ಕಟ್ಟಡದ ಮೇಲಿಂದ ಭಯಾನಕ ಕಿತಾಪತಿ ; ರೀಲ್ಸ್​ ಹುಚ್ಚುಗೆ ಆದ್ಲು ಕೋತಿ, ಅಂಥದ್ದೇನಿದೆ ವಿಡಿಯೋದಲ್ಲಿ ? 

21-06-24 05:45 pm       HK News Desk   ದೇಶ - ವಿದೇಶ

ಯುವ ಜನರಲ್ಲಿ ಈಗ ರೀಲ್ಸ್ ಗೀಳು ಅಧಿಕವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಮೆಂಟ್ ಪಡೆಯುವ ಹುಚ್ಚಾಟದಲ್ಲಿ ಒಂದಷ್ಟು ಯುವ ಜನತೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸ್ಟಂಟ್ ಎಲ್ಲ ಪ್ರದರ್ಶಿಸುತ್ತಾರೆ.

ಪುಣೆ, ಜೂ 22:  ಯುವ ಜನರಲ್ಲಿ ಈಗ ರೀಲ್ಸ್ ಗೀಳು ಅಧಿಕವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಮೆಂಟ್ ಪಡೆಯುವ ಹುಚ್ಚಾಟದಲ್ಲಿ ಒಂದಷ್ಟು ಯುವ ಜನತೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸ್ಟಂಟ್ ಎಲ್ಲ ಪ್ರದರ್ಶಿಸುತ್ತಾರೆ. ಇವರ ಈ ಹುಚ್ಚು ಸಾಹಸದ ದೃಶ್ಯಗಳನ್ನು ಕಂಡಾಗ ನಿಜಕ್ಕೂ ಅಚ್ಚರಿ, ಆಘಾತವೂ ಆಗುತ್ತದೆ. ಬರೀ ಅಷ್ಟೇ ಅಲ್ಲ ಇಂತಹ ಅತಿರೇಕದ ವಿಡಿಯೋ ಮಾಡಲು ಹೋಗಿ ಒಂದಷ್ಟು ಮಂದಿ ಜೀವ ಕಳೆದುಕೊಂಡ ಉದಾಹರಣೆಗಳೂ ಸಾಕಷ್ಟಿವೆ.

ಯುವ ಜನರಲ್ಲಿ ಈಗ ರೀಲ್ಸ್ ಗೀಳು ಅಧಿಕವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಮೆಂಟ್ ಪಡೆಯುವ ಹುಚ್ಚಾಟದಲ್ಲಿ ಒಂದಷ್ಟು ಯುವ ಜನತೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸ್ಟಂಟ್ ಎಲ್ಲ ಪ್ರದರ್ಶಿಸುತ್ತಾರೆ. ಇವರ ಈ ಹುಚ್ಚು ಸಾಹಸದ ದೃಶ್ಯಗಳನ್ನು ಕಂಡಾಗ ನಿಜಕ್ಕೂ ಅಚ್ಚರಿ, ಆಘಾತವೂ ಆಗುತ್ತದೆ. ಬರೀ ಅಷ್ಟೇ ಅಲ್ಲ ಇಂತಹ ಅತಿರೇಕದ ವಿಡಿಯೋ ಮಾಡಲು ಹೋಗಿ ಒಂದಷ್ಟು ಮಂದಿ ಜೀವ ಕಳೆದುಕೊಂಡ ಉದಾಹರಣೆಗಳೂ ಸಾಕಷ್ಟಿವೆ.

ಇದೀಗ ಅಂತಹದ್ದೇ ಹುಚ್ಚಾಟದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುವಾಗಲೇ ಎದೆ ನಡುಗಿದಂತಹ ಅನುಭವವಾಗುತ್ತದೆ. ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬೃಹತ್ ಕಟ್ಟಡದ ಬಳಿ ಹದಿಹರೆಯದ ಯುವಕ ಯುವತಿ ಈ ಸ್ಟಂಟ್ ಸೆರೆಹಿಡಿಯುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಇದಾದ ಬಳಿಕ ಆ ಯುವಕನ ಕೈ ಹಿಡಿದು ಹುಡುಗಿ ಕಟ್ಟಡದಿಂದ ಕೆಳಗೆ ಇಳಿಯುತ್ತಾಳೆ. ಹೀಗೆ ಇಳಿಯುವ ಹುಡುಗಿ ಬಳಿಕ ಯುವಕನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನೇತಾಡುತ್ತಾಳೆ. ಬಲು ಆತ್ಮವಿಶ್ವಾಸದಿಂದಲೇ ಈಕೆ ನೇತಾಡುವ ದೃಶ್ಯವನ್ನು ವಿವಿಧ ಆಂಗಲ್‌ನಿಂದ ಸೆರೆ ಹಿಡಿಯಲಾಗಿದ್ದು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಪುಣೆಯಲ್ಲಿ ನಡೆದ ಘಟನೆ ಇದು ಎಂದು ಹೇಳಲಾಗುತ್ತಿದೆ. ಹೀಗೆ ಹಂಚಿಕೊಂಡ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ಎಲ್ಲರ ಆಕ್ರೋಶಕ್ಕೂ ಕಾರಣವಾಗಿದೆ. ಈ ಅಪಾಯಕಾರಿ ಸಾಹಸವನ್ನು ಕಂಡ ಬಹುತೇಕರು ಈ ಹುಡುಗ ಹುಡುಗಿ ಹಾಗೂ ಸ್ನೇಹಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಪೊಲೀಸ್ ಅಧಿಕಾರಿಗಳಿಗೂ ಟ್ಯಾಗ್ ಮಾಡಿದ್ದಾರೆ.

ಇದೊಂದೇ ಅಲ್ಲ, ಮೂರ್ನಾಲು ದಿನಗಳ ಹಿಂದೆ ಇದೇ ರೀತಿ ಕಾರಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ 23 ಯುವತಿಯೊಬ್ಬಳು ಜೀವ ಬಿಟ್ಟಿದ್ದಳು. ಡ್ರೈವಿಂಗ್ ಬರದೇ ಇದ್ದರೂ ಅಪಾಯಕಾರಿ ಜಾಗದಲ್ಲಿ ಕಾರು ರಿವರ್ಸ್ ಕೊಂಡೊಯ್ದು ಈ ಯುವತಿ ಕೊನೆಯುಸಿರೆಳೆದಿದ್ದಳು. ಇದೇ ಸೋಮವಾರ ಮಧ್ಯಾಹ್ನ ಎಲ್ಲೋರಾ ಗುಹೆಗಳಿಗೆ ಹೋಗುವ ಮಾರ್ಗದಲ್ಲಿ ಸಿಗುವ ದತ್‌ ಧಾಮ್ ದೇಗುಲದ ಬೆಟ್ಟದ ಬಳಿಕ ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಶ್ವೇತಾ ಸುರ್ವಾಸೆ ಕಾರನ್ನು ರಿವರ್ಸ್‌ ತೆಗೆಯುವಾಗ ಕಾರು ಕಂದಕ್ಕೆ ಬಿದ್ದಿತ್ತು. ಈ ದೃಶ್ಯ ಕೂಡಾ ಭಾರೀ ವೈರಲ್ ಆಗಿತ್ತು.

ಇಂತಹ ದೃಶ್ಯಗಳನ್ನು ನೋಡುವಾಗ ನಿಜಕ್ಕೂ ಎದೆ ಧಗ್ ಎನ್ನುತ್ತದೆ. ರೀಲ್ಸ್ ಮೋಹ ಇರಲಿ. ಆದರೆ ಅದು ಇತರರಿಗೆ ತೊಂದರೆಯಾಗುವಂತೆ, ಜೀವಕ್ಕೆ ಕುತ್ತು ತರುವಂತೆ ಇರದಿರಲಿ.

In a bid to film an Instagram reel, two Pune teenagers risked their lives by pulling off a dangerous stunt. The video of the teens attempting the stunt is now going viral on social media, triggering outrage among netizens, who also urged police officials to "arrest" them.