ಬ್ರೇಕಿಂಗ್ ನ್ಯೂಸ್
03-07-24 01:14 pm HK News Desk ದೇಶ - ವಿದೇಶ
ಲಕ್ನೋ, ಜುಲೈ.3: ಮತಾಂತರ ಉದ್ದೇಶದ ಸಮಾವೇಶಗಳನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಇದೇ ರೀತಿ ಸಮಾವೇಶಗಳಿಗೆ, ಮತಾಂತರಕ್ಕೆ ಅವಕಾಶ ನೀಡಿದಲ್ಲಿ ದೇಶದ ಬಹುಸಂಖ್ಯಾತರು ಒಂದು ದಿನ ಅಲ್ಪಸಂಖ್ಯಾತರಾಗುತ್ತಾರೆ ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಹಮೀರ್ ಪುರ್ ಗ್ರಾಮದ ನಿವಾಸಿಗಳನ್ನು ದೆಹಲಿಯಲ್ಲಿ ಮತಾಂತರ ಉದ್ದೇಶದ ಸಮಾವೇಶಕ್ಕೆ ಕರೆದೊಯ್ದಿದ್ದ ಕೈಲಾಶ್ ಕುರಿತ ಪ್ರಕರಣದಲ್ಲಿ ಕೋರ್ಟ್ ಈ ಅಭಿಪ್ರಾಯ ಪಟ್ಟಿದೆ. ರಾಮಪಾಲ್ ಎನ್ನುವ ವ್ಯಕ್ತಿಯನ್ನು ಕೈಲಾಶ್ ದೆಹಲಿಗೆ ಕರೆದೊಯ್ದಿದ್ದು, ಆತನಿಗೆ ಮಾನಸಿಕ ಅಸ್ವಸ್ಥತೆ ಇತ್ತು. ದೆಹಲಿಯ ಸಮಾವೇಶಕ್ಕೆ ಒಯ್ದಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ ಒಯ್ಯಲಾಗಿತ್ತು. ಆದರೆ, ಅಲ್ಲಿಂದ ಮರಳಿ ಬಂದಿಲ್ಲ. ಅಲ್ಲಿ ಮತಾಂತರ ಮಾಡಿರುವ ಸಾಧ್ಯತೆಯಿದೆ ಎಂದು ರಾಮಪಾಲ್ ಸೋದರ ಪೊಲೀಸ್ ದೂರು ನೀಡಿದ್ದು ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆತನನ್ನು ಬಂಧಿಸಿದ್ದು ಕೈಲಾಶ್ ತನ್ನ ಜಾಮೀನಿಗಾಗಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಧೀಶರು ಮತಾಂತರ ಉದ್ದೇಶದ ಸಮಾವೇಶಕ್ಕೆ ಅವಕಾಶ ನೀಡಲೇಬಾರದು ಎಂದಿದ್ದಾರೆ.
ಹಮೀರ್ ಪುರ್ ಗ್ರಾಮದಿಂದ ಹಲವಾರು ಮಂದಿಯನ್ನು ಕೈಲಾಶ್ ದೆಹಲಿಗೆ ಕರೆದೊಯ್ದಿದ್ದು, ಹೆಚ್ಚಿನವರನ್ನು ಕ್ರೈಸ್ತರಾಗಿ ಮತಾಂತರ ಮಾಡಿರುವ ಶಂಕೆಯಿದೆ. ಈ ಬಗ್ಗೆ ಪೊಲೀಸರು ಕಿಡ್ನಾಪ್, ಮತಾಂತರ ಸೇರಿದಂತೆ ಹಲವು ಸೆಕ್ಷನ್ ಅಡಿ ಕೇಸು ದಾಖಲಿಸಿ ಕೈಲಾಶ್ ನನ್ನು ಬಂಧಿಸಿದ್ದಾರೆ. ಕೋರ್ಟಿಗೆ ಹಾಜರಾಗಿದ್ದ ಉತ್ತರ ಪ್ರದೇಶ ಹೆಚ್ಚುವರಿ ಅಡ್ವಕೇಟ್ ಜನರಲ್ ಪಿ.ಕೆ ಗಿರಿ, ಹಮೀರ್ ಪುರ್ ಗ್ರಾಮದಿಂದ ಹಲವರನ್ನು ಕ್ರೈಸ್ತರ ಸಮಾವೇಶಕ್ಕೆ ಕರೆದೊಯ್ಯಲಾಗಿದೆ. ಹಿಂತಿರುಗಿ ಬರುವಾಗ ಹಣವನ್ನೂ ನೀಡಿ ಕಳಿಸಿದ್ದಾರೆ. ಆರ್ಟಿಕಲ್ 25 ಪ್ರಕಾರ, ದೇಶದಲ್ಲಿ ಯಾವುದೇ ಧರ್ಮವನ್ನು ಅನುಸರಿಸುವುದಕ್ಕೆ ಅವಕಾಶ ಇದೆ. ಆದರೆ ಯಾರನ್ನೂ ನಂಬಿಕೆ, ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ರಾಮಪಾಲ್ ಮಾತ್ರವಲ್ಲದೆ, ಹಮೀರ್ ಪುರ್ ಜಿಲ್ಲೆಯಿಂದ ತೆರಳಿರುವ ಹಲವಾರು ಮತಾಂತರ ಆಗಿದ್ದಾರೆಂದು ಕೋರ್ಟ್ ಮುಂದೆ ಕೆಲವರು ಸಾಕ್ಷಿ ಹೇಳಿದ್ದಾರೆ. ಇದನ್ನು ಆಧರಿಸಿ ತೀರ್ಪು ನೀಡಿದ ನ್ಯಾಯಾಧೀಶರು, ಮತಾಂತರ ಉದ್ದೇಶದ ಸಮಾವೇಶಗಳನ್ನು ಕೂಡಲೇ ತಡೆಯಬೇಕು. ಈ ರೀತಿ ಮುಂದುವರಿದಲ್ಲಿ ದೇಶದಲ್ಲಿ ಮುಂದೊಂದು ದಿನ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಲಿದ್ದಾರೆ. ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಜನರನ್ನು ಆಮಿಷವೊಡ್ಡಿ ಮತಾಂತರಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರಕ್ರಿಯೆಗಳಿಗೆ ತಕ್ಷಣದಿಂದಲೇ ತಡೆ ಒಡ್ಡಬೇಕು ಎಂದು ಹೇಳಿದ್ದಲ್ಲದೆ ಕೈಲಾಶ್ ಪರವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.
Religious congregations where conversions are taking place must be stopped, the Allahabad High Court has said, adding that the country's "majority population would be in minority" if such gatherings are allowed. The high court was hearing yesterday the bail petition of Kailash, who has been accused of taking people from Hamirpur in Uttar Pradesh to a gathering in Delhi for conversions.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm