Lonavalas Bhushi Dam: ಲೋನಾವಾಲಾ ಜಲಪಾತಕ್ಕೆ ಜಾರಿ ಬಿದ್ದು ಒಂದೇ ಕುಟುಂಬದ ಐವರು ಸಾವು ; ಪಿಕ್ನಿಕ್‌ಗೆ ಬಂದವರು ಮಸಣಕ್ಕೆ ಸೇರಿದ್ರು, ವಿಡಿಯೋ ವೈರಲ್ 

30-06-24 09:43 pm       HK News Desk   ದೇಶ - ವಿದೇಶ

ಪಿಕ್ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈಗಾಗಲೇ 2 ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಮುಂಬೈ, ಜೂ.30: ಪಿಕ್ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈಗಾಗಲೇ 2 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತದಲ್ಲಿ ಈ ಘಟನೆ ನಡೆದಿದೆ.

ಪುಣೆಯ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದ 5 ಜನರು ಮೃತಪಟ್ಟಿದ್ದಾರೆ. ಇವರೆಲ್ಲ ಪಿಕ್ನಿಕ್‌ಗೆ ಎಂದು ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತಕ್ಕೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಈಜಾಡುವಾಗ ಜಾರಿ ಜಲಪಾತಕ್ಕೆ ಬಿದ್ದಿದ್ದಾರೆ. ಪರಿಣಾಮ ಮೇಲಿನಿಂದ ಬಿದ್ದ ರಭಸಕ್ಕೆ ಎಲ್ಲರು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.  ಸದ್ಯ ಹುಡುಕಾಟ ನಡೆಸಲಾಗುತ್ತಿದ್ದು 2 ಮೃತದೇಹಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಇನ್ನುಳಿದ ಶವಗಳನ್ನು ಪತ್ತೆ ಹಚ್ಚಲು ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Maharashtra: Woman, 4 Children Drown Near Bhushi Dam In Lonavala

5 tourists feared drowned at waterfall near Bhushi Dam in Lonavala | Pune  News - The Indian Express

BREAKING: 5 Dead as Tourists Swept Away in Strong Current at Lonavala  Waterfall Near Bhushi Dam | Republic World

ಭೂಶಿ ಅಣೆಕಟ್ಟು ಹಿನ್ನೀರಿನ ಸಮೀಪದ ಜಲಪಾತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಅದರಲ್ಲಿ ವಿಶೇಷವಾಗಿ ಮಾನ್ಸೂನ್ ಅವಧಿಯಲ್ಲಿ ಇಲ್ಲಿನ ಪ್ರಕೃತಿ ನೋಟ ಅದ್ಭುತವಾಗಿರುತ್ತದೆ. ಹೀಗಾಗಿ ಕುಟುಂಬ ಸಮೇತ ಜನರು ವಾರಂತ್ಯದಲ್ಲಿ ಇಲ್ಲಿಗೆ ಬರುವುದು ಸಾಮಾನ್ಯ. ಇದೇ ರೀತಿ ಪಿಕ್ನಿಕ್​ಗೆ ಎಂದು ಪುಣೆಯ ಸಯ್ಯದ್ ನಗರದಿಂದ ಬಂದಿದ್ದ ಒಂದೇ ಕುಟುಂಬದ ಐವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

Five persons, including a woman, are feared drowned in a waterfall close to the backwater of Bhushi Dam in Pune's Lonavala area on Sunday, a police official said. The incident happened around 3pm when these five persons, who were there for a picnic, slipped close to the waterfall and fell into the waterbody, the Lonavala police station official said.