ಟೆರರ್ ಫಂಡಿಂಗ್ ಕೇಸ್, ತಿಹಾರ್ ಜೈಲಿನಲ್ಲಿದ್ದೇ ಸ್ಪರ್ಧೆ ; ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಮಾಜಿ ಸಿಎಂ ಒಮರ್ ಅಬ್ದುಲ್ಲಾಗೆ ಸೋಲುಣಿಸಿದ ಇಂಜಿನಿಯರ್ ರಶೀದ್, ಪುತ್ರರಿಬ್ಬರ ಪ್ರಚಾರಕ್ಕೆ ಮತದಾರರು ಫಿದಾ

05-06-24 06:44 pm       HK News Desk   ದೇಶ - ವಿದೇಶ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಲ್ಲಿ ತಿಹಾರ್ ಜೈಲಿನಲ್ಲಿದ್ದುಕೊಂಡೇ ಪಕ್ಷೇತರ ಸ್ಪರ್ಧಿಸಿದ್ದ ಇಂಜಿನಿಯರ್ ರಶೀದ್ ಎದುರಲ್ಲಿ ಹೀನಾಯ ಸೋಲುಂಡಿದ್ದಾರೆ.

ನವದೆಹಲಿ, ಜೂನ್ 5: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಲ್ಲಿ ತಿಹಾರ್ ಜೈಲಿನಲ್ಲಿದ್ದುಕೊಂಡೇ ಪಕ್ಷೇತರ ಸ್ಪರ್ಧಿಸಿದ್ದ ಇಂಜಿನಿಯರ್ ರಶೀದ್ ಎದುರಲ್ಲಿ ಹೀನಾಯ ಸೋಲುಂಡಿದ್ದಾರೆ.

ಶೇಖ್ ಅಬ್ದುಲ್ ರಶೀದ್ ಎಂಬ ಹೆಸರಿನ ಈ ವ್ಯಕ್ತಿ ಬಾರಾಮುಲ್ಲಾದಲ್ಲಿ ಇಂಜಿನಿಯರ್ ರಶೀದ್ ಎಂದೇ ಪರಿಚಿತರು. 2019ರಲ್ಲಿ ಭಯೋತ್ಪಾದಕರಿಗೆ ಫಂಡಿಂಗ್ ಮಾಡಿದ ಆರೋಪದಲ್ಲಿ ಎನ್ಐಎ ಅಧಿಕಾರಿಗಳು ರಶೀದ್ ನನ್ನು ಬಂಧಿಸಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿ ಇಟ್ಟಿದ್ದಾರೆ. ಐದು ವರ್ಷಗಳಿಂದ ಜೈಲಿನಲ್ಲಿದ್ದರೂ, ಈ ಸಲದ ಲೋಕಸಭೆ ಚುನಾವಣೆಯನ್ನು ಅಲ್ಲಿಂದಲೇ ಎದುರಿಸಿದ್ದಾರೆ. ತಂದೆಯ ಪರವಾಗಿ ಇವರ ಇಬ್ಬರು ಪುತ್ರರು ಇಡೀ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದಾರೆ. ರಶೀದ್ ಪರ ಪ್ರಚಾರ ಸಭೆಗಳಲ್ಲಿ ಸೇರುತ್ತಿದ್ದ ಭಾರೀ ಜನಸಂಖ್ಯೆಯಿಂದಾಗಿ ಈ ಸಲ ಗೆಲ್ಲುವ ಭರವಸೆಯಲ್ಲಿ ಅವರ ಮಕ್ಕಳಿದ್ದರು. ಅಸ್ಟ್ರಾರ್ ರಶೀದ್ ಮತ್ತು ಅಬ್ರಾರ್ ರಶೀದ್ ಎಂಬ ಇಬ್ಬರು ಪುತ್ರರು ತಂದೆಯ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು ಜನರನ್ನು ಫಿದಾ ಮಾಡಿತ್ತು.  

ಚುನಾವಣೆ ಮತ ಎಣಿಕೆ ಮುಕ್ತಾಯಗೊಂಡಾಗ ಇಂಜಿನಿಯರ್ ರಶೀದ್ ಅವರು 2,04528 ಮತಗಳಿಂದ ಗೆಲುವು ಕಂಡಿದ್ದರು. ಮಾಜಿ ಸಿಎಂ, ಜಮ್ಮು ಕಾಶ್ಮೀರದ ಅನುಭವಿ ರಾಜಕಾರಣಿ ಒಮರ್ ಅಬ್ದುಲ್ಲಾ ತೀವ್ರ ಮುಖಭಂಗ ಅನುಭವಿಸಿದ್ದರು. ಬಾರಾಮುಲ್ಲಾದಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ರಶೀದ್ ಕಟ್ಟಡದ ಕೆಲಸ ಬಿಟ್ಟು 2008ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಅದಕ್ಕೂ ಮೊದಲು ಜೆಕೆಎಲ್ ಎಫ್ ಪ್ರತ್ಯೇಕವಾದಿ ಗುಂಪಿನ ನಾಯಕ ಅಬ್ದುಲ್ ಗನಿ ಲೋನ್ ಸಹವರ್ತಿಯಾಗಿದ್ದರು. 2008 ಮತ್ತು 2014ರಲ್ಲಿ ಲ್ಯಾಂಗೇಟ್ ಅಸೆಂಬ್ಲಿ ಕ್ಷೇತ್ರದಿಂದ ಪಕ್ಷೇತರ ಸ್ಪರ್ಧಿಸಿ ಶಾಸಕರಾಗಿದ್ದರು. 2019ರಲ್ಲಿಯೂ ಲೋಕಸಭೆ ಸ್ಪರ್ಧಿಸಿದ್ದು, ಸೋಲು ಕಂಡಿದ್ದರು.

Former Jammu and Kashmir chief minister and leader of the National Conference, Omar Abdullah conceded defeat from North Kashmir's Baramulla constituency as independent candidate Er Rashid. He lost by a margin of by 2,04,142 votes according to the Election Commission of India