ಬ್ರೇಕಿಂಗ್ ನ್ಯೂಸ್
12-04-24 08:16 pm HK NEWS ದೇಶ - ವಿದೇಶ
ನವದೆಹಲಿ, ಎ.12: ಇಸ್ರೇಲ್ ಮೇಲೆ ಇನ್ನೆರಡು ದಿನದಲ್ಲಿ ಇರಾನ್ ಭಾರೀ ದೊಡ್ಡ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಲು ಸಜ್ಜಾಗಿದೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದರ ಬೆನ್ನಲ್ಲೆ ಅಮೆರಿಕ, ಭಾರತ ಸೇರಿದಂತೆ ತನ್ನ ಪ್ರಜೆಗಳನ್ನು ಇಸ್ರೇಲ್ ಮತ್ತು ಇರಾನ್ ದೇಶಕ್ಕೆ ತೆರಳದಂತೆ ಸೂಚನೆ ನೀಡಿದೆ.
ಇರಾನ್ ದೇಶದ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖೊಮೇನಿ ನೇರ ಉಸ್ತುವಾರಿಯಲ್ಲೇ ಆ ದೇಶ ಯುದ್ಧಕ್ಕೆ ರೆಡಿಯಾಗುತ್ತಿದೆ ಎನ್ನಲಾಗುತ್ತಿದ್ದು, ಜಾಗತಿಕ ರಾಷ್ಟ್ರಗಳ ಒತ್ತಡ. ಅದರಿಂದಾಗುವ ಅಪಾಯದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಅಯಾತೊಲ್ಲಾ ಖೊಮೇನಿ ಅವರ ಸಲಹೆಗಾರರ ಆಪ್ತ ವ್ಯಕ್ತಿಯೊಬ್ಬರು ಹೇಳಿದ್ದಾರೆ ಎಂಬ ಮಾಹಿತಿ ಆಧರಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇಸ್ರೇಲ್, ಗಾಜಾ ಪಟ್ಟಿ ಮತ್ತು ಹಮಾಸ್ ಉಗ್ರರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದರಿಂದ ಇರಾನ್ ದೇಶವು ಪದೇ ಪದೇ ಎಚ್ಚರಿಕೆ ಕೊಡುತ್ತಲೇ ಬಂದಿತ್ತು. ಇತ್ತೀಚೆಗೆ ಇರಾನ್ ದೇಶದ ವ್ಯಾಪ್ತಿಯ ಸಿರಿಯಾ ಭಾಗದ ಡಮಾಸ್ಕಸ್ ನಗರದ ಕಾನ್ಸುಲೇಟ್ ಒಂದಕ್ಕೆ ದಾಳಿ ನಡೆಸಲಾಗಿತ್ತು. ಅದರಲ್ಲಿ ಇರಾನ್ ದೇಶದ ಪ್ರಮುಖ ನಾಯಕ ಮತ್ತು ಆರು ಮಂದಿ ಮಿಲಿಟರಿ ವ್ಯಕ್ತಿಗಳು ಸಾವನ್ನಪ್ಪಿದ್ದರು.
ಡಮಾಸ್ಕಸ್ ಮೇಲಿನ ದಾಳಿಯನ್ನು ಇಸ್ರೇಲ್ ಮಾಡಿದೆ ಎಂದು ಇರಾನ್ ಆರೋಪ ಮಾಡಿತ್ತು. ಆದರೆ ಇಸ್ರೇಲ್ ಆ ದಾಳಿಯನ್ನು ನಿರಾಕರಿಸಿದ್ದೂ ಇಲ್ಲ, ಒಪ್ಪಿಕೊಂಡಿದ್ದೂ ಇಲ್ಲ. ಹೀಗಾಗಿ ಇಸ್ರೇಲ್ ಆ ದಾಳಿಯ ಹಿಂದೆ ಇದೆ ಎನ್ನುವ ಮಾತು ಮುಸ್ಲಿಂ ರಾಷ್ಟ್ರಗಳಿಂದ ಕೇಳಿಬಂದಿತ್ತು. ಇಸ್ರೇಲಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅದು ಆಗಿಯೇ ತೀರುತ್ತೆ ಎಂದು ಡಮಾಸ್ಕಸ್ ದಾಳಿಯ ಬಳಿಕ ಇರಾನ್ ನಾಯಕ ಅಯೊತೊಲ್ಲಾ ಖೊಮೇನಿ ಹೇಳಿದ್ದರು.
ಇದೇ ವೇಳೆ, ಬಿಬಿಸಿ ಸಂಸ್ಥೆಯ ಯುಎಸ್ ಪಾಲುದಾರ ಸಿಬಿಎಸ್ ನ್ಯೂಸ್, ಇರಾನ್ ದಾಳಿ ಬಹುತೇಕ ಶುಕ್ರವಾರದ ಹೊತ್ತಿಗೆ ಆಗುವ ಸಾಧ್ಯತೆ ಇದೆಯೆಂದು ವರದಿ ಮಾಡಿದೆ. ನೂರಕ್ಕೂ ಹೆಚ್ಚು ಡ್ರೋಣ್, ಡಜನ್ ಗೂ ಹೆಚ್ಚು ಕ್ರೂಸ್ ಮಿಸೈಲ್ ಮತ್ತು ಬ್ಯಾಲಿಸ್ಟಿಕ್ ಮಿಸೈಲ್ ಇಸ್ರೇಲ್ ಮೇಲೆ ಟಾರ್ಗೆಟ್ ಮಾಡಲಿದೆ ಎಂದು ಅಮೆರಿಕದ ಇಬ್ಬರು ಸೇನಾಧಿಕಾರಿಗಳ ಹೇಳಿಕೆ ಅಧರಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
Iran is likely to launch a direct attack on Israel within the next 48 hours and the Jewish nation is preparing for it, according to a report. The Wall Street Journal reported on Friday, citing a person who had been briefed by the Iranian leadership.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm