಾಕಿಸ್ತಾನದ ಐಎಸ್ಐ ಗುಪ್ತಚರ ಸಂಸ್ಥೆ ಜೊತೆಗೆ ಕೈಜೋಡಿಸಿದ್ದು, ಇಸ್ಲಾಮಿಕ್ ಸ್ಟೇಟ್ ಪಾಕಿಸ್ತಾನ್ ಪ್ರೊವಿನ್ಸ್ (ಐಎಸ್ ಪಿಪಿ) ಎಂದು ಹೊಸ ಸಂಘಟನೆ ಕಟ್ಟಿಕೊಂಡಿದೆ. ಇದರ ಮಾಧ್ಯಮ ಸಂಸ್ಥೆಯಾಗಿರುವ ನಾಶಿರ್ ಮೀಡಿಯಾ ಗ್ರೂಪ್ ಇದೀಗ, ಮುಂದಿನ ಟಾರ್ಗೆಟ್ ಯಾರು ಎಂದು ಪೋಸ್ಟ್ ಮಾಡಿದೆ. ಅದರಲ್ಲಿ ಭಾರತ, ಅಮೆರಿಕ, ಚೀನಾ, ಡೆನ್ಮಾರ್ಕ್ ಹೆಸರನ್ನು ಉಲ್ಲೇಖಿಸಿದೆ. ಇದೇ ಪೋಸ್ಟ್ ನಲ್ಲಿ ಇತ್ತೀಚೆಗೆ ರಷ್ಯಾದ ಮಾಸ್ಕೋ ಮತ್ತು ಕಂದಹಾರ್ ಬಾಂಬ್ ದಾಳಿಯ ಫೋಟೊವನ್ನು ತೋರಿಸಿದೆ.
ಇದೇ ಮಾರ್ಚ್ 21ರಂದು ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಮುಲ್ಲಾ ಹಿಬಾತುಲ್ಲಾನನ್ನು ಐಸಿಸ್ ಟಾರ್ಗೆಟ್ ಮಾಡಿತ್ತು. ಇದರ ಮರುದಿನವೇ ರಷ್ಯಾದ ಮಾಸ್ಕೋದಲ್ಲಿ ಶಸ್ತ್ರಸಜ್ಜಿತ ಗುಂಪು ದಾಳಿ ನಡೆಸಿದ್ದು, ಆಟೊಮೆಟಿಕ್ ಗನ್ ಹಿಡಿದು ಹಾಲ್ ನುಗ್ಗಿದ್ದ ಉಗ್ರರು 130 ಮಂದಿಯನ್ನು ಕೊಂದು ಹಾಕಿದ್ದರು.
ಐಸಿಸ್ ಬೆದರಿಕೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಈಗಾಗಲೇ ಭಾರತದಲ್ಲಿ ಒಂದು ವರ್ಗದ ಯುವಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿದೆ, ಆದರೆ ದಾಳಿಗೆ ಯೋಜನೆ ಹಾಕುತ್ತಿರುವುದನ್ನು ಪ್ರತಿ ಬಾರಿ ನಾವು ಪೊಲೀಸರ ಮೂಲಕ ವಿಫಲಗೊಳಿಸಿದ್ದೇವೆ. ಇಂತಹ ಕೃತ್ಯಗಳ ಬಗ್ಗೆ ನಾವು ಹೈಎಲರ್ಟ್ ಇದ್ದೇವೆ ಎಂದು ಕೇಂದ್ರ ಗುಪ್ತಚರ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನ ಗಡಿಯಲ್ಲಿ ತಾಲಿಬಾನ್ ಮತ್ತು ಪಾಕ್ ಸೇನೆ ಪ್ರತಿ ಬಾರಿ ದಾಳಿ- ಪ್ರತಿ ದಾಳಿ ನಡೆಸುತ್ತ ಬಂದಿದೆ. ಇದೀಗ ಐಸಿಸ್, ಪಾಕಿಸ್ತಾನದ ಐಎಸ್ಐ ಜೊತೆಗೆ ಕೈಜೋಡಿಸಿದ್ದು, ಮುಂದಿನ ದಾಳಿಗೆ ಯೋಜನೆ ಹಾಕಿದೆ ಎಂದವರು ಉಲ್ಲೇಖಿಸಿದ್ದಾರೆ.
ಐಸಿಸ್ ಈಗಾಗಲೇ ಭಾರತದ ಗಲ್ಲಿ ಯುವಕರ ಬೆಂಬಲ ಗಳಿಸಿದ್ದು, ವಿಧ್ವಂಸಕ ಕೃತ್ಯಗಳಿಗೆ ಪ್ರಯತ್ನ ಪಟ್ಟಿರುವುದು ಪತ್ತೆಯಾಗಿದೆ. ಬೆಂಗಳೂರಿನ ಕೆಫೆ ಬಾಂಬ್ ಸ್ಫೋಟ ಪ್ರಕರಣ ಅದರಲ್ಲಿ ಒಂದು. ಅದರಲ್ಲಿ ಐಸಿಸ್ ಮನಸ್ಥಿತಿ ಇದ್ದವರೇ ಕೈಜೋಡಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ.
India is facing a serious ISIS threat and is definitely the target of the global terrorist group because of the presence of radical elements, intelligence agency sources told CNN-News18 on Friday. Recent threats by the Islamic State Pakistan Province (ISPP) can’t be taken lightly, they said.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 08:53 pm
Mangalore Correspondent
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm