ಬ್ರೇಕಿಂಗ್ ನ್ಯೂಸ್
02-12-20 12:30 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.2: ದೇಶಾದ್ಯಂತ ಉಚಿತವಾಗಿ ಕೊರೊನಾ ಲಸಿಕೆ ಸಿಗುತ್ತದೆ ಎನ್ನುವ ಕಾತರದ ನಡುವೆಯೇ ಕೇಂದ್ರ ಸರಕಾರ ಎಲ್ಲರಿಗೂ ಲಸಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದಿಗೂ ಹೇಳಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಕೊರೊನಾ ಹರಡುವುದನ್ನು ನಿಲ್ಲಿಸುವುದಷ್ಟೇ ಉದ್ದೇಶ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಅಗತ್ಯ ಬರುವುದಿಲ್ಲ. ನಿರ್ಣಾಯಕ ಹಂತದ ಜನರಿಗೆ ಲಸಿಕೆ ನೀಡಿ, ವೈರಸ್ ಹರಡುವುದನ್ನು ತಪ್ಪಿಸಲು ಯಶಸ್ವಿಯಾದರೆ ನಾವು ಇಡೀ ದೇಶದ ಜನರಿಗೆ ಲಸಿಕೆ ನೀಡಿದಂತೆ ಎಂದು ಐಸಿಎಂಆರ್ ಅಧ್ಯಕ್ಷ ಬಲರಾಮ್ ಭಾರ್ಗವ ಮತ್ತು ಆರೋಗ್ಯ ಇಲಾಖೆ ಕಾರ್‍ಯದರ್ಶಿ ರಾಜೇಶ್ ಭೂಪನ್ ಹೇಳಿದ್ದಾರೆ.
ಈ ಹಿಂದೆ ಪ್ರಧಾನಿ ಮೋದಿ, ದೇಶದ ಪ್ರತಿಯೊಬ್ಬರಿಗೂ ಲಸಿಕೆ ಮುಟ್ಟಿಸಲಾಗುವುದು ಎಂದು ಹೇಳಿದ್ದರು. ಆದರೆ, ಆರೋಗ್ಯ ಸಚಿವಾಲಯದ ಪ್ರಕಾರ, ಆರೋಗ್ಯವಂತರಿಗೆ ಲಸಿಕೆ ನೀಡುವ ಅಗತ್ಯವಿಲ್ಲ ಎನ್ನುವುದನ್ನು ಹೇಳಿದೆ. ಇದೇ ವೇಳೆ, ಅಮೆರಿಕ ಮೂಲದ ಎರಡು ಕಂಪನಿಗಳು ಲಸಿಕೆ ಸಿದ್ಧಪಡಿಸಿದ್ದು, ತುರ್ತು ವಿತರಣೆಗಾಗಿ ಸರಕಾರದ ಮುಂದೆ ಪ್ರಸ್ತಾಪ ಇಟ್ಟಿದೆ. ಮಾಡ್ರಾನಾ ಮತ್ತು ಫೈಜರ್ ಕಂಪನಿಗಳು ವರ್ಷಾಂತ್ಯದ ವೇಳೆಗೆ 4 ಕೋಟಿ ಲಸಿಕೆಗಳು ರೆಡಿ ಮಾಡಲಿವೆ ಎನ್ನಲಾಗುತ್ತಿದೆ.
ಸೋಂಕಿತರ ಪ್ರಮಾಣ ತೀವ್ರ ಇಳಿಕೆ
ಇದೇ ವೇಳೆ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಇಳಿಮುಖದಲ್ಲಿದೆ. ಶೇ.7.15ರಷ್ಟಿದ್ದ ಪಾಸಿಟಿವ್ ಪ್ರಮಾಣ ಈಗ 6.69ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸರಾಸರಿ ದಿನಕ್ಕೆ 31 ಸಾವಿರಕ್ಕೆ ಇಳಿದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 94.43 ಲಕ್ಷಕ್ಕೆ ಏರಿದೆ. ಒಟ್ಟು 1.37 ಲಕ್ಷ ಸೋಂಕಿತರು ಮರಣ ಹೊಂದಿದ್ದರೆ, 88.88 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯಕ್ಕೆ 4.34 ಲಕ್ಷ ಮಂದಿ ಸಕ್ರಿಯ ಸೋಂಕಿತರಿದ್ದಾರೆ.
ಗರಿಷ್ಠ ದರ 800 ರೂ.ಗೆ ಇಳಿಕೆ
ಕೊರೊನಾ ಸೋಂಕಿನ ಪರೀಕ್ಷೆಗಳಿಗೂ ಗರಿಷ್ಠ ದರವನ್ನು ಹಲವು ರಾಜ್ಯಗಳು ಕಡಿಮೆ ಮಾಡಿವೆ. ಗುಜರಾತ್ ನಲ್ಲಿ ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷಾ ದರವನ್ನು 800ಕ್ಕೆ ಇಳಿಸಲಾಗಿದೆ. ದೆಹಲಿಯಲ್ಲೂ ಖಾಸಗಿ ಲ್ಯಾಬ್ ಗಳಲ್ಲಿ ಗರಿಷ್ಠ ದರವನ್ನು 800 ರೂ.ಗೆ ನಿಗದಿ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿಯೂ ಆರ್ ಟಿ- ಪಿಸಿಆರ್ ಪರೀಕ್ಷೆಯ ದರವನ್ನು 700 ರೂ.ಗೆ ಗರಿಷ್ಠ ದರವೆಂದು ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ಕೊರೊನಾ ಪರೀಕ್ಷೆಗೆ ಗರಿಷ್ಠ 2500 ರೂ. ಪಡೆಯುತ್ತಿದ್ದವು. ಅವನ್ನು ಕಳೆದ ಸೆಪ್ಟಂಬರ್ ತಿಂಗಳಲ್ಲಿ 1600 ರೂ.ಗೆ ಕೇಂದ್ರ ಸರಕಾರ ಇಳಿಕೆ ಮಾಡಿತ್ತು.
Government has never spoken about vaccinating everyone, against COVID, said Health Secretary Rajesh Bhushan on Tuesday, speaking at a press conference in the national capital. He added that it is important to discuss such scientific issues based on factual information only.
20-10-25 04:00 pm
HK News Desk
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 10:32 pm
Mangalore Correspondent
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
20-10-25 12:25 pm
Mangalore Correspondent
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm