President Murmu, Bhartruhari Mahtab, Speaker Of Lok Sabha: 'ಸಂಸದ್ ರತ್ನ' ಖ್ಯಾತಿಯ ಒಡಿಶಾ ಮೂಲದ ಭರ್ತೃಹರಿ ಮಹತಾಬ್ ಲೋಕಸಭೆ ಹಂಗಾಮಿ ಸ್ಪೀಕರ್ ; ನೇಮಕಗೊಳಿಸಿದ ರಾಷ್ಟ್ರಪತಿ 

21-06-24 02:10 pm       HK News Desk   ದೇಶ - ವಿದೇಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಟಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ.

ನವದೆಹಲಿ, ಜೂನ್.21: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಟಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. 

ಸ್ಪೀಕರ್ ಆಯ್ಕೆ ಆಗುವವರೆಗೂ ಹಂಗಾಮಿ ಸ್ಪೀಕರ್‌ಗೆ ಸಹಾಯ ಮಾಡಲು ಸುರೇಶ್ ಕೋಡಿಕುನ್ನಿಲ್, ತಾಳಿಕ್ಕೋಟ್ಟೈ ರಾಜುತೇವರ್ ಬಾಲು, ರಾಧಾ ಮೋಹನ್ ಸಿಂಗ್, ಫಗ್ಗುನ್ ಸಿಂಗ್ ಕುಲಸ್ತೆ ಮತ್ತು ಸುದೀಪ್ ಬಂದೋಪಾಧ್ಯಾಯ ಅವರನ್ನು ನೇಮಿಸಲಾಗಿದೆ. 

ಕಟಕ್‌ನಿಂದ ಏಳು ಬಾರಿ ಸಂಸದರಾಗಿರುವ 66 ವರ್ಷದ ಭರ್ತೃಹರಿ ಮಹತಾಬ್, ಒಡಿಶಾದ ಮಾಜಿ ಮುಖ್ಯಮಂತ್ರಿ ಹರೇಕೃಷ್ಣ ಮಹತಾಬ್ ಅವರ ಪುತ್ರರಾಗಿದ್ದು ಈ ಹಿಂದೆ ಬಿಜೆಡಿಯಲ್ಲಿ ಸಂಸದರಾಗಿದ್ದರು. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ ಜೊತೆಗಿನ ಸುದೀರ್ಘ ಸಂಬಂಧವನ್ನು ಕಡಿದುಕೊಂಡು ಲೋಕಸಭೆ ಚುನಾವಣೆಗೂ ಮುನ್ನ ಮಹತಾಬ್ ಬಿಜೆಪಿ ಸೇರಿದ್ದರು. ಈಗ ಅವರನ್ನು ಒಡಿಶಾದಲ್ಲಿ ಬಿಜೆಪಿಯ ಪ್ರಮುಖ ನಾಯಕ ಎಂದು ಪರಿಗಣಿಸಲಾಗಿದೆ.

ಮಹತಾಬ್ ಅವರು 2017 ರಲ್ಲಿ ಅತ್ಯುತ್ತಮ ಸಂಸದೀಯ ಪ್ರಶಸ್ತಿ ಮತ್ತು ಸಂಸದರಾಗಿ ಅವರ ಅತ್ಯುತ್ತಮ ಪಾತ್ರಕ್ಕಾಗಿ 2017, 2018, 2019 ಮತ್ತು 2020 ರ ಸಂಸದ್ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆದ್ದ ನಂತರ ಹಂಗಾಮಿ ಸ್ಪೀಕರ್ ಹುದ್ದೆಗೆ ಮಹತಾಬ್ ಅವರನ್ನು ಆಯ್ಕೆ ಮಾಡಲಾಗಿದೆ. ಜೂನ್ 26ರಂದು ಹೊಸ ಸ್ಪೀಕರ್ ಆಯ್ಕೆ ಆಗಲಿದ್ದು ಚುನಾವಣೆ ನಡೆದಲ್ಲಿ ಮಹತಾಬ್ ಅವರನ್ನೇ ಸ್ಪೀಕರ್ ಹುದ್ದೆಗೆ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆಯಿದೆ.

President Droupadi Murmu on Thursday appointed Member of Parliament and BJP leader Bhartruhari Mahtab as Pro Tem Speaker of Lok Sabha. Informing about the same, Union minister Kiren Rijiju took to X and wrote, “President is pleased to appoint Shri Bhartruhari Mahtab, Member, Lok Sabha as Speaker Protem under Article 95(1) of the Constitution to perform the duties of Speaker till election of the Speaker.”