ಬ್ರೇಕಿಂಗ್ ನ್ಯೂಸ್
10-07-24 12:25 pm Mangalore Correspondent ದೇಶ - ವಿದೇಶ
ಮುಂಬೈ, ಜುಲೈ.10: ತಂದೆ - ಮಗ ಚಲಿಸುತ್ತಿರುವ ರೈಲಿನ ಮುಂದೆ ಮಲಗಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯದ ವಿಡಿಯೋ ಎದೆ ನಡುಗಿಸುವಂತಿದೆ.
ಸೋಮವಾರ ಬೆಳಗ್ಗೆ 11:30 ರ ಸುಮಾರಿಗೆ ಮೀರಾ ಬಯಾಂದರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 60 ವರ್ಷದ ಹರೇಶ್ ಮೆಹತಾ ಹಾಗೂ ಅವರ ಮಗ ಜಯ್ ಮೆಹತಾ ಫ್ಲಾಟ್ ಫಾರಂ ನಂಬರ್ 6 ರಲ್ಲಿ ಲೋಕಾಭಿರಾಮವಾಗಿ ಮಾತನಾಡಿಕೊಂಡು ಹೋಗುತ್ತಿರುತ್ತಾರೆ.
ಈ ವಿಡಿಯೋ ಗಮನಿಸಿದರೆ ಅವರುಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವಿದೆ ಎಂಬ ಕುರಿತು ಲವಲೇಶವೂ ಗೊತ್ತಾಗುವುದಿಲ್ಲ. ಅಲ್ಲದೆ ಇದೇ ಸಂದರ್ಭದಲ್ಲಿ ಲೋಕಲ್ ರೈಲು ಒಂದು ಹಾದು ಹೋಗುತ್ತದೆ. ಅಪ್ಪ – ಮಗ ನಡೆದುಕೊಂಡು ಹೋಗಿ ಪ್ಲಾಟ್ ಫಾರಂ ಅಂಚಿನಲ್ಲಿದ್ದ ರೈಲ್ವೆ ಟ್ರ್ಯಾಕಿನಲ್ಲಿ ಇಳಿಯುತ್ತಾರೆ. ನಂತರ ಎದುರಿನಿಂದ ಬರುತ್ತಿದ್ದ ಚರ್ಚ್ ಗೇಟ್ ಕಡೆ ತೆರಳುತ್ತಿದ್ದ ರೈಲಿನ ಮುಂದೆ ಹಳಿಗಳ ಮೇಲೆ ಕೈ ಕೈ ಹಿಡಿದುಕೊಂಡು ಮಲಗಿದ್ದು, ಕ್ಷಣಾರ್ಧದಲ್ಲಿ ಅವರ ಮೇಲೆ ರೈಲು ಹಾದು ಹೋಗುತ್ತದೆ. ಇದರ ಪರಿಣಾಮ ಇಬ್ಬರೂ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಹರೇಶ್ ಮೆಹತಾ ಪತ್ನಿ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದರು ಎನ್ನಲಾಗಿದ್ದು, ಕಳೆದ ವರ್ಷವಷ್ಟೇ ಅವರ ಮಗ ಜೈ ಮೆಹತಾಗೆ ವಿವಾಹವಾಗಿತ್ತು. ಯಾವ ಕಾರಣಕ್ಕೆ ಅಪ್ಪ – ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಆದರೆ ಮನೆಯಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
SHOCKING - मुंबई से सटे भायंदर स्टेशन पर पिता-पुत्र ने लोकल ट्रेन के सामने कूदकर की आत्महत्या।@grpmumbai ADR दर्ज कर पूरे मामले की जांच में जुटी। @News18India @RailMinIndia @WesternRly @rpfwr1 @RPFCRBB @cpgrpmumbai @mumbairailusers @mumbaimatterz pic.twitter.com/GpzYXsQuEE
— Diwakar Singh (@Diwakar_singh31) July 9, 2024
In a tragic incident, a man and his father died by suicide by lying in front of a train approaching towards them in Maharashtra. The incident, captured on CCTV, happened at Bhayandar railway station, around 32 kilometers from Mumbai.
05-02-25 12:29 pm
Bangalore Correspondent
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am