ಬ್ರೇಕಿಂಗ್ ನ್ಯೂಸ್
19-06-24 11:18 pm HK News Desk ದೇಶ - ವಿದೇಶ
ಪಾಟ್ನಾ, ಜೂನ್ 19: ಜಗತ್ತಿನ ಅತಿ ಪ್ರಾಚೀನ ವಿಶ್ವವಿದ್ಯಾನಿಲಯ ಎಂದು ಹೆಸರಾಗಿದ್ದ ಬಿಹಾರದ ನಲಂದಾ ವಿಶ್ವವಿದ್ಯಾನಿಲಯವನ್ನು ಮರು ಸ್ಥಾಪನೆ ಮಾಡಲಾಗಿದೆ. 12ನೇ ಶತಮಾನದಲ್ಲಿ ಪರಕೀಯರ ದಾಳಿಗೆ ತುತ್ತಾಗಿ ನೆಲಸಮಗೊಂಡಿದ್ದ ನಲಂದಾ ವಿಶ್ವವಿದ್ಯಾನಿಲಯವನ್ನು ಅಷ್ಟೇ ಗತ ವೈಭವ ಸಾರುವಂತೆ ನಿರ್ಮಾಣ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರು ಉದ್ಘಾಟನೆ ನೆರವೇರಿಸಿದ್ದಾರೆ.
ನಲಂದಾ ವಿವಿಯನ್ನು ಸ್ಥಾಪನೆ ಮಾಡುವುದಕ್ಕೆ 2010ರಲ್ಲಿ ಕೇಂದ್ರ ಸರಕಾರ ಘೋಷಣೆ ಮಾಡಿತ್ತು. 2014ರಲ್ಲಿ ವಿವಿಯ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, 1700 ಕೋಟಿ ವೆಚ್ಚದಲ್ಲಿ ವಿಶಿಷ್ಟ ಶೈಲಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಬುಧವಾರ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ 17 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೋದಿ ಮೊದಲ ಬಾರಿಗೆ ಬಿಹಾರಕ್ಕೆ ಆಗಮಿಸಿದ್ದು, ನಲಂದಾ ವಿವಿಯನ್ನು ಲೋಕಾರ್ಪಣೆ ಮಾಡಿದ್ದಾರೆ.
ಇದೇ ವೇಳೆ, ಮಾತನಾಡಿದ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾದ ಹತ್ತೇ ದಿನದಲ್ಲಿ ನಲಂದಾ ವಿಶ್ವವಿದ್ಯಾನಿಲಯ ಉದ್ಘಾಟನೆ ಮಾಡುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ನಲಂದಾ ಕೇವಲ ಒಂದು ಹೆಸರಲ್ಲ. ಅದು ಹೆಗ್ಗುರುತು, ವಿಶಿಷ್ಟ ರೀತಿಯ ಗೌರವ. ನಲಂದಾ ಅಂದರೆ ಮೌಲ್ಯ, ಮಂತ್ರ. ಬೆಂಕಿ ಪುಸ್ತಕವನ್ನು ಸುಡಬಹುದು. ಆದರೆ ಜ್ಞಾನವನ್ನು ಸುಡಲಾರದು ಎಂದು ಹೇಳಿದ್ದಾರೆ.
5ನೇ ಶತಮಾನದಲ್ಲಿ ಬುದ್ಧರ ಕಾಲದಲ್ಲಿ ಕಟ್ಟಲ್ಪಟ್ಟಿದೆ ಎನ್ನಲಾಗುವ ನಲಂದಾ ವಿಶ್ವವಿದ್ಯಾನಿಲಯ 12ನೇ ಶತಮಾನದಲ್ಲಿ ಮೊಘಲ್ ದೊರೆಗಳ ದಾಳಿಯಿಂದಾಗಿ ನಾಶಗೊಂಡಿತ್ತು. ಅಂದಿನ ಕಾಲದಲ್ಲಿಯೇ ನಲಂದಾ ವಿಶ್ವಶ್ರೇಷ್ಠ ವಿಶ್ವವಿದ್ಯಾನಿಲಯ ಎಂದು ಹೆಸರು ಗಳಿಸಿತ್ತು. ಈಗಿನ ಕಾಲದಲ್ಲಿ ಆಕ್ಸ್ ಫರ್ಡ್, ಕೇಂಬ್ರಿಡ್ಜ್ ಗೆ ಹೋದ ರೀತಿಯಲ್ಲೇ ನಲಂದಾ ವಿವಿಗೆ ಕಲಿಯಲು ವಿದೇಶಗಳಿಂದ ಬರುತ್ತಿದ್ದರು. ಈ ಬಗ್ಗೆ ಉಲ್ಲೇಖ ಮಾಡಿದ ಮೋದಿ, ನಲಂದಾ ವಿವಿ ಕೇವಲ ಭಾರತದ ಚರಿತ್ರೆಗೆ ಸೀಮಿತ ಅಲ್ಲ. ಇದು ಏಷ್ಯಾದ ಇತಿಹಾಸಕ್ಕೆ ಸಂಬಂಧಪಟ್ಟದ್ದು. ವಸುಧೈವ ಕುಟುಂಬಕಂ ಎನ್ನುವ ಪರಿಕಲ್ಪನೆಗೆ ನಿದರ್ಶನ. ಈಗಾಗಲೇ ನಲಂದಾ ವಿವಿಗೆ 20 ದೇಶಗಳಿಂದ ವಿದ್ಯಾರ್ಥಿಗಳು ಬರತೊಡಗಿದ್ದಾರೆ ಎಂದು ಹೇಳಿದರು.
ಉದ್ಘಾಟನೆಗೂ ಮುನ್ನ ಪ್ರಾಚೀನ ಕಾಲದ ನಲಂದಾ ವಿವಿಯ ಅವಶೇಷಗಳು, ಸ್ತೂಪಗಳಿದ್ದಲ್ಲಿಗೆ ಪ್ರಧಾನಿ ಮೋದಿ ಭೇಟಿ ಮಾಡಿದರು. 2016ರಲ್ಲಿ ನಲಂದಾ ವಿವಿಯ ಅವಶೇಷಗಳನ್ನು ವಿಶ್ವಸಂಸ್ಥೆ ಪಾರಂಪರಿಕ ಸ್ಥಳವೆಂದು ಘೋಷಣೆ ಮಾಡಿತ್ತು.
Prime Minister Shri Narendra Modi today inaugurated the new campus of the Nalanda University near Rajgir, Bihar. On this occasion, he also planted a sapling of the Bodhi tree- an enduring symbol of Buddhist heritage and Indian spirituality, at the campus. Governor of Bihar, Shri Rajendra Vishwanath Arlekar, Chief Minister of Bihar, Shri Nitish Kumar, External Affairs Minister Dr. S. Jaishankar, MoS for External Affairs, Shri Pabitra Margherita and Chancellor of the University, Prof. Aravind Panagariya were among the dignitaries present on this occasion.
19-02-25 10:34 pm
HK News Desk
Bird flu Karnataka, Bidar: ಆಂಧ್ರ, ಮಹಾರಾಷ್ಟ್ರದ...
19-02-25 10:19 pm
Koppal, Tungabhadra river, Hyderabad: 20 ಅಡಿ...
19-02-25 07:59 pm
CM MUDA case: ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ...
19-02-25 07:47 pm
Bangalore, Doctor SMS, Pills: ನಮ್ಮ ಅತ್ತೆಗೆ ವಯ...
19-02-25 04:43 pm
19-02-25 11:00 pm
HK News Desk
ಬಾಲಕನಿದ್ದಾಗ ನುಂಗಿದ್ದ ಪೆನ್ ಕ್ಯಾಪ್ ; 21 ವರ್ಷ ಕಳ...
19-02-25 06:41 pm
Maha Kumbh river, NGT Board: ಕುಂಭಮೇಳ ನದಿ ನೀರು...
19-02-25 01:54 pm
ಇಬ್ಬರು ಹೆಂಡಿರ ಮುದ್ದಿನ ಗಂಡ ; ವಾರದ 3 ದಿನ ಅಲ್ಲಿ....
18-02-25 10:49 pm
Hindu idols Bishop House, Pala diocese, Kera...
18-02-25 10:45 pm
19-02-25 01:56 pm
Mangalore Correspondent
Satish Jarkiholi, Mangalore: ಕೆಪಿಸಿಸಿ ಅಧ್ಯಕ್ಷ...
18-02-25 12:36 pm
Dinesh Gundurao, Munner katipalla, Sand Mafia...
17-02-25 10:56 pm
Sterlite Power, Protest, 400kv Power, Mangalo...
17-02-25 09:20 pm
Mangalore, Dinesh Gundurao, Mines Krishnaveni...
17-02-25 09:14 pm
19-02-25 09:26 pm
Mangalore Correspondent
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm
Mysuru family suicide, Crime: ಮೈಸೂರು ; ಅಪಾರ್ಟ...
17-02-25 12:49 pm