ಬ್ರೇಕಿಂಗ್ ನ್ಯೂಸ್
31-03-24 10:36 pm HK News Desk ದೇಶ - ವಿದೇಶ
ನವದೆಹಲಿ, ಮಾ.31: ಪ್ರಧಾನಿ ಮೋದಿಯವರ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಸ್ಲೋಗನ್ ಮ್ಯಾಚ್ ಫಿಕ್ಸಿಂಗ್ ಇಲ್ಲದೆ ಪೂರ್ತಿಯಾಗಲು ಸಾಧ್ಯವಿಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡೋದಕ್ಕೆ ಅಂತಲೇ ಪ್ರಧಾನಿ ಅಂಪೈರ್ ಗಳನ್ನು ನೇಮಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಒಕ್ಕೂಟದಿಂದ ನಡೆದ ಲೋಕತಂತ್ರ ಬಚಾವೋ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇವಿಎಂ ಯಂತ್ರ ದುರುಪಯೋಗ, ಮ್ಯಾಚ್ ಫಿಕ್ಸಿಂಗ್, ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಮೇಲೆ ಒತ್ತಡ ತಂತ್ರ ಮಾಡದೇ ಇರುತ್ತಿದ್ದರೆ ಬಿಜೆಪಿ 18 ಸ್ಥಾನಕ್ಕಿಂತ ಹೆಚ್ಚು ಪಡೆಯಲ್ಲ ಎಂದು ಹೇಳಿದ ರಾಹುಲ್, ಈಗ ಐಪಿಎಲ್ ಮ್ಯಾಚ್ ಆಗ್ತಾ ಇದೆ. ಅಂಪೈರ್ ಗಳು ಒತ್ತಡಕ್ಕೊಳಗಾದರೆ, ಆಟಗಾರರು ಖರೀದಿಯಾದರೆ, ನಾಯಕರು ಪಂದ್ಯ ಗೆಲ್ಲುವ ಒತ್ತಡದಲ್ಲಿರುತ್ತಾರೆ. ಅದನ್ನು ಕ್ರಿಕೆಟಿನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂದು ಕರೆಯುತ್ತಾರೆ. ನಮ್ಮೆದುರು ಲೋಕಸಭೆ ಚುನಾವಣೆ ಇದೆ, ಇಲ್ಲಿ ಅಂಪೈರ್ ಗಳನ್ನು ಪ್ರಧಾನಿ ಮೋದಿಯವರೇ ಆಯ್ಕೆ ಮಾಡುತ್ತಾರೆ. ನಮ್ಮ ತಂಡದ ಇಬ್ಬರು ಆಟಗಾರರು ಮ್ಯಾಚ್ ಆಗೋ ಮೊದಲೇ ಅರೆಸ್ಟ್ ಆಗಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಈ ದೇಶದ ಬಹುದೊಡ್ಡ ರಾಜಕೀಯ ಪಕ್ಷ. ಆದರೆ ಪಕ್ಷದ ಎಲ್ಲ ಬ್ಯಾಂಕ್ ಖಾತೆಗಳನ್ನು ಚುನಾವಣೆ ನಡುವಲ್ಲೇ ಕ್ಲೋಸ್ ಮಾಡಿದ್ದಾರೆ. ನಾವು ಕ್ಯಾಂಪೇನ್ ಮಾಡಬೇಕು, ಪ್ರಮುಖರನ್ನು ಪ್ರಚಾರಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಕಳಿಸಿಕೊಡಬೇಕು. ಪೋಸ್ಟರ್ ಗಳನ್ನು ಹಂಚಬೇಕು, ಆದರೆ ನಮ್ಮ ಬ್ಯಾಂಕ್ ಖಾತೆಗಳನ್ನೇ ಬಂದ್ ಮಾಡಲಾಗಿದೆ. ಇದು ಯಾವ ರೀತಿಯ ಇಲೆಕ್ಷನ್ ಎಂದು ಪ್ರಶ್ನೆ ಮಾಡಬೇಕಾಗುತ್ತದೆ.
ಪ್ರಧಾನಿಯವರು ಈಗಾಗಲೇ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. 3-4 ಬಂಡವಾಳಶಾಹಿಗಳನ್ನು ಮುಂದಿಟ್ಟು ದೇಶದ ಬಡ ಜನತೆಯನ್ನು ಖರೀದಿಸಿದ್ದಾರೆ. ಈ ಚುನಾವಣೆ ಸಾಮಾನ್ಯ ರೀತಿಯದ್ದಲ್ಲ. ಇದು ದೇಶವನ್ನು ಮತ್ತು ಸಂವಿಧಾನವನ್ನು ರಕ್ಷಿಸುವ ಚುನಾವಣೆ. ನೀವೆಲ್ಲ ಫುಲ್ ಪವರ್ ನಲ್ಲಿ ಮತ ಚಲಾಯಿಸದೇ ಇದ್ದರೆ ಮ್ಯಾಚ್ ಫಿಕ್ಸಿಂಗ್ ಸಕ್ಸಸ್ ಆಗುತ್ತದೆ. ಸಂವಿಧಾನವೇ ಜನರ ವಾಯ್ಸ್. ಅವರೇ ಗೆದ್ದರೆ ಅಲ್ಲಿಗೆ ಸಂವಿಧಾನದ ಧ್ವನಿಗೆ ಕೊನೆ ಬೀಳುತ್ತದೆ. ದೇಶಕ್ಕೂ ಕೊನೆಯಾಗುತ್ತದೆ ಎಂದರು.
ಭಾನುವಾರದ ದೆಹಲಿ ರ್ಯಾಲಿ ಇಂಡಿಯಾ ಒಕ್ಕೂಟದ ಸದಸ್ಯರನ್ನು ಮತ್ತೆ ಒಂದಾಗಿಸಿದೆ. ಸಮಾವೇಶದಲ್ಲಿ ಕೇಜ್ರಿವಾಲ್ ಪತ್ನಿ ಸುನೀತ್ ಕೇಜ್ರಿವಾಲ್, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಸಮಾವಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ಶಿವಸೇನಾ ಸಂಸದ ಸಂಜಯ ರಾವುತ್, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಮತ್ತಿತರರು ಇದ್ದರು.
Congress MP Rahul Gandhi launched a scathing attack at the BJP on Sunday, saying that the party's "400 paar slogan is not possible without match-fixing". He added that the Prime Minister chose "umpires" to go "400 paar".
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 08:53 pm
Mangalore Correspondent
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm