ಬ್ರೇಕಿಂಗ್ ನ್ಯೂಸ್
02-07-24 07:54 pm HK News Desk ದೇಶ - ವಿದೇಶ
ಲಕ್ನೋ, ಜುಲೈ .2: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸತ್ಸಂಗ ಮೇಳ ನಡೆಯುತ್ತಿದ್ದಾಗ ಭೀಕರ ಕಾಲ್ತುಳಿತ ಸಂಭವಿಸಿದ್ದು 80ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಹತ್ರಾಸ್ ಮತ್ತು ಪಕ್ಕದ ಇಟಾ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಹತ್ರಾಸ್ ಜಿಲ್ಲೆಯ 60 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಆಶಿಶ್ ಕುಮಾರ್ ತಿಳಿಸಿದ್ದಾರೆ. 27 ಮಂದಿ ಇಟಾ ಜಿಲ್ಲೆಯವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಇದೆ. ಮಾನವ್ ಮಂಗಲ್ ಮಿಲನ್ ಸದ್ಭಾವನಾ ಕಮಿಟಿ ವತಿಯಿಂದ ಸ್ವಯಂಘೋಷಿತ ದೇವಮಾನವ ಎನ್ನಲಾಗುವ ನಾರಾಯಣ ಸಾಕಾರ್ ಹರಿ ಎಂಬವರು ಸತ್ಸಂಗ ನಡೆಸುತ್ತಿದ್ದರು. ವಿಶ್ವ ಹರಿ, ಭೋಲೇ ಬಾಬಾ ಎಂದೂ ಕರೆಯಲ್ಪಡುವ ಈ ವ್ಯಕ್ತಿಯ ಸತ್ಸಂಗ ಕೇಳುವುದಕ್ಕೆ ಸಾವಿರಾರು ಮಂದಿ ಸೇರಿದ್ದರು ಎನ್ನಲಾಗಿದೆ.
ಪ್ರತ್ಯಕ್ಷ ದರ್ಶಿಯೊಬ್ಬರ ಪ್ರಕಾರ, ಸತ್ಸಂಗ ಮುಗಿದು ಜನರು ಹೊರಕ್ಕೆ ತೆರಳುತ್ತಿದ್ದರು. ಈ ವೇಳೆ, ತಳ್ಳಾಟ ಉಂಟಾಗಿದ್ದು, ಜನರು ಸಪೂರವಾಗಿ ರಸ್ತೆಯಲ್ಲಿ ನಡೆಯುವುದಕ್ಕಾಗದೇ ಕೆಳಭಾಗದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಹಲವಾರು ಮಂದಿ ಪ್ರಪಾತಕ್ಕೆ ಬಿದ್ದು ಸಾವು ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಮಾಡಿದ್ದಾರೆ. ಅಲ್ಲದೆ, ಇಬ್ಬರು ಸಚಿವರನ್ನು ಸ್ಥಳಕ್ಕೆ ಕಳಿಸಿಕೊಟ್ಟಿದ್ದಾರೆ. ಘಟನೆ ಬಗ್ಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.
ಯಾರೀತ ಭೋಲೇಬಾಬಾ ?
26 ವರ್ಷಗಳ ಹಿಂದೆ ಸರ್ಕಾರಿ ನೌಕರಿಯನ್ನು ತೊರೆದು ಧಾರ್ಮಿಕ ಉಪನ್ಯಾಸಗಳನ್ನು ನೀಡತೊಡಗಿದ್ದ ನಾರಾಯಣ ಸಾಕಾರ್ ಹರಿ ಮೂಲತಃ ಇಟಾ ಜಿಲ್ಲೆಯ ನಿವಾಸಿ. ಬಳಿಕ ಭೋಲೇ ಬಾಬಾ ಎಂಬ ಹೆಸರಿನಲ್ಲಿ ಪ್ರಚಾರ ಪಡೆದಿದ್ದ. ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಭಾಗದಲ್ಲಿ ಲಕ್ಷಾಂತರ ಜನರು ಈತನ ಅನುಯಾಯಿಗಳಿದ್ದಾರೆ. ಯಾವುದೇ ಸೋಶಿಯಲ್ ಮೀಡಿಯಾ ಪ್ರಚಾರ ಇಲ್ಲದಿದ್ದರೂ, ಜನರು ಈತನ ಸತ್ಸಂಗ ಕೇಳಲು ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದರು. ಆಲಿಗಢದಲ್ಲಿ ಪ್ರತಿ ಮಂಗಳವಾರ ಸತ್ಸಂಗ ನಡೆಯುತ್ತಿತ್ತು. ಅದರಲ್ಲಿ ಸಾವಿರಾರು ಭಕ್ತರು ಸೇರುತ್ತಿದ್ದರೆ, ಅವರಿಗೆ ನೀರು, ಆಹಾರ ವಿತರಿಸಲು ಸ್ವಯಂಸೇವಕರೂ ಇರುತ್ತಿದ್ದರು. ಅದೇ ರೀತಿ ಹತ್ರಾಸ್ ನಲ್ಲಿ ಇಂದು ಸತ್ಸಂಗ ಕಾರ್ಯಕ್ರಮ ಏರ್ಪಾಡಾಗಿತ್ತು.
At least 107 people, mostly women, died in a major stampede during a religious event in Uttar Pradesh's Hathras district on Tuesday. The incident took place when a religious preacher was addressing his followers at a specially laid tent in the Rati Bhanpur village in the Sikandra Rau area of Hathras district.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm