ಬ್ರೇಕಿಂಗ್ ನ್ಯೂಸ್
01-04-24 10:02 pm HK News Desk ದೇಶ - ವಿದೇಶ
ಕೋಜಿಕ್ಕೋಡ್, ಎ.1: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನ ಕ್ರಮವನ್ನು ಖಂಡಿಸಿ ಬಿಜೆಪಿ ವಿರೋಧಿ ಶಕ್ತಿಗಳು ದೆಹಲಿಯಲ್ಲಿ ಪ್ರತಿಭಟಿಸಿದ್ದು ಒಗ್ಗಟ್ಟಿನ ನಡೆಯಾಗಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಬಿಜೆಪಿ ವಿರುದ್ಧ ದೇಶದಲ್ಲಿ ಬಲವಾದ ಎಚ್ಚರಿಕೆ ಮೂಡಿಸುವಲ್ಲಿ ಸಫಲವಾಗಿದೆ. ಇದೇ ಸಂದರ್ಭದಲ್ಲಿ ಕೇಜ್ರಿವಾಲ್ ಬಂಧನ ಕ್ರಮದಿಂದ ಕಾಂಗ್ರೆಸ್ ಪಾಠವನ್ನೂ ಕಲಿಯಬೇಕಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇಜ್ರಿವಾಲ್ ಬಂಧನ ವಿರುದ್ಧ ಇಂಡಿಯಾ ಒಕ್ಕೂಟದ ವಿಪಕ್ಷಗಳು ದೆಹಲಿಯ ರಾಮಲೀಲಾ ಮೈದಾನದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದವು. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ, ಕಾಂಗ್ರೆಸ್ ನಡೆಯ ಬಗ್ಗೆ ಆಕ್ಷೇಪಿಸುತ್ತಾ ಈ ಘಟನೆ ಆ ಪಕ್ಷಕ್ಕೆ ಪಾಠವಾಗಬೇಕು ಎಂದು ವೇದಾಂತದ ಉಪದೇಶ ಮಾಡಿದ್ದಾರೆ.
ಕಾಂಗ್ರೆಸ್ಸೇತರ ಪಕ್ಷವನ್ನು ಬಿಜೆಪಿ ಟಾರ್ಗೆಟ್ ಮಾಡಿದ ಪ್ರತಿ ಸಂದರ್ಭದಲ್ಲಿಯೂ ಕಾಂಗ್ರೆಸ್, ಬಿಜೆಪಿಗೆ ಬೆಂಬಲವಾಗಿ ನಿಲ್ಲುತ್ತ ಬಂದಿದೆ ಎಂದಿರುವ ಪಿಣರಾಯಿ ವಿಜಯನ್, ಕೇಜ್ರಿವಾಲ್ ಎಪಿಸೋಡ್ ಕಾಂಗ್ರೆಸಿನ ಈ ನಡೆಯನ್ನು ಎತ್ತಿ ತೋರಿಸಲು ಉತ್ತಮ ಉದಾಹರಣೆಯಾಗಿದೆ. ಲಿಕ್ಕರ್ ವಿಚಾರದಲ್ಲಿ ದೆಹಲಿ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ, ಸಿಎಂ ಕೇಜ್ರಿವಾಲ್ ವಿರುದ್ಧ ದಾಳಿ ಮಾಡಲು ಆರಂಭಿಸಿದ್ದೇ ಕಾಂಗ್ರೆಸ್. ಆನಂತರ, ಕಾಂಗ್ರೆಸ್ ನಾಯಕರೇ ಈ ವಿಚಾರದಲ್ಲಿ ಪೊಲೀಸ್ ದೂರು ನೀಡಿದ್ದರು. ಇದರಿಂದಾಗಿ ಕೇಸಿಗೆ ಸಂಬಂಧಿಸಿ ತನಿಖೆಗೆ ಇಡಿ ಅಧಿಕಾರಿಗಳು ಎಂಟ್ರಿ ಕೊಡಲು ಕಾರಣವಾಗಿತ್ತು.
ಸಚಿವ ಮನೀಶ್ ಸಿಸೋಡಿಯ ಅರೆಸ್ಟ್ ಆದ ಬೆನ್ನಲ್ಲೇ ಕಾಂಗ್ರೆಸಿನವರು ಕೇಜ್ರಿವಾಲ್ ಅರೆಸ್ಟ್ ಯಾವಾಗ ಎಂದು ಕೇಳಲು ಆರಂಭಿಸಿದರು. ಕೇಜ್ರಿವಾಲ್ ಬಂಧನ ಆಗೋ ವರೆಗೂ ಈ ಮಾತನ್ನು ಕೇಳುತ್ತಲೇ ಬಂದಿದ್ದರು. ಆಮೂಲಕ ಬಿಜೆಪಿ ಪರವಾಗಿಯೇ ಕಾಂಗ್ರೆಸ್ ನಾಯಕರ ವರ್ತನೆ ಇತ್ತು. ಈಗ ಕಾಂಗ್ರೆಸ್ ತನ್ನ ನಿಲುವಲ್ಲಿ ಬದಲಾವಣೆ ಮಾಡಿರಬಹುದು. ಕಾಂಗ್ರೆಸ್ ನಾಯಕರಿಗೆ ಪ್ರಾಮಾಣಿಕತೆ ಇದ್ದರೆ ತಮ್ಮ ಈ ಮೊದಲಿನ ನಿಲುವು ತಪ್ಪಾಗಿತ್ತು ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ತಿವಿದಿದ್ದಾರೆ.
ಆಡಳಿತದಲ್ಲಿರುವ ಸರಕಾರಗಳು ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿದಾಗ, ಅಂಥ ಸಂದರ್ಭದಲ್ಲಿ ರಾಜಕೀಯದಿಂದಲೇ ದೂರ ಸರಿಯೋದು ಸರಿಯಾದ ನಡೆಯಲ್ಲ. ಆಡಳಿತದ ನಡೆಯನ್ನು ವಿರೋಧಿಸಿ ಹೋರಾಟ ಮಾಡುವ ಎದೆಗಾರಿಕೆಯನ್ನು ರಾಜಕಾರಣಿಗಳು ತೋರಿಸಬೇಕು. ಬೆದರಿಕೆ ಬಂದಾಗ ಪಕ್ಷವನ್ನು ತ್ಯಜಿಸುವುದು, ಇನ್ನೊಂದು ಪಕ್ಷವನ್ನು ಸೇರುವುದು ಒಪ್ಪತಕ್ಕ ವಿಚಾರ ಅಲ್ಲ. ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಇಂತಹ ಸಂದರ್ಭ ಬಂದಾಗೆಲ್ಲ ಖಚಿತವಾದ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಪಿಣರಾಯಿ ಸಲಹೆ ಮಾಡಿದ್ದಾರೆ.
The unity among 18 anti-BJP parties, who gathered in New Delhi to protest the arrest of Delhi Chief Minister Arvind Kejriwal, showed signs of fracture a day later when veteran CPI(M) leader and Kerala Chief Minister Pinarayi Vijayan on Monday accused the Congress of demanding the ED probe into the Delhi liquor excise policy case.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm