16 ವರ್ಷಗಳ ರಾಜಕೀಯ ಜೀವನ ; ಡಿಸಿಎಂ ಆಗಿಯೇ ವಿಧಾನಸಭೆ ಪ್ರವೇಶಿಸಿದ ನಟ ಪವನ್ ಕಲ್ಯಾಣ್ ! ಆಂಧ್ರದಲ್ಲಿ ಅಸೆಂಬ್ಲಿ ಕಲಾಪ ಆರಂಭ 

21-06-24 02:56 pm       HK News Desk   ದೇಶ - ವಿದೇಶ

ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಚುನಾವಣೆ ಗೆದ್ದು ಎನ್ಡಿಎ ಕೂಟ ಅಧಿಕಾರಕ್ಕೇರಿದ ಬಳಿಕ ಮೊದಲ ಅಧಿವೇಶನ ಶುಕ್ರವಾರ ಆರಂಭಗೊಂಡಿದೆ.

ಹೈದರಾಬಾದ್, ಜೂನ್ 21: ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಚುನಾವಣೆ ಗೆದ್ದು ಎನ್ಡಿಎ ಕೂಟ ಅಧಿಕಾರಕ್ಕೇರಿದ ಬಳಿಕ ಮೊದಲ ಅಧಿವೇಶನ ಶುಕ್ರವಾರ ಆರಂಭಗೊಂಡಿದೆ. ಹೊಸತಾಗಿ ಆಯ್ಕೆಗೊಂಡ ಶಾಸಕರು ಅಧಿವೇಶನದ ಮೊದಲ ದಿನ ಪ್ರಮಾಣವಚನ ಸ್ವೀಕರಿಸಿದರೆ, 16 ವರ್ಷಗಳ  ರಾಜಕೀಯ ಜೀವನದಲ್ಲಿ ಪವನ್ ಕಲ್ಯಾಣ್ ಮೊದಲ ಬಾರಿಗೆ ಶಾಸಕರಾಗಿದ್ದಲ್ಲದೆ, ಡಿಸಿಎಂ ಆಗಿಯೇ ವಿಧಾನಸಭೆ ಪ್ರವೇಶ ಮಾಡಿದ್ದಾರೆ. 

ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಎರಡೂವರೆ ವರ್ಷಗಳ ಬಳಿಕ ಸದನಕ್ಕೆ ಹಾಜರಾದರು. ಜನಸೇನಾ ಪಕ್ಷದ ಮೂಲಕ ರಾಜಕೀಯ ಜೀವನದಲ್ಲಿದ್ದರೂ ಸತತ ಸೋಲಿನಿಂದ ಕಂಗೆಟ್ಟಿದ್ದ ಪವನ್ ಕಲ್ಯಾಣ್ ಈ ಬಾರಿ ಬಿಜೆಪಿ ಕೂಟ ಸೇರಿ ಚುನಾವಣೆ ಎದುರಿಸಿದ್ದರು. ಪಿತಾಪುರಂ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾದ ಪವನ್, ವಿಧಾನಸಭೆ ಪ್ರವೆಶಕ್ಕೂ ಮೊದಲೇ ಡಿಸಿಎಂ ಆಗಿ ಪ್ರಮಾಣ ಸ್ವೀಕರಿಸಿದದ್ದರು. 

ಬೆಳಗ್ಗೆ 9.45ಕ್ಕೆ ಕಲಾಪ ಆರಂಭಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ, ಕುಪ್ಪಂ ಶಾಸಕ ಚಂದ್ರಬಾಬು ನಾಯ್ಡು ಮೊದಲಿಗರಾಗಿ ಹಾಗೂ ಅವರ ಹಿಂದೆಯೇ ಪವನ್‌ ಕಲ್ಯಾಣ್‌ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ, ಪುಲಿವೆಂದುಲ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರೂ ಇದೇ ವೇಳೆ ಪ್ರಮಾಣ ಸ್ವೀಕರಿಸಿದರು.

The maiden session of the 16th Andhra Pradesh Legislative Assembly began on Friday with the oath-taking process of the newly-elected MLAs. TDP MLA G Butchaiah Chowdary presided over the proceedings as the Pro-tem Speaker. The session commenced at 9:45 am in the Assembly Hall located at Velagapudi, Amravati. Chief Minister N Chandrababu Naidu attended the session after more than two and half years. Actor-Politician and Janasena chief Pawan Kalyan entered the House for the first time in his 16-year-old political career as Pithapuram MLA and Deputy Chief Minister.