Suresh Gopi, Annamalai: ಐತಿಹಾಸಿಕ ಸಮಾರಂಭಕ್ಕೆ ಎಂಟು ಸಾವಿರ ಗಣ್ಯರು ; ಮೋದಿ ಜೊತೆಗೆ 65 ಸಚಿವರು ಪ್ರಮಾಣ ಸಾಧ್ಯತೆ, ತಮಿಳುನಾಡಿಗೆ ಅಣ್ಣಾಮಲೈ, ಕೇರಳಕ್ಕೆ ಸುರೇಶ್ ಗೋಪಿ ಬ್ರಾಂಡ್, ಹಲವರಿಗೆ ಕೊಕ್, ಹೊಸಮುಖಕ್ಕೆ ಆದ್ಯತೆ  

09-06-24 04:56 pm       HK News Desk   ದೇಶ - ವಿದೇಶ

ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಐತಿಹಾಸಿಕ ಸಮಾರಂಭದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳಲಿದ್ದು, ಅದಕ್ಕಾಗಿ ಸಿದ್ಧತೆ ನಡೆಸಲಾಗಿದೆ.

ನವದೆಹಲಿ, ಜೂನ್ 8: ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಐತಿಹಾಸಿಕ ಸಮಾರಂಭದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳಲಿದ್ದು, ಅದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ದಕ್ಷಿಣ ಏಷ್ಯಾ ದೇಶಗಳ ನಾಯಕರು ದೆಹಲಿಗೆ ಆಗಮಿಸಿದ್ದು, ಮೋದಿ ಮೂರನೇ ಬಾರಿ ಪ್ರಧಾನಿಯಾಗುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ದೇಶ- ವಿದೇಶದ ಗಣ್ಯರನ್ನು ಸಮಾರಂಭಕ್ಕೆ ಕರೆಸಲಾಗಿದ್ದು, ಐತಿಹಾಸಿಕ ಸಮಾರಂಭ ಆಗಿಸುವ ದಿಸೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

ನರೇಂದ್ರ ಮೋದಿ ಜೊತೆಗೆ ಸುಮಾರು 65 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಲ್ಲರಿಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. 20 ಮಂದಿಯಷ್ಟು ಕೇಂದ್ರ ಸಚಿವರಾಗಿದ್ದವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಸ್ಮೃತಿ ಇರಾನಿ, ಭಗವಂತ್ ಖೂಬಾ ಸೇರಿದಂತೆ ಹಲವರು ಈ ಲಿಸ್ಟ್ ನಲ್ಲಿದ್ದಾರೆ. ಇವರಲ್ಲದೆ, ಹಿಂದಿನ ಬಾರಿ ಸಚಿವ ಸ್ಥಾನದಲ್ಲಿದ್ದ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್ ಠಾಕೂರ್ ಅವರಿಗೆ ಸಚಿವ ಸ್ಥಾನ ಸಿಗಲ್ಲ ಎನ್ನಲಾಗುತ್ತಿದೆ. ಉಳಿದಂತೆ, ಬಹುತೇಕ 25 ಮಂದಿಯಷ್ಟು ಈ ಹಿಂದೆ ಸಚಿವರಾಗಿದ್ದವರೇ ಈ ಬಾರಿಯೂ ಸಚಿವ ಸ್ಥಾನದಲ್ಲಿ ಇರಲಿದ್ದಾರೆ. ಪ್ರಮುಖ ಖಾತೆಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲಿದ್ದು, ಸಚಿವ ಖಾತೆ ಮಾತ್ರ ಅದಲು ಬದಲಾಗುವ ಸಾಧ್ಯತೆಯಿದೆ.

He Is Frustrated...': Piyush Goyal Hits Back At Rahul Gandhi Over His  'Biggest Stock Market Scam' Charges | Times Now

ಹಣಕಾಸು ಮಂತ್ರಿಯಾಗಿದ್ದ ನಿರ್ಮಲಾ ಸೀತಾರಾಮನ್ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದೇ ಇರುವುದರಿಂದ ಹಣಕಾಸು ಸಚಿವರಾಗಿ ಪಿಯೂಷ್ ಗೋಯಲ್ ಅವರನ್ನು ನೇಮಿಸುವ ಸಾಧ್ಯತೆಯಿದೆ. ರಕ್ಷಣೆ, ರೈಲ್ವೇ, ವಿದೇಶಾಂಗ, ಗೃಹ ಖಾತೆಯಲ್ಲಿ ಈ ಹಿಂದೆ ಇದ್ದ ಸಚಿವರೇ ಮುಂದುವರಿಯಲಿದ್ದಾರೆ. ನಿರ್ಮಲಾ ಖಾತೆ ಬದಲಾದರೆ, ಯಾವ ಖಾತೆ ವಹಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಇದೆ.

Nirmala Sitharaman takes exception to Stalin's 'migratory bird' jibe at PM  Modi

Murugha Mutt distances itself from Dingaleshwar Swami's allegations on Pralhad  Joshi | Bengaluru - Hindustan Times

ತುಮಕೂರು ಸಂಸದ ವಿ ಸೋಮಣ್ಣಗೆ ಜಾಕ್ ಪಾಟ್: ರಾಜ್ಯದಿಂದ ಐವರಿಗೆ ಕೇಂದ್ರ ಸಂಪುಟದಲ್ಲಿ  ಮಂತ್ರಿಗಿರಿ!

ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅನುಭವೀ ರಾಜಕಾರಣಿ ಆಗಿರುವುದರಿಂದ ಕ್ಯಾಬಿನೆಟ್ ದರ್ಜೆಯ ಸ್ಥಾನ ಪಡೆಯುವುದು ಖಚಿತ. ಉಳಿದಂತೆ, ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಷಿ ಅವರಿಗೂ ಸಂಪುಟ ದರ್ಜೆಯ ಖಾತೆ ಲಭಿಸುವ ಸಾಧ್ಯತೆಯಿದೆ. ಸೋಮಣ್ಣ, ಶೋಭಾ ರಾಜ್ಯ ಸಚಿವರಾಗುವ ಸಾಧ್ಯತೆ ಹೆಚ್ಚು. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷನಾಗಿರುವುದಲ್ಲದೆ, ಬಿಜೆಪಿಯನ್ನು ರಾಜ್ಯದಲ್ಲಿ ತಳಮಟ್ಟದಿಂದ ಮೇಲಕ್ಕೆತ್ತುವ ಜವಾಬ್ದಾರಿ ಹೊಂದಿದ್ದಾರೆ. ಈ ಬಾರಿ ಕೊಯಮತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಏನೂ ಇಲ್ಲದ ಬಿಜೆಪಿಯನ್ನು ಪೈಪೋಟಿ ನೀಡುವಷ್ಟರ ಮಟ್ಟಿಗೆ ತಂದಿದ್ದಾರೆ. ಇದಕ್ಕಾಗಿ ಸಚಿವ ಸ್ಥಾನ ನೀಡಿ, ಅಣ್ಣಾಮಲೈ ಮೂಲಕ ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಬಿಜೆಪಿಯನ್ನು ಬೆಳೆಸುವ ಟಾಸ್ಕ್ ನೀಡಲಿದ್ದಾರೆ.

High on win, Thrissur BJP MP Suresh Gopi wants to work for Tamil Nadu too

ಕೇರಳಕ್ಕೆ ಸುರೇಶ್ ಗೋಪಿ ಬ್ರಾಂಡ್

ಇದಲ್ಲದೆ, ಕೇರಳದಲ್ಲಿ ಇದೇ ಮೊದಲ ಬಾರಿಗೆ ತೃಶೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿರುವ ಮಲಯಾಳಂ ಚಿತ್ರನಟ ಸುರೇಶ್ ಗೋಪಿ ಸಚಿವ ಸ್ಥಾನಕ್ಕೇರುವುದು ಪಕ್ಕಾ ಆಗಿದೆ. ಆಮೂಲಕ ಕೇರಳದಲ್ಲಿ ಸುರೇಶ್ ಗೋಪಿ ಮೂಲಕ ಮಿಂಚು ಹರಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಹಿಂದೆ ಕೇರಳದಲ್ಲಿ ಅಸೆಂಬ್ಲಿ ಕ್ಷೇತ್ರವನ್ನು ಗೆದ್ದಿದ್ದರೂ, ಎಂಪಿ ಸ್ಥಾನ ಗೆದ್ದಿದ್ದು ಇರಲಿಲ್ಲ. ಇದೇ ಮೊದಲ ಬಾರಿ ಸುರೇಶ್ ಗೋಪಿ, ಸಿಪಿಎಂ ಮತ್ತು ಕಾಂಗ್ರೆಸನ್ನು ಸೋಲಿಸಿ ಕಮಲವನ್ನು ಅರಳಿಸಿದ್ದಾರೆ.

Boost to Congress President M Mallikarjun Kharge as son-in-law wins on home  turf of Gulbarga - The Economic Times

ಮೋದಿ ಪ್ರಮಾಣ ವಚನಕ್ಕೆ ಖರ್ಗೆ

ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸುವುದಿಲ್ಲ ಎನ್ನಲಾಗಿತ್ತು. ಆದರೆ, ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕರು ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಖರ್ಗೆ ಭಾಗವಹಿಸುವುದನ್ನು ಖಚಿತ ಪಡಿಸಲಾಗಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿರುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳಲಿದ್ದಾರೆ.

Modi oth taking ceremony, To Get 65 Ministers, kumarswami , Suresh Gopi To Take Oath As Minister, Mallikarjun Kharge in Swearing ceremony. Congress President Mallikarjun Kharge will attend Prime Minister Narendra Modi's swearing-in ceremony today. Mr Kharge will attend in his capacity as the Leader of the Opposition in the Rajya Sabha, the Congress said in a statement. This decision follows consultations with several INDIA bloc leaders yesterday.