ಪುಣೆ ಅಪಘಾತದಲ್ಲಿ ಟೆಕ್ಕಿಗಳ ಸಾವು ಪ್ರಕರಣ ; ತಂದೆಯ ಬಂಧನ ಬೆನ್ನಲ್ಲೇ 17 ವರ್ಷದ ಹುಡುಗನ ಜಾಮೀನು ರದ್ದು, ಆರೋಪಿಗೆ ರಿಮ್ಯಾಂಡ್ ಹೋಮ್

22-05-24 11:24 pm       HK News Desk   ದೇಶ - ವಿದೇಶ

ಪುಣೆಯಲ್ಲಿ ಪೋರ್ಶೆ ಕಾರನ್ನು ಅಪಘಾತ ಪಡಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣನಾದ ಬಾಲಕನಿಗೆ ನೀಡಿದ್ದ ಜಾಮೀನನ್ನು ಕೋರ್ಟ್ ರದ್ದುಗೊಳಿಸಿದ್ದು ಜೂನ್ 5ರ ವರೆಗೆ ರಿಮ್ಯಾಂಡ್ ಹೋಮ್ ನಲ್ಲಿರಿಸಲು ಆದೇಶ ಮಾಡಿದೆ. 

ಪುಣೆ, ಮೇ.22: ಪುಣೆಯಲ್ಲಿ ಪೋರ್ಶೆ ಕಾರನ್ನು ಅಪಘಾತ ಪಡಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣನಾದ ಬಾಲಕನಿಗೆ ನೀಡಿದ್ದ ಜಾಮೀನನ್ನು ಕೋರ್ಟ್ ರದ್ದುಗೊಳಿಸಿದ್ದು ಜೂನ್ 5ರ ವರೆಗೆ ರಿಮ್ಯಾಂಡ್ ಹೋಮ್ ನಲ್ಲಿರಿಸಲು ಆದೇಶ ಮಾಡಿದೆ. 

ಮದ್ಯದ ನಶೆಯಲ್ಲಿ ಐಷಾರಾಮಿ ಪೋರ್ಶೆ ಕಾರು ಓಡಿಸಿ ಇಬ್ಬರು ಟೆಕ್ಕಿಗಳ ಸಾವಿಗೆ 17 ವರ್ಷದ ಬಾಲಕ ಕಾರಣನಾಗಿದ್ದ. ಆದರೆ ಬಾಲನ್ಯಾಯ ಮಂಡಳಿ ಎರಡು ದಿನಗಳ ಹಿಂದೆ ಬಾಲಕನಿಗೆ ಜಾಮೀನು ಮಂಜೂರು ಮಾಡಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು. ಜಾಮೀನು ನೀಡಿದ್ದನ್ನು ವಿರೋಧಿಸಿ ರಾಜ್ಯ ಸರ್ಕಾರದಿಂದ ಜೆಜೆ ಆ್ಯಕ್ಟ್ 104 ಅಡಿ ಮರು ಪರಿಶೀಲನಾ ಅರ್ಜಿ ಹಾಕಿದ್ದು ಅದನ್ನು ಕೋರ್ಟ್ ಪರಿಗಣಿಸಿದೆ. ಅಲ್ಲದೆ, ಆರೋಪಿಗೆ 17.6 ವರ್ಷ ವಯಸ್ಸಾಗಿದ್ದು  ಮೇಜರ್ ಎಂದು ಪರಿಗಣಿಸಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದೆ. ಇದಕ್ಕೂ ಮೊದಲೇ ಆರೋಪಿ ಹುಡುಗನ ತಂದೆ ಪುಣೆಯಲ್ಲಿ ರಿಯಲ್ ಎಸ್ಟೇಟ್ ಡೆವಲಪರ್‌ ಉದ್ಯಮಿಯಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದರು. 

Pune Porsche Car Accident Case | JJB Cancels Bail Of Minor Accused, Remands  Him To Observation Home Till June 5

Mumbai Latest News: Today's Edition on Local Politics, Events & Bollywood  Entertainment - The Hindu

ಕೋರ್ಟ್ ಈ ಹಿಂದೆ 17 ವರ್ಷದ ಬಾಲಕನಿಗೆ ಜಾಮೀನು ನೀಡುವಾಗ ರಸ್ತೆ ಅಪಘಾತದ ಬಗ್ಗೆ ಪ್ರಬಂಧ ಬರೆಯಬೇಕು ಎಂದು ಹೇಳಿತ್ತು. ಅಲ್ಲದೆ, ಆರ್ ಟಿಓ ನಿಯಮಗಳ ಬಗ್ಗೆ ತಿಳಿಯಲು ಟ್ರಾಫಿಕ್ ಪೊಲೀಸರ ಜೊತೆಗೆ ಕೆಲಸ ಮಾಡಬೇಕು ಎಂದು ಹೇಳಿತ್ತು.

A juvenile court in Pune on Wednesday cancelled the bail granted to the 17-year-old boy involved in the car crash that killed two IT professionals on May 19.