ವಾರಾಣಸಿಯಲ್ಲಿ 6 ಕಿಲೋ ಮೀಟರ್‌ ದೂರದವರೆಗೂ ಮೋದಿ ಅದ್ದೂರಿ ರೋಡ್‌ಶೋ ; ಮಂಗಳವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಶಕ್ತಿಪ್ರದರ್ಶನ 

13-05-24 07:56 pm       HK News Desk   ದೇಶ - ವಿದೇಶ

ಬಿಹಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಮುಗಿಸಿ ವಾರಾಣಸಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ಶೋ ನಡೆಸಿದರು. ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ವಾರಾಣಸಿ, ಮೇ 13: ಬಿಹಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಮುಗಿಸಿ ವಾರಾಣಸಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ಶೋ ನಡೆಸಿದರು. ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್‌ಶೋ ನಡೆಸಿರುವ ಮೋದಿಗೆ ಅಪಾರ ಜನ ಬೆಂಬಲ ವ್ಯಕ್ತವಾಗಿದೆ. ರೋಡ್‌ಶೋ ಆರಂಭದಲ್ಲಿ ಅವರು ಪಂಡಿತ್‌ ಮದನ್‌ ಮೋಹನ್‌ ಮಾಳವಿಯಾ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ವಾರಾಣಸಿಯ ಹಾಲಿ ಸಂಸದರಾಗಿರುವ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಇದೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

PM Modi Roadshow Live: तीसरी बार वाराणसी से चुनावी हुंकार भरने की तैयारी  में पीएम मोदी, थोड़ी देर में करेंगे रोडशो - pm modi varanasi roadshow live  updates lok sabha chunav ...

PM Modi Varanasi Roadshow LIVE: BJP state president Bhupendra Singh  Chaudhary joins PM Modi, Yogi Adityanath

PM Modi holds roadshow in Varanasi - The Hindu

Kashi is special': PM Modi holds mega roadshow in Varanasi amid sea of  crowd, showering petals | Watch | Mint

PM Modi offers prayer at Kashi Vishwanath temple in Varanasi after massive  roadshow | WATCH – India TV

Lok Sabha Election 2024 Live Updates Pm Narendra Modi Road Show In Kashi  Varanasi News In Hindi - Amar Ujala Hindi News Live - Pm Modi In Varanasi  Live:विश्वनाथ धाम से निकले

ಸೋಮವಾರದ ರೋಡ್‌ಶೋನಲ್ಲಿ ಮೋದಿ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಾಥ್‌ ಕೊಟ್ಟರು. ಮೋದಿ ಅವರು ಸಾಗುವ ಹಾದಿಯುದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೆರವಣಿಗೆಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮುಂಚೂಣಿಯಲ್ಲಿದ್ದರು. ಮರಾಠಿ, ಗುಜರಾತಿ, ತಮಿಳರು, ಬೆಂಗಾಲಿ, ಮಹೇಶ್ವರಿ, ಮಾರವಾಡಿಗಳು, ಪಂಜಾಬಿಗಳು ಸೇರಿದಂತೆ ಇತರೆ ಸಮುದಾಯದವರು ರೋಡ್‌ಶೋ ಉದ್ದಕ್ಕೂ 11 ವಲಯಗಳಲ್ಲಿ ಮೋದಿ ಅವರಿಗೆ ವಿಶೇಷ ಸ್ವಾಗತ ಕೋರಿದರು.

PM Modi Varanasi Visit Live: PM मोदी लंका चौक से रोड शो शुरू, रथ पर CM योगी  भी मौजूद - PM narendra modi live varanasi visit pm modi road show in uttar

ಕಣ್ಣು ಹಾಯಿಸುವಷ್ಟು ದೂರದಲ್ಲೂ ಕೇಸರಿ ಧ್ವಜಗಳ, ಬಲೂನ್‌, ಬ್ಯಾನರ್‌ಗಳು ಕಾಣುತ್ತಿದ್ದವು. ವಾರಾಣಸಿಯ ಲಂಕಾ ಚೌಕದಿಂದ ಸುಮಾರು 6 ಕಿಲೋ ಮೀಟರ್‌ ದೂರದವರೆಗೂ ಮೋದಿ ರೋಡ್‌ಶೋ ನಡೆಸಿದರು. ವಾರಾಣಸಿಯಲ್ಲಿಯೇ ರಾತ್ರಿ ಉಳಿಯಲಿರುವ ಮೋದಿ, ಮಂಗಳವಾರ ಬೆಳಿಗ್ಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸ ಬಳಿಕ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಜೂನ್‌ 1ರಂದು ಕೊನೆಯ ಹಂತದಲ್ಲಿ ಮತದಾನ ನಿಗದಿಯಾಗಿದೆ. ಮೋದಿ ಅವರು ವಾರಾಣಸಿಯಿಂದ ಎರಡು ಬಾರಿ ಗೆಲುವು ದಾಖಲಿಸಿದ್ದು ಮೂರನೇ ಬಾರಿಯೂ ಇಲ್ಲಿಂದಲೇ ಜನಾಭಿಪ್ರಾಯಕ್ಕೆ ಮುಂದಾಗಿದ್ದಾರೆ. ಕಣದಲ್ಲಿ ಕಾಂಗ್ರೆಸ್‌ನಿಂದ ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ.

The streets of Varanasi are set to witness a spectacle on Monday evening for a roadshow by Prime Minister Narendra Modi, who is poised to file his nomination for a third consecutive term from the parliamentary constituency, a day later.