Naxalites killed in encounter in Chhattisgarh: ಛತ್ತೀಸ್ಗಢ ; ಎಂಟು ನಕ್ಸಲರ ಹತ್ಯೆ, ಒಬ್ಬ ಪೊಲೀಸ್ ಪೇದೆ ಸಾವು, ಮುಂದುವರಿದ ಚಕಮಕಿ

15-06-24 04:30 pm       HK News Desk   ದೇಶ - ವಿದೇಶ

ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಎಂಟು ನಕ್ಸಲರನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನಕ್ಸಲರ ಜೊತೆಗಿನ ಕಾಳಗದಲ್ಲಿ ಒಬ್ಬ ಪೊಲೀಸ್ ಪೇದೆ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ರಾಂಚಿ, ಜೂನ್.15: ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಎಂಟು ನಕ್ಸಲರನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನಕ್ಸಲರ ಜೊತೆಗಿನ ಕಾಳಗದಲ್ಲಿ ಒಬ್ಬ ಪೊಲೀಸ್ ಪೇದೆ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ನಕ್ಸಲರ ಹಾವಳಿಯ ವಿರುದ್ಧ ನಾರಾಯಣಪುರ, ದಾಂತೇವಾಡ, ಕಾಂಕೇರ್ ಮತ್ತು ಕೊಂಡಗಾಂವ್ ಜಿಲ್ಲೆಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಶನಿವಾರ ಬೆಳಗ್ಗೆ ಅಭುಜ್ ಮದ್ ಎಂಬಲ್ಲಿ ನಡೆದ ಕಾಳಗದಲ್ಲಿ ಎಂಟು ಮಂದಿಯನ್ನು ಹತ್ಯೆ ಮಾಡಲಾಗಿದೆ. ನಾರಾಯಣ ಪುರ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿ ಮುಂದುವರಿದಿದೆ. ಸತ್ತ ನಕ್ಸಲರು ಯಾರು ಎನ್ನುವುದು ಇನ್ನೂ ಪತ್ತೆ ಮಾಡಲಾಗಿಲ್ಲ.

Chhattisgarh: 8 Naxals, one jawan killed in encounter

8 Naxalites, one security personnel killed in encounter in Chhattisgarh -  Daily Excelsior

8 Naxalites, security personnel killed in encounter in Chhattisgarh's  Narayanpur : The Tribune India

ನಾಲ್ಕು ಜಿಲ್ಲೆಗಳ ಜಿಲ್ಲಾ ಮೀಸಲು ಪಡೆ, ಸ್ಪೆಷಲ್ ಟಾಸ್ಕ್ ಫೋರ್ಸ್, ಇಂಡೋ ಟೆಬೆಟನ್ ಬಾರ್ಡರ್ ಪೊಲೀಸ್ ಪಡೆಯ 53ನೇ ಬೆಟಾಲಿಯನ್ ಜೂನ್ 12ರಂದು ನಕ್ಸಲರ ವಿರುದ್ಧ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಛತ್ತೀಸ್ಗಢ, ಒಡಿಸ್ಸಾದಲ್ಲಿ ನಕ್ಸಲರ ಹಾವಳಿಯಿದ್ದು, ಅದರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರಕಾರ ಸೂಚನೆ ನೀಡಿದೆ.

Eight Naxalites and a jawan of the Special Task Force (STF) were killed in an encounter in Chhattisgarh's Narayanpur district on Saturday (June 15), police said. Two other STF personnel sustained injuries in the incident, they said.