ಬ್ರೇಕಿಂಗ್ ನ್ಯೂಸ್
21-06-24 03:43 pm HK News Desk ದೇಶ - ವಿದೇಶ
ಇಸ್ಲಮಾಬಾದ್, ಜೂನ್ 21: ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ನಗರದಲ್ಲಿ ಖುರಾನ್ ಪುಸ್ತಕವನ್ನು ವ್ಯಕ್ತಿಯೊಬ್ಬ ಅಪವಿತ್ರಗೊಳಿಸಿದ್ದಾನೆ ಎಂಬ ಆರೋಪದಲ್ಲಿ ಉದ್ರಿಕ್ತರು ಹಿಂಸಾಚಾರ ನಡೆಸಿದ್ದಾರೆ. ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ್ದಲ್ಲದೆ, ನಡುಬೀದಿಯಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಇದೇ ವೇಳೆ, ಪೊಲೀಸರ ಮೇಲೂ ದಾಳಿಯಾಗಿದ್ದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, ಹಲವಾರು ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ.
ಖೈಬರ್ ಪಕ್ತುಂಖ್ವಾ ನಗರದ ಮಡ್ಯಾನ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು ಘಟನೆಯಲ್ಲಿ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೇಶಾವರದಿಂದ 245 ಕಿಮೀ ದೂರದ ಸ್ವಾಟ್ ಕಣಿವೆ ಪ್ರದೇಶವನ್ನು ಹೊಂದಿರುವ ಮಡ್ಯಾನ್ ಪ್ರವಾಸಿ ತಾಣವಾಗಿದ್ದು, ಒಮ್ಮಿಂದೊಮ್ಮೆಲೇ ಹಿಂಸಾಚಾರ ಭುಗಿಲೆದ್ದಿದೆ. ಪ್ರವಾಸಿ ವ್ಯಕ್ತಿಯಾಗಿದ್ದ ಮಹಮ್ಮದ್ ಇಸ್ಮಾಯಿಲ್ ಎಂಬ ಮುಸ್ಲಿಂ ವ್ಯಕ್ತಿ ಹೊಟೇಲ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಖುರಾನ್ ಪುಸ್ತಕದ ಬಗ್ಗೆ ಯಾವುದೋ ಕಾರಣಕ್ಕೆ ದೂಷಣೆ ಮಾಡಿದ್ದಾನೆ. ಇದೇ ವಿಚಾರದಲ್ಲಿ ಸ್ಥಳೀಯ ಮುಸ್ಲಿಮರಿಂದ ವಿರೋಧ ಕೇಳಿಬಂದು ಉದ್ರಿಕ್ತರ ಗುಂಪು ಜಮಾವಣೆಗೊಂಡು ಆತನ ಮೇಲೆ ದಾಳಿ ನಡೆಸಿತ್ತು. ಜೂನ್ 20ರ ರಾತ್ರಿ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಈ ಸಂದರ್ಭದಲ್ಲಿ ಮಹಮ್ಮದ್ ಇಸ್ಮಾಯಿಲ್ ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದರು. ಆದರೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ಆರೋಪಿ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದು ಹಲ್ಲೆಗೈದು ಕೊಂದು ಹಾಕಿದ್ದಲ್ಲದೆ, ನಡು ರಸ್ತೆಯಲ್ಲಿ ಆತನ ಹೆಣವನ್ನು ಸುಟ್ಟು ಹಾಕಿದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಧರ್ಮ ನಿಂದನೆ ಕಾರಣಕ್ಕೆ ಹಿಂಸಾಚಾರ ನಡೆಸುವುದು ಸಾಮಾನ್ಯ ಎಂಬಂತಾಗಿದ್ದು, ಧರ್ಮ, ಪ್ರವಾದಿ ಬಗ್ಗೆ ನಿಂದನೆ ಮಾಡಿದರೆ ಗಲ್ಲು ಶಿಕ್ಷೆ ನೀಡುವ ಪರಿಪಾಠ ಇದೆ.
ಪಾಕಿಸ್ತಾನದಲ್ಲಿ 1987ರಿಂದ 2022ರ ಮಧ್ಯೆ 2120 ಮಂದಿ ವಿರುದ್ಧ ಧರ್ಮ ನಿಂದನೆಯ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಪೂರ್ವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಳೆದ ತಿಂಗಳು 72 ವರ್ಷದ ಕ್ರಿಸ್ತಿಯನ್ ವ್ಯಕ್ತಿ ನಝೀರ್ ಮಾಸಿ ಎನ್ನುವಾತನಿಗೆ ಖುರಾನ್ ಪುಸ್ತಕವನ್ನು ಹಾನಿಗೊಳಿಸಿದ್ದಕ್ಕಾಗಿ ಉದ್ರಿಕ್ತರ ಗುಂಪು ತೀವ್ರ ಹಲ್ಲೆಗೈದಿತ್ತು. ಆನಂತರ, ಆ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.
A man was killed by an angry mob for allegedly desecrating the Holy Quran in the scenic Swat district of Khyber Pakhtunkhwa in northwest Pakistan and eight people were injured in the ensuing unrest, police said. District Police Officer (DPO), Swat, Zahidullah said the man from Sialkot district of Punjab allegedly burnt some pages of the Holy Quran in Madyan tehsil of Swat on Thursday night.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm