ಬ್ರೇಕಿಂಗ್ ನ್ಯೂಸ್
25-06-24 09:51 pm HK News Desk ದೇಶ - ವಿದೇಶ
ಮುಂಬೈ, ಜೂ 24: ಪುಣೆಯಲ್ಲಿ ಮದ್ಯಪಾನ ಮಾಡಿ ಪೋರ್ಶೆ ಕಾರು ಚಲಾಯಿಸಿ, 24 ವರ್ಷದ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣನಾಗಿದ್ದ 17 ವರ್ಷದ ಬಾಲಕನನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಬಾಲಕನನ್ನು ರಿಮ್ಯಾಂಡ್‌ನಲ್ಲಿ ಇರಿಸುವ ಆದೇಶ ಕಾನೂನುಬಾಹಿರ ಎಂದು ಹೇಳಿರುವ ನ್ಯಾಯಾಲಯ, ಅದನ್ನು ತಿರಸ್ಕರಿಸಿದೆ.
ಬಾಲಕನ ಪೋಷಕರು ಮತ್ತು ಅಜ್ಜ ಮೂವರೂ ಪ್ರಸ್ತುತ ಜೈಲಿನಲ್ಲಿದ್ದಾರೆ. ಹೀಗಾಗಿ ಆತನನ್ನು ತಂದೆಯ ಕಡೆಯ ಸಂಬಂಧಿಯ ಪಾಲನೆಗೆ ಒಪ್ಪಿಸಬೇಕು ಎಂದು ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಶಾ ದೇಶಪಾಂಡೆ ಅವರನ್ನು ಒಳಗೊಂಡ ನ್ಯಾಯಪೀಠ ಬಾಲಕನ ಬಿಡುಗಡೆಗೆ ಆದೇಶಿಸಿದೆ.
ಅಪಘಾತವು ದುರದೃಷ್ಟಕರವಾದರೂ, ಆತನನ್ನು ವೀಕ್ಷಣಾ ಗೃಹದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ನಾವು ಕಾನೂನಿಗೆ, ಬಾಲಾರೋಪ ನ್ಯಾಯ ಕಾಯ್ದೆಯ ಗುರಿ ಹಾಗೂ ಉದ್ದೇಶಗಳಿಗೆ ಒಳಪಟ್ಟಿರುತ್ತೇವೆ ಮತ್ತು ಅಪರಾಧದ ಗಂಭೀರತೆಯ ಹೊರತಾಗಿಯೂ ವಯಸ್ಕರಿಗಿಂತ ಪ್ರತ್ಯೇಕವಾದ ಕಾನೂನಿನಡಿಯಲ್ಲಿ ಆತನನ್ನು ಮಗುವಿನಂತೆ ಪರಿಗಣಿಸಬೇಕು" ಎಂದು ಪೀಠ ತಿಳಿಸಿದೆ.
ವೀಕ್ಷಣಾ ಗೃಹದಲ್ಲಿ ಬಾಲಕನನ್ನು ಇರಿಸುವ ಬಾಲಾರೋಪ ನ್ಯಾಯ ಮಂಡಳಿ ಆದೇಶವು ಅಕ್ರಮವಾಗಿದೆ ಮತ್ತು ನ್ಯಾಯ ನಿರ್ವಹಣೆಯ ವ್ಯಾಪ್ತಿಯಾಚೆಗೆ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಬಾಲಕನನ್ನು ವ್ಯಸನಮುಕ್ತ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ ಹಾಗೂ ಆತನನ್ನು ಮನೋವೈದ್ಯರ ಬಳಿ ಕರೆದೊಯ್ಯಲು ಸೂಚಿಸಲಾಗಿದೆ. ಈ ಚಿಕಿತ್ಸೆಗಳು ಮುಂದುವರಿಯಲಿವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಹೇಬಿಯಸ್ ಕಾರ್ಪಸ್ ಅರ್ಜಿ ;
ಬಾಲಕನ ಮಹಿಳಾ ಸಂಬಂಧಿಯೊಬ್ಬರು ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಬಳಿಕ ಬಾಂಬೆ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಸರ್ಕಾರಿ ವೀಕ್ಷಣಾ ಗೃಹದಲ್ಲಿರುವ ಆತನನ್ನು ಬಿಡುಗಡೆ ಮಾಡುವಂತೆ ಆಕೆ ಮನವಿ ಮಾಡಿದ್ದರು.
The Bombay High Court has ordered the immediate release of the juvenile accused in the Pune car accident case. The court has ordered his release into the care and custody of his paternal aunt. The court also directed that the minor's psychological sessions should continue. The 17-year-old's late-night Porsche drive on May 19 resulted in the deaths of two 24-year-old engineers, causing widespread outrage across the country.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm