ಬ್ರೇಕಿಂಗ್ ನ್ಯೂಸ್
10-07-24 06:43 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 10: ವಿಚ್ಛೇದಿತ ಮುಸ್ಲಿಂ ಮಹಿಳೆಗೂ ತನ್ನ ಗಂಡನಿಂದ ಜೀವನಾಂಶ ಕೇಳುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸಿಆರ್ ಪಿಸಿ 125 ಪ್ರಕಾರ, ದೇಶದ ಜಾತ್ಯತೀತ ಕಾನೂನಿನಡಿ ಧರ್ಮ ಭೇದ ಇಲ್ಲದೆ ಎಲ್ಲ ಮಹಿಳೆಯರಿಗೂ ಸಮಾನತೆ ನೀಡಿದ್ದು, ಮುಸ್ಲಿಂ ವಿಚ್ಛೇದಿತ ಮಹಿಳೆಗೂ ಜೀವನಾಂಶ ಪಡೆಯುವ ಹಕ್ಕನ್ನು ನೀಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತೆಲಂಗಾಣ ರಾಜ್ಯದ ಅಬ್ದುಲ್ ಸಮದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಸ್ಟಿಸ್ ಬಿವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮ್ಯಾಸಿ ಪ್ರತ್ಯೇಕ ತೀರ್ಪು ನೀಡಿದ್ದು, ಇದರಲ್ಲಿ ಮುಸ್ಲಿಮ್ ಮಹಿಳೆಯ ಹಕ್ಕನ್ನು ಎತ್ತಿ ಹಿಡಿದಿದ್ದಾರೆ. ಅಬ್ದುಲ್ ಸಮದ್ ಅರ್ಜಿಯನ್ನು ವಜಾ ಮಾಡಿದ್ದಾರೆ. ಹೈದರಾಬಾದಿನ ಕೌಟುಂಬಿಕ ನ್ಯಾಯಾಲಯ ಅಬ್ದುಲ್ ಸಮದ್ ತನ್ನ ವಿಚ್ಛೇದಿತ ಪತ್ನಿಗೆ ಪ್ರತಿ ತಿಂಗಳು ತಲಾ ಹತ್ತು ಸಾವಿರ ರೂ. ಪರಿಹಾರ ರೂಪದಲ್ಲಿ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತ್ತು. ಇದನ್ನು ಅಬ್ದುಲ್ ಸಮದ್ ತೆಲಂಗಾಣ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದು, ಸಿಆರ್ ಪಿಸಿ 125 ಕಾನೂನು ಮುಸ್ಲಿಂ ವಿಚ್ಛೇದಿತ ಮಹಿಳೆಯರಿಗೆ ಒಳಪಡುವುದಿಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಜೀವನಾಂಶ ಕೇಳುವ ಹಾಗಿಲ್ಲ ಎಂದು ವಾದಿಸಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯದ ತೀರ್ಪಿನ ಬಗ್ಗೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ಮುಂದೆ ಇದೇ ಪ್ರಶ್ನೆ ಬಂದಾಗ, ಸಿಆರ್ ಪಿಸಿ 125 ದೇಶದ ಎಲ್ಲ ಮಹಿಳೆಯರಿಗೂ ಅನ್ವಯಿಸುತ್ತದೆ. ಅದರಲ್ಲಿ ಮುಸ್ಲಿಂ ಎಂಬ ಭೇದ ಬರುವುದಿಲ್ಲ. ದೇಶದ ಜಾತ್ಯತೀತ ಸಂವಿಧಾನ ಎಲ್ಲರಿಗೂ ಒಂದೇ ರೀತಿಯದು ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ. ವಿಚ್ಛೇದಿತ ಮುಸ್ಲಿಂ ಮಹಿಳೆ ಸಿಆರ್ ಪಿಸಿ 125 ಪ್ರಕಾರ, ಜೀವನಾಂಶ ಹಕ್ಕು ಕೇಳುವುದಕ್ಕೆ ಅರ್ಹತೆ ಹೊಂದಿರುತ್ತಾಳೆ. 1986ರ ವಿಚ್ಛೇದನ ಹಕ್ಕಿನ ರಕ್ಷಣೆ ಕಾನೂನಿನಡಿ ಮುಸ್ಲಿಂ ಮಹಿಳೆಯರಿಗೆ ಪರಿಹಾರ ಕೇಳುವ ಹಕ್ಕು ಇರಲಿಲ್ಲ. 2019ರಲ್ಲಾದ ತಿದ್ದುಪಡಿ ಮಸೂದೆಯಲ್ಲಿ (ಮದುವೆ ಹಕ್ಕುಗಳ ರಕ್ಷಣೆ -2019) ಮಹಿಳೆಗೆ ಹೆಚ್ಚುವರಿ ಹಕ್ಕುಗಳನ್ನು ಕೊಡಲಾಗಿದೆ ಎಂದಿದ್ದಾರೆ.
ಶಾ ಬಾನೋ ಪ್ರಕರಣದಲ್ಲಿ ಈ ಹಿಂದೆಯೂ ಸಿಆರ್ ಪಿಸಿ 125 ದೇಶದ ಎಲ್ಲ ಮಹಿಳೆಯರಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. 1986ರ ವಿಚ್ಛೇದನ ಕಾನೂನು ಮುಸ್ಲಿಂ ಮಹಿಳೆಯರ ಹಕ್ಕನ್ನು ಮೊಟಕುಗೊಳಿಸಿದರೂ, ಸಿಆರ್ ಪಿಸಿ 125 ಪ್ರಕಾರ ಮಹಿಳೆ ಹಕ್ಕು ಸ್ಥಾಪಿಸಿದರೆ ಅದನ್ನು ಮಾನ್ಯತೆ ಮಾಡಬೇಕಾಗುತ್ತದೆ. ಮುಸ್ಲಿಮ್ ಲಾ ಬೋರ್ಡ್ ಗಿಂತ ದೇಶದ ಸೆಕ್ಯುಲರ್ ಸಂವಿಧಾನ ಶ್ರೇಷ್ಠ ಎಂದು 2001ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
The Supreme Court on Wednesday said that a Muslim woman is entitled to maintenance from her husband under Section 125 of the Code of Criminal Procedure (CrPc). The bench comprising Justices BV Nagarathna and Augustine George Masih dismissed a petition in the case, in which the man filed a plea against the direction to pay interim maintenance to his divorced wife under Section 125 CrPC.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am