ದಾರಿತಪ್ಪಿಸುವ ಕೊರೊನಾ ಜಾಹೀರಾತು ; ಪತಂಜಲಿ ಸಂಸ್ಥೆಯ ‘ಬೇಷರತ್ ಕ್ಷಮೆ’ ನಿರಾಕರಿಸಿದ ಸುಪ್ರೀಂ ಕೋರ್ಟ್, ತಪ್ಪು ಮಾಡಿ ಕ್ಷಮೆ ಯಾಚಿಸುತ್ತಿದ್ದೀರಿ, ನಾವು ಕುರುಡರಲ್ಲ ಎಂದ ನ್ಯಾಯಾಧೀಶರು

10-04-24 10:08 pm       HK News Desk   ದೇಶ - ವಿದೇಶ

ಪತಂಜಲಿ ಸಂಸ್ಥೆಯ ಜನರನ್ನು ದಾರಿತಪ್ಪಿಸುವ ರೀತಿಯ ಜಾಹೀರಾತು ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬಾಬಾ ರಾಮದೇವ್ ಮತ್ತು ಸಂಸ್ಥೆಯ ಡೈರೆಕ್ಟರ್ ಸಲ್ಲಿಸಿದ್ದ ಬೇಷರತ್ ಕ್ಷಮೆ ಯಾಚನೆಯನ್ನು ನಿರಾಕರಿಸಿದ್ದು, ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

ನವದೆಹಲಿ, ಎ.10: ಪತಂಜಲಿ ಸಂಸ್ಥೆಯ ಜನರನ್ನು ದಾರಿತಪ್ಪಿಸುವ ರೀತಿಯ ಜಾಹೀರಾತು ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬಾಬಾ ರಾಮದೇವ್ ಮತ್ತು ಸಂಸ್ಥೆಯ ಡೈರೆಕ್ಟರ್ ಸಲ್ಲಿಸಿದ್ದ ಬೇಷರತ್ ಕ್ಷಮೆ ಯಾಚನೆಯನ್ನು ನಿರಾಕರಿಸಿದ್ದು, ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

ನೀವು ತಪ್ಪು ದಾರಿಯಲ್ಲಿ ಹೋದ ಬಳಿಕ ಕ್ಷಮೆ ಯಾಚಿಸುತ್ತಿದ್ದೀರಿ. ನಿಮ್ಮ ವರ್ತನೆಯನ್ನು ತಿಳಿಯದಷ್ಟು ಕುರುಡರು ನಾವಲ್ಲ. ಇದನ್ನೆಲ್ಲ ಒಪ್ಪಿಕೊಳ್ಳಲು ನಾವು ಅಷ್ಟು ಉದಾರವಾದಿಯೂ ಆಗಿಲ್ಲ ಎಂದು ಹಿಮಾ ಕೊಹ್ಲಿ ಮತ್ತು ಎ. ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಪ್ರಶ್ನೆ ಮಾಡಿದೆ. ಕೋರ್ಟ್ ಈ ಕುರಿತ ವಿಚಾರಣೆಯನ್ನು ಎಪ್ರಿಲ್ 16ಕ್ಕೆ ಮುಂದೂಡಿದೆ.

ನೀವು ಕಾಗದದಲ್ಲಿ ಕ್ಷಮೆ ಯಾಚನೆ ಮಾಡಿದ್ದೀರಿ. ಆದರೆ ನಿಮ್ಮ ಬೆನ್ನು ಗೋಡೆಯ ವಿರುದ್ಧವಾಗಿದೆ. ನಾವಿದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಉದ್ದೇಶಪೂರ್ವಕವಾಗಿ ನಿಯಮಗಳ ಉಲ್ಲಂಘನೆ ಮಾಡಿದ್ದೀರಿ ಎಂದು ನ್ಯಾಯಾಧೀಶರು ಆಕ್ಷೇಪಿಸಿದ್ದಾರೆ. ನೀವು ಮೊದಲು ಮಾಧ್ಯಮಕ್ಕೆ ಜಾಹೀರಾತು ಕೊಟ್ಟಿದ್ದಿರಿ. ಆನಂತರ, ಕೋರ್ಟಿನ ಮುಂದೆ ತಪ್ಪಾಗಿದೆ ಎನ್ನುತ್ತಿದ್ದೀರಿ. ನಿಮಗೆ ಲೈಸನ್ಸ್ ನೀಡಿರುವ ಅಥಾರಿಟಿಯ ಮೌನವ್ನು ಪ್ರಶ್ನಿಸಬೇಕಾಗಿದೆ. ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ಲೈಸನ್ಸ್ ಅಥಾರಿಟಿ ಸುಮ್ಮನಿರುವುದನ್ನು ಒಪ್ಪತಕ್ಕದ್ದಲ್ಲ ಎಂದು ನ್ಯಾಯಾಧೀಶರು ಕೇಂದ್ರ ಸರಕಾರದ ನಡೆಯನ್ನು ಆಕ್ಷೇಪಿಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಪತಂಜಲಿ ಸಂಸ್ಥೆಯಿಂದ ನೀಡಿದ್ದ ಔಷಧಿಗಳು ಪರಿಣಾಮಕಾರಿ ಎಂದು ಮಾಧ್ಯಮಗಳಲ್ಲಿ ಜಾಹೀರಾತು ನೀಡಿರುವುದನ್ನು ಆಕ್ಷೇಪಿಸಿ ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಕೆಳಗಿನ ಕೋರ್ಟಿನಲ್ಲಿ ವಿಚಾರಣೆ ನಡೆದು ಈಗ ಸುಪ್ರೀಂ ಕೋರ್ಟಿನಲ್ಲಿ ವಾದ- ಪ್ರತಿವಾದ ಆಗುತ್ತಿದೆ. ಇಂತಹ ಜಾಹೀರಾತು ನೀಡುವುದಕ್ಕೆ ಅಥವಾ ಆಯುರ್ವೇದಿಕ್ ಔಷಧಿ ನೀಡುವುದಕ್ಕೆ ಕೇಂದ್ರ ಸರಕಾರ ಹೇಗೆ ಅನುಮತಿ ನೀಡಿದೆ ಎನ್ನುವ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಮುಂದಿಟ್ಟಿದೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳು ಅಧಿಕೃತ ಎನ್ನುವಂತೆ ಬಿಂಬಿಸಿದ್ದು, ಆ ಬಗ್ಗೆ ಕೇಂದ್ರ ಸರಕಾರ ಮೌನ ವಹಿಸಿರುವುದು ಈಗ ಕೋರ್ಟಿನಲ್ಲಿ ಜಟಾಪಟಿಗೆ ಕಾರಣವಾಗಿದೆ.

The Supreme Court on Wednesday rejected the "unconditional and unqualified apology" offered by Patanjali Ayurved co-founder Baba Ramdev and his close aide Acharya Balkrishna in connection with the company’s misleading advertisements, asserting that the court does not want to be “so generous in this case.”