ಬ್ರೇಕಿಂಗ್ ನ್ಯೂಸ್
31-03-24 02:42 pm HK NEWS ದೇಶ - ವಿದೇಶ
ಹೈದರಾಬಾದ್, ಮಾ.31: ಸುಪ್ರೀಂ ಕೋರ್ಟ್ ಜಡ್ಜ್ ಬಿ.ವಿ.ನಾಗರತ್ನ ಮತ್ತೆ ಕೇಂದ್ರ ಸರಕಾರದ ನೋಟು ಅಮಾನ್ಯೀಕರಣ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. ನೋಟು ಅಮಾನ್ಯ ಪ್ರಕ್ರಿಯೆಯಲ್ಲಿ 98 ಶೇಕಡಾದಷ್ಟು ಕರೆನ್ಸಿ ನೋಟುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮರಳಿ ಬಂದಿದೆ ಎಂದಾದರೆ, ಇದರಿಂದ ಕಪ್ಪು ಹಣವನ್ನು ಮೂಲೋತ್ಪಾಟನೆ ಮಾಡಿದ್ದಾರೆ ಎನ್ನುವುದು ಹೇಗೆ ಎಂದು ನಾಗರತ್ನ ಪ್ರಶ್ನಿಸಿದ್ದಾರೆ.
ಹೈದರಾಬಾದ್ ನಗರದ ನಲ್ಸಾರ್ ಯುನಿವರ್ಸಿಟಿ ಆಫ್ ಲಾ ವತಿಯಿಂದ ಹಮ್ಮಿಕೊಂಡ ಸಂವಿಧಾನ ಸಮ್ಮೇಳನ- 2024ರಲ್ಲಿ ಜಸ್ಟಿಸ್ ಬಿವಿ ನಾಗರತ್ನ ಉದ್ಘಾಟನಾ ಭಾಷಣ ಮಾಡಿದರು. 2023ರಲ್ಲಿ ನೋಟು ಅಮಾನ್ಯೀಕರಣದ ಕುರಿತ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರಿದ್ದ ಪೀಠ ತೀರ್ಪು ನೀಡಿತ್ತು. ಕೇಂದ್ರ ಸರಕಾರದ ನಡೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು 4-1ರ ಅನುಪಾತದಲ್ಲಿ ತೀರ್ಪು ಹೇಳಿದ್ದರು. ನಾಲ್ವರು ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮವನ್ನು ಎತ್ತಿಹಿಡಿದಿದ್ದರೆ, ಜಸ್ಟಿಸ್ ಬಿವಿ ನಾಗರತ್ನ ಮಾತ್ರ ವಿರೋಧಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಭಾಷಣದಲ್ಲಿ ಉಲ್ಲೇಖಿಸಿದ ನ್ಯಾಯಾಧೀಶರು, ಆ ಕುರಿತು ತೀರ್ಪು ನೀಡಿದ್ದ ಪೀಠದಲ್ಲಿ ತಾನೂ ಭಾಗಿಯಾಗಿದ್ದೇನೆ ಎಂಬ ತೃಪ್ತಿ ಇದೆ. ನೋಟು ಅಮಾನ್ಯ ಮಾಡಿದ ಬಳಿಕ 500 ಮತ್ತು ಒಂದು ಸಾವಿರ ಮುಖಬಲೆಯ 86 ಶೇಕಡಾ ನೋಟುಗಳು ಆರ್ ಬಿಐಗೆ ಹಿಂತಿರುಗಿ ಬಂದಿದ್ದವು. ಹಾಗಾದ್ರೆ, ಕಪ್ಪು ಹಣವನ್ನು ನಿವಾರಿಸಲು ನೋಟು ಅಮಾನ್ಯ ಕ್ರಮವನ್ನು ಅನುಸರಿಸಲಾಗಿತ್ತು ಎಂಬ ವಾದವನ್ನು ಒಪ್ಪಿಕೊಳ್ಳುವುದು ಹೇಗೆ. ಕೇಂದ್ರ ಸರಕಾರ ತನ್ನ ಗುರಿಯನ್ನು ತಲುಪಿಲ್ಲ ಎಂದೇ ಹೇಳಬೇಕಲ್ಲ ಎಂಬುದಾಗಿ ಭಾಷಣದಲ್ಲಿ ತಿಳಿಸಿದ್ದಾರೆ.
ನನಗನಿಸುತ್ತೆ, ಈ ನೋಟು ಅಮಾನ್ಯ ಪ್ರಕ್ರಿಯೆ ಮೂಲಕ ಕೆಲವರು ಕಪ್ಪು ಹಣವನ್ನು ವೈಟ್ ಮಾಡಿಕೊಂಡಿದ್ದಾರೆ. ಕಪ್ಪು ಕುಳಗಳಿಗೆ ಇದೊಂದು ಉತ್ತಮ ರಹದಾರಿ ಆಗಿತ್ತು. ಲೆಕ್ಕವಿಲ್ಲದ ನಗದು ಹಣವನ್ನು ವ್ಯವಸ್ಥೆಯೊಳಗೆ ತುರುಕಲು ದಾರಿ ಮಾಡಿದಂತಿತ್ತು. ಆ ಕುರಿತು ಐಟಿ ಇಲಾಖೆಯವರು ಕೈಗೊಂಡಿದ್ದ ಪ್ರಕ್ರಿಯೆಗಳು ಎಲ್ಲಿ ಹೋದವು. ಅದರ ಬಗ್ಗೆ ನಮಗೇನೂ ಗೊತ್ತೇ ಆಗಿಲ್ಲ. ಇಂಥ ಪ್ರಕ್ರಿಯೆಯಲ್ಲಿ ಹೆಚ್ಚು ಕಷ್ಟ ಅನುಭವಿಸಿದ್ದು ಸಾಮಾನ್ಯ ಜನರು ಅನ್ನೋದನ್ನು ಮರೆಯುವಂತಿಲ್ಲ. ಉತ್ತಮ ಉದ್ದೇಶ ಹೊಂದಿದ್ದರೂ, ಅದನ್ನು ಮಾಡಿದ ರೀತಿ ಮಾತ್ರ ಸರಿ ಇರಲಿಲ್ಲ.
ನೋಟು ಅಮಾನ್ಯಗೊಳಿಸುವ ಕುರಿತು ನಿರ್ಧಾರ ಕೈಗೊಂಡಿದ್ದರಲ್ಲಿಯೂ ತಪ್ಪಾಗಿದೆ. ಅದು ಸರಕಾರದ ಮಟ್ಟದಲ್ಲಿ ಕಾನೂನು ರೀತ್ಯ ಸರಿಯಾಗಿ ಮಾಡಿರಲಿಲ್ಲ. ಅದು ಎಷ್ಟೊಂದು ಎಡವಟ್ಟಿನಿಂದ ಕೂಡಿತ್ತು ಎಂದರೆ, ಕೆಲವರು ಹೇಳುತ್ತಾರೆ, ಆ ಕುರಿತು ನಿರ್ಧಾರ ಕೈಗೊಂಡಿದ್ದು ಸ್ವತಃ ಹಣಕಾಸು ಮಂತ್ರಿಗೂ ತಿಳಿದಿರಲಿಲ್ಲವಂತೆ ಎಂದು ಕರ್ನಾಟಕ ಮೂಲದ ಮಹಿಳಾ ನ್ಯಾಯಾಧೀಶೆ ಬಿವಿ ನಾಗರತ್ನ ಬೊಟ್ಟು ಮಾಡಿದ್ದಾರೆ.
Supreme Court judge Justice BV Nagarathna, who had opposed demonetisation in a January 2 verdict last year, asked how was black money eradicated when 98 percent of the currency came back to the Reserve Bank of India (RBI) during the process.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm