ಬ್ರೇಕಿಂಗ್ ನ್ಯೂಸ್
13-04-24 09:17 pm HK NEWS ದೇಶ - ವಿದೇಶ
ನವದೆಹಲಿ, ಎ.13: ಪಾಕಿಸ್ಥಾನ- ಅಫ್ಘಾನಿಸ್ತಾನ ಗಡಿಭಾಗದ ಖೈಬರ್ ಪಂಕ್ತುಖ್ವಾ ಪ್ರಾಂತ್ಯದಲ್ಲಿದ್ದ ಅತಿ ಪುರಾತನ ಬೃಹತ್ ಹಿಂದು ದೇವಾಲಯವನ್ನು ನೆಲಸಮ ಮಾಡಲಾಗಿದೆ.
ಕೇದಾರನಾಥ ದೇವಾಲಯ ಮಾದರಿಯ ಗೋಪುರವುಳ್ಳ ಬೃಹತ್ ದೇವಸ್ಥಾನ 1947ರಿಂದಲೇ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಸ್ವಾತಂತ್ರ್ಯ ಕಾಲದಲ್ಲಿ ಭಾರತ- ಪಾಕಿಸ್ಥಾನ ವಿಂಗಡಣೆಯಾದಾಗ ಎರಡೂ ರಾಷ್ಟ್ರಗಳಿಂದ ಬಹಳಷ್ಟು ಹಿಂದು- ಮುಸ್ಲಿಮರು ಅತ್ತಿತ್ತ ವಲಸೆ ಹೋಗಿದ್ದರು. ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಹಿಂದುಗಳೂ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದರು. ದೇವಸ್ಥಾನ ಮತ್ತು ಗೋಪುರ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಸ್ಥಳೀಯ ಕಿಡಿಗೇಡಿಗಳು ಗೋಪುರದ ಇಟ್ಟಿಗೆ, ಕಲ್ಲುಗಳನ್ನು ಒಂದೊಂದಾಗಿಯೇ ಒಡೆದು ವಿಘ್ನಗೊಳಿಸಿದ್ದರೂ ಬೃಹತ್ ದೇವಸ್ಥಾನದ ಮಾದರಿ ಉಳಿದಿತ್ತು.
ಲಾಂಡಿ ಕೋಟಾಲ್ ಬಾಝಾರ್ ಎನ್ನುವ ಪ್ರದೇಶದಲ್ಲಿದ್ದ ದೇವಸ್ಥಾನವನ್ನು ಇದೀಗ ಪೂರ್ತಿ ನೆಲಸಮ ಮಾಡಲಾಗಿದ್ದು, ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸ್ಥಳೀಯರು ಮುಂದಾಗಿದ್ದಾರೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮ ಮಾಡಿದ್ದಕ್ಕೆ ಪ್ರತಿಯಾಗಿ ಈ ದೇವಸ್ಥಾನವನ್ನೂ ಕೆಡವಿ ಹಾಕಲು ಕಿಡಿಗೇಡಿಗಳು ಮುಂದಾಗಿದ್ದರು. ಕಲ್ಲಿನ ಬೃಹತ್ ಶಿಲಾಮಂದಿರ ಆಗಿದ್ದರಿಂದ ಅರೆಬರೆಯಾಗಿ ದೇವಸ್ಥಾನದ ಗೋಪುರ ಉಳಿದುಕೊಂಡಿತ್ತು. ಸ್ಥಳೀಯರು ಖೈಬರ್ ಟೆಂಪಲ್ ಎಂದೇ ಉಲ್ಲೇಖ ಮಾಡುತ್ತಿದ್ದರು.
ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಪಟ್ಟ ಸ್ಮಾರಕಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಪಾಕಿಸ್ತಾನದಲ್ಲಿಯೂ ಕಾನೂನು ಇದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ಪಾಕಿಸ್ತಾನ್ ಹಿಂದು ಮಂದಿರ ಮ್ಯಾನೇಜ್ಮೆಂಟಿನ ಹಾರೂನ್ ಸಾರಬ್ದಿಯಾಲ್ ಹೇಳಿದ್ದಾರೆ. ಸ್ಥಳೀಯ ಜಿಲ್ಲಾಡಳಿತ ದಾಖಲೆಯಲ್ಲಿ ಇಂದು ಮಂದಿರವೆಂದು ಉಲ್ಲೇಖ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಡಾನ್ ಪತ್ರಿಕೆ ಮತ್ತು ಭಾರತದ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
A historical Hindu temple near the Pakistan-Afghanistan border has been demolished and construction for a commercial complex has started at the site in the Khyber Pakhtunkhwa province that was closed since 1947 when the original occupants migrated to India.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm