Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ ಹೋದ ದುಬೈ ; ಏರ್‌ಪೋರ್ಟ್‌, ಹೆದ್ದಾರಿಗಳಲ್ಲಿ ನೀರೋ ನೀರು, ಒಮಾನ್‌ನಲ್ಲಿ ಮೇಘ ಸ್ಫೋಟ, ದಿಢೀರ್‌ ಪ್ರವಾಹಕ್ಕೆ 19 ಜನರ ಸಾವು

17-04-24 12:53 pm       HK News Desk   ದೇಶ - ವಿದೇಶ

ವಿಶ್ವದ ಅತ್ಯಂತ ಜನದಟ್ಟಣೆಯ ವಿಮಾನ ನಿಲ್ದಾಣವೆಂದೇ ಹೆಸರಾಗಿರುವ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈ ವ್ಯಾಪ್ತಿಯಲ್ಲಿರುವ ಹೈವೇಗಳು ಹಾಗೂ ಹಲವಾರು ರಸ್ತೆಗಳು ಜಲಾವೃತವಾಗಿವೆ.

ದುಬೈ, ಏ 17: ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ವಿಶ್ವದ ಅತ್ಯಂತ ಜನದಟ್ಟಣೆಯ ವಿಮಾನ ನಿಲ್ದಾಣವೆಂದೇ ಹೆಸರಾಗಿರುವ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈ ವ್ಯಾಪ್ತಿಯಲ್ಲಿರುವ ಹೈವೇಗಳು ಹಾಗೂ ಹಲವಾರು ರಸ್ತೆಗಳು ಜಲಾವೃತವಾಗಿವೆ.

Dubai Airport Diverts Flights As Heavy Rains Lash UAE; Met Office Issues  Red Alert - News18

Dubai flooding amid atypical heavy rains snarls traffic on UAE roads and  airport runways - CBS News

ಮಂಗಳವಾರ ಸಂಜೆಯವರೆಗೆ ಅಲ್ಲಿ ಮಳೆಯ ಸುಳಿವೇ ಇರಲಿಲ್ಲ. ಆದರೆ, ರಾತ್ರಿಯಾಗುತ್ತಿದ್ದಂತೆ ನಿಧಾನವಾಗಿ ಶುರುವಾದ ಮಳೆ, ನೋಡನೋಡುತ್ತಿದ್ದಂತೆ ಮುಸಲಧಾರೆಯ ಸ್ವರೂಪ ಪಡೆಯಿತು. ಮೊದಲು ತಗ್ಗು ಪ್ರದೇಶಗಳು ಜಲಾವೃತಗೊಂಡರೆ, ಆನಂತರದಲ್ಲಿ ಇತರ ಸಮತಟ್ಟಾದ ಪ್ರಾಂತ್ಯಗಳಲ್ಲಿಯೂ ನೀರು ನಿಲ್ಲಲಾರಂಭಿಸಿತು. ನಿಧಾನವಾಗಿ ನಗರಗಳಲ್ಲಿನ ರಸ್ತೆಗಳು, ಫುಟ್ ಪಾತ್ ಗಳು, ನಗರದಾಚೆಗಿನ ರಸ್ತೆಗಳು, ಹೈವೇಗಳು ಎಲ್ಲವೂ ಜಲಾವೃತವಾದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Watch: Dubai Airport runway submerged as heavy rains lash UAE

Heavy rain hits UAE, schools and offices shut due to waterlogged roads. Dubai  airport witnesses flight disruptions | World News - Hindustan Times

ಅಸಲಿಗೆ, ಮಂಗಳವಾರ ಮಳೆ ಬರಬಹುದೆಂದು ಅಲ್ಲಿನ ಹವಾಮಾನ ಇಲಾಖೆ ಮೊದಲೇ ಅಂದಾಜಿಸಿತ್ತು. ಮಂಗಳವಾರದಂದು ಪ್ರಾಯಶಃ 30 ಮಿಲಿಮೀಟರ್ ನಷ್ಟು (1 ಇಂಚು) ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆ ಕುರಿತಂತೆ ಸಾರ್ವಜನಿಕ ಪ್ರಕಟಣೆಯನ್ನೂ ನೀಡಲಾಗಿತ್ತು. 30 ಮಿ.ಮೀ.ನಷ್ಟು ಮಳೆ ಎಂದಾದಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಮಂಗಳವಾರ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಅಂದರೆ 128 ಮಿ.ಮೀಟರ್ ನಷ್ಟು (5 ಇಂಚು) ಮಳೆಯಾಗಿದೆ.

ಮಳೆಯ ಆರ್ಭಟದಿಂದಾಗಿ ಯುಎಇನ ಹಲವಾರು ನಗರಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತಿದ್ದಂತೆ, ಅಲ್ಲಿನ ಸರ್ಕಾರ ಒಂದೆರಡು ದಿನಗಳ ಮಟ್ಟಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಶಾಲೆಗಳು ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಒಮಾನ್‌ನ ಮಸ್ಕತ್‌ನಲ್ಲಿ ವರುಣನ ಅಬ್ಬರಕ್ಕೆ ಜನರು ಕಂಗಾಲಾಗಿದ್ದಾರೆ. ಭಾನುವಾರ ಸುರಿದ ಭಾರೀ ಮಳೆಯಿಂದ ದಿಢೀರ್‌ ಪ್ರವಾಹ ಉಂಟಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ಸುಲ್ತಾನೇಟ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ 19ಕ್ಕೆ ಏರಿದ್ದು, ಮೃತಪಟ್ಟವರಲ್ಲಿ 12 ಮಕ್ಕಳು ಕೂಡ ಇವೆ.

ದಿಢೀರ್‌ ಪ್ರವಾಹದ ಹಿನ್ನೆಲೆ ಮಸ್ಕತ್‌ನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಲ್ಲಿ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಮುಸಾಂದಮ್‌, ಬ್ಯೂರೈಮಿ, ಧಾಹಿರಾ, ಉತ್ತರ ಬಾತಿನಾ ಹಾಗೂ ದಾಖಿಲ್ಯಾ ಪ್ರದೇಶಗಳಲ್ಲಿ ಮಂಗಳವಾರ ರಿಮೋಟ್‌ ವರ್ಕ್‌ ಪಾಲಿಸಿಯನ್ನು ತರಲಾಗಿದೆ. ಇನ್ನು, ಮುನ್ನೆಚ್ಚರಿಕೆ ಕ್ರಮವಾಗಿ ಮುಸಾಂಡಮ್‌ ಪ್ರದೇಶದ ಕಮ್ಜಾರ್‌ ಮತ್ತು ಮಿಮಾ ಗ್ರಾಮಗಳ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

 United Arab Emirates (AP) — Heavy thunderstorms lashed the United Arab Emirates on Tuesday, dumping the heaviest rain ever recorded in the country in the span of hours as it flooded out portions of major highways and Dubai’s international airport.