ಬ್ರೇಕಿಂಗ್ ನ್ಯೂಸ್
12-07-24 03:49 pm HK News Desk ದೇಶ - ವಿದೇಶ
ಕಾಠ್ಮಂಡು, ಜುಲೈ 12: ಪರ್ವತಗಳ ನಡುವಿನ ಹೆದ್ದಾರಿಯಲ್ಲಿ ಭೂಕುಸಿತದಿಂದಾಗಿ ಎರಡು ಪ್ಯಾಸೆಂಜರ್ ಬಸ್ಸುಗಳು ನದಿಗೆ ಉರುಳಿ ಬಿದ್ದಿದ್ದು, ಅದರಲ್ಲಿದ್ದ ಸುಮಾರು 60 ಮಂದಿ ಕೊಚ್ಚಿ ಹೋಗಿರುವ ಘಟನೆ ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ 120 ಕಿಮೀ ದೂರದ ಸಿಮಲ್ಟಾಲ್ ಎಂಬಲ್ಲಿ ನಡೆದಿದೆ.
ದಕ್ಷಿಣ ನೇಪಾಳದಲ್ಲಿ ಭಾರೀ ಮಳೆಯಾಗುತ್ತಿದ್ದು, ತ್ರಿಶೂಲಿ ನದಿ ಪರ್ವತಗಳ ಎಡೆಯಿಂದ ಧುಮ್ಮಿಕ್ಕಿ ಹರಿಯುವ ಜಾಗದಲ್ಲೇ ಭೂಕುಸಿತ ಸಂಭವಿಸಿದೆ. ಶುಕ್ರವಾರ ನಸುಕಿನ ಜಾವ 3 ಗಂಟೆ ವೇಳೆಗೆ ಹಠಾತ್ ಭೂಕುಸಿತ ಆಗಿದ್ದು, ಹೆದ್ದಾರಿಯಲ್ಲಿ ಸಾಗುತ್ತಿದ್ದ ಎರಡು ಬಸ್ಸುಗಳು ನದಿಗೆ ಉರುಳಿ ಬಿದ್ದಿದೆ. ಕಾಠ್ಮಂಡುವಿನ ಏಂಜೆಲ್ ಬಸ್ಸಿನಲ್ಲಿ 24 ಮತ್ತು ಇನ್ನೊಂದು ಗಣಪತಿ ಡಿಲಕ್ಸ್ ಬಸ್ಸಿನಲ್ಲಿ 42 ಮಂದಿ ಇದ್ದರು ಎನ್ನಲಾಗಿದೆ. ಆದರೆ ದಾರಿ ಮಧ್ಯೆ ಬಸ್ಸನ್ನೇರಿದವರ ಲೆಕ್ಕ ಇಲ್ಲ. ಹೀಗಾಗಿ ಈ ಸಂಖ್ಯೆ ಹೆಚ್ಚಿರಲೂಬಹುದು. ಈ ಪೈಕಿ ಆರು ಮಂದಿ ಭಾರತೀಯ ಮೂಲದವರಿದ್ದಾರೆ. ಪೊಲೀಸರು, ಸ್ಕೂಬಾ ಡೈವರ್ ಗಳು ಇಳಿಜಾರಿನಲ್ಲಿ ಹರಿಯುವ ನದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾವುದೇ ಮೃತದೇಹ ಪತ್ತೆಯಾಗಿಲ್ಲ ಎಂದು ಚಿತ್ವಾನ್ ಜಿಲ್ಲೆಯ ಜಿಲ್ಲಾಧಿಕಾರಿ ಖಿಮಾನಂದ ಭೂಸಾಲ್ ತಿಳಿಸಿದ್ದಾರೆ.
ಗಣಪತಿ ಡಿಲಕ್ಸ್ ಬಸ್ ಉರುಳಿ ಬೀಳುತ್ತಿದ್ದಾಗಲೇ ಅದರಿಂದ ಮೂವರು ಪ್ರಯಾಣಿಕರು ಹೊರಗೆ ಹಾರಿದ್ದು, ನೀರಿನಲ್ಲಿ ಈಜಿ ದಡ ಸೇರಿದ್ದಾರೆ. ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಿಮಾಲಯ ರಾಜ್ಯ ನೇಪಾಳದಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ಭಾರೀ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಪರ್ವತ ಮಧ್ಯೆ ಭೂಕುಸಿತ ಸಾಮಾನ್ಯ ಎನ್ನುವಂತಾಗಿದೆ. ತ್ರಿಶೂಲಿ ನದಿಯಿರುವ ಹೆದ್ದಾರಿಯಲ್ಲೇ ಶುಕ್ರವಾರ ಮುಂಜಾನೆ ಮತ್ತೊಂದು ಬಸ್ ಪ್ರವಾಹಕ್ಕೆ ಸಿಲುಕಿದ್ದು, ಅದರಲ್ಲಿ ಚಾಲಕ ಮೃತಪಟ್ಟಿದ್ದಾರೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ನೇಪಾಳ, ಹಿಮಾಚಲದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಸ್ಸಾಮ್ ನಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ.
A landslide swept two passenger buses carrying more than 50 people into a swollen river in central Nepal early Friday, while continuous rain and more landslides were making rescue efforts difficult.
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm