ಆನ್ಲೈನಲ್ಲಿ ತರಿಸಿದ ಕೋನ್ ಐಸ್ ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ ! ಬೆರಳು ಕಂಡು ಹೌಹಾರಿದ ಡಾಕ್ಟರ್‌ ಮಹಿಳೆ 

13-06-24 03:15 pm       HK News Desk   ದೇಶ - ವಿದೇಶ

ಆನ್‌ಲೈನ್‌ನಲ್ಲಿ ಐಸ್ಕ್ರೀಂ ತರಿಸಿಕೊಂಡಿದ್ದ ಡಾಕ್ಟರ್ ಮಹಿಳೆಯೊಬ್ಬರು ಅದರಲ್ಲಿ ಮಾನವನ ಬೆರಳು ಕಂಡು ಹೌಹಾರಿದ್ದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ, ಜೂನ್ 13: ಆನ್‌ಲೈನ್‌ನಲ್ಲಿ ಐಸ್ಕ್ರೀಂ ತರಿಸಿಕೊಂಡಿದ್ದ ಡಾಕ್ಟರ್ ಮಹಿಳೆಯೊಬ್ಬರು ಅದರಲ್ಲಿ ಮಾನವನ ಬೆರಳು ಕಂಡು ಹೌಹಾರಿದ್ದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮಲಾಡ್ ನಲ್ಲಿ ಮನೆ ಹೊಂದಿರುವ ಮಹಿಳೆ ಆನ್‌ಲೈನ್‌ಲ್ಲಿ ಕೋನ್ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ತಿನ್ನುತ್ತಿದ್ದಾಗಲೇ ಅದರಲ್ಲಿ ಏನೋ ಒಣ ಬೀಜದ ರೀತಿ ಕಂಡಿದೆ. ಸರಿಯಾಗಿ ನೋಡಿದಾಗ, ಅದರಲ್ಲಿ ಉಗುರಿನ ರೀತಿ ಕಂಡಿತ್ತು. ತೆರೆದು ನೋಡಿದರೆ ಮನುಷ್ಯನ ಬೆರಳಿನ ತುಂಡು ಪತ್ತೆಯಾಗಿದೆ. ಬೆರಳು ನೋಡುತ್ತಲೇ ಗಾಬರಿಗೊಂಡ ಮಹಿಳೆ ಐಸ್‌ ಕ್ರೀಂ ಹಿಡಿದುಕೊಂಡೇ ಮಲಾಡ್ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಐಸ್‌ಕ್ರೀಂ ಸಹಿತ ಮಾನವನ ಬೆರಳು ಎನ್ನಲಾದ ತುಂಡನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಐಸ್ ಕ್ರೀಮ್ ತಯಾರಿಸಿ ಪ್ಯಾಕ್ ಮಾಡುವ ಸ್ಥಳವನ್ನೂ ಶೋಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಆನ್‌ಲೈನ್‌ನಲ್ಲಿ Yummo ಕಂಪನಿಯ ಐಸ್‌ಕ್ರೀಂ ಆರ್ಡರ್ ಮಾಡಿದ್ದರು. ಐಸ್ ಕ್ರೀಮ್ ಕೋನ್‌ನಲ್ಲಿ ಬೆರಳಿನ ತುಂಡನ್ನು ನೋಡಿದ ಮಹಿಳೆ ಕಿರುಚಲು ಪ್ರಾರಂಭಿಸಿದ್ದು, ನಂತರ ಅಲ್ಲೇ ಮೂರ್ಛೆ ಹೋಗಿದ್ದಾರೆ. ಕೆಲಕ್ಷಣ ಆಕೆಯ ಕುಟುಂಬದ ಸದಸ್ಯರಿಗೂ ಏನೂ ಅರ್ಥವಾಗಿರಲಿಲ್ಲ. ಆದರೆ ಆಕೆಗೆ ಮೂರ್ಛೆ ಬಂದಾಗ ಐಸ್ ಕ್ರೀಂ ನಲ್ಲಿ ಬೆರಳು ಇರುವುದನ್ನು ಹೇಳಿದ್ದಾರೆ. ನಂತರ ಅವರು ತಕ್ಷಣ ಮಲಾಡ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

27 ವರ್ಷದ ಡಾ‌.ಓರ್ಲೆಮ್ ನಿವಾಸಿ ಬ್ರೆಂಡನ್ ಸೆರಾವೊ ಈ ವಿಚಿತ್ರ ಅನುಭವಕ್ಕೊಳಗಾದ ಮಹಿಳೆ. ಕೋನ್ ಒಳಗೆ ಮಾನವನ ಬೆರಳಿನ ತುಂಡು 2 ಸೆಂ.ಮೀ ಉದ್ದವಿತ್ತು ಎಂದವರು ಹೇಳಿದ್ದಾರೆ. ಈಕೆಯ ದೂರಿನಂತೆ ಮಲಾಡ್ ಪೊಲೀಸರು ಯಮ್ಮೋ ಐಸ್ ಕ್ರೀಮ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Join our WhatsApp group Follow us on Facebook  Follow us on Twitter

A city doctor allegedly found a person’s finger in an ice-cream cone his sister had ordered online on June 12. As per reports, the incident took place in the suburbs of Malad when a woman ordered ice-cream along with other items via a grocery delivery app. A snapshot circulated on the internet shows a human finger protruding from the ice cream's top portion. The victim, Orlem Brendan Serrao (27), rushed to the Malad police station along with his sister and filed a case against the company. Police have sent the ice cream for investigation and the finger for forensic analysis.