ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿದ್ದ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ; ಸ್ವಲ್ಪದರಲ್ಲಿ ಸಾವಿನಿಂದ ಪಾರಾದ ಮಾಜಿ ಅಧ್ಯಕ್ಷ 

14-07-24 12:16 pm       HK News Desk   ದೇಶ - ವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾಗ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.

ನವದೆಹಲಿ, ಜುಲೈ 14: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾಗ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಪೆನ್ಸಿಲ್ವೇನಿಯಾ ನಗರದ ಬಟ್ಲರ್‌ ಎಂಬಲ್ಲಿ ಡೊನಾಲ್ಡ್‌ ಟ್ರಂಪ್ ಚುನಾವಣಾ ರ‍್ಯಾಲಿ ನಡೆಸುತ್ತಿದ್ದಾಗ ದಾಳಿ ನಡೆದಿದೆ. 

ಗುಂಡಿನ ದಾಳಿ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು ಬಂದೂಕುಧಾರಿ ಮತ್ತು ಸ್ಥಳದಲ್ಲಿದ್ದ ಪ್ರೇಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಟ್ರಂಪ್ ಮುಖದ ಭಾಗಕ್ಕೆ ಗಾಯಗೊಂಡಿದ್ದಾರೆ. ಗುಂಡಿನ ಸದ್ದು ಕೇಳಿದ ಕೂಡಲೇ ಭದ್ರತಾ ಅಧಿಕಾರಿಗಳು ಟ್ರಂಪ್ ಅವರನ್ನು ಸುತ್ತುವರಿದಿದ್ದರು. ಆದರೂ ಗುಂಡು ಟ್ರಂಪ್ ಅವರ ಮುಖ ಸವರಿಕೊಂಡು ಹೋಗಿದೆ. ಕಿವಿಯ ಬಳಿ ರಕ್ತ ಸೋರುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಈ ದಾಳಿಯನ್ನು ಖಂಡಿಸಿದ್ದಾರೆ. 

1981 ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಧ್ಯಕ್ಷೀಯ ಅಭ್ಯರ್ಥಿಯನ್ನು ಚುನಾವಣೆ ವೇಳೆ ಹತ್ಯೆ ನಡೆದಿರಲಿಲ್ಲ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಈ ದಾಳಿ ನಡೆದಿದ್ದು ಜಗತ್ತಿನ ಕುತೂಹಲ ಕೆರಳಿಸಿದೆ. ಸೋಷಿಯಲ್ ಆಪ್‌ನಲ್ಲಿ ಟ್ರಂಪ್‌ ಪ್ರತಿಕ್ರಿಯೆ ನೀಡಿದ್ದು, ನನ್ನ ಬಲ ಕಿವಿಗೆ ಗುಂಡು ತಾಗಿತ್ತು. ಬಲ ಕಿವಿಯ ಮೇಲ್ಭಾಗ ಹರಿದಿದೆ. ವೇಗದ ಸದ್ದು ಕಿವಿಯ ಭಾಗದಲ್ಲಿ ಕೇಳಿದಾಗ ಏನೋ ಎಡವಟ್ಟಾಗಿದೆ ಎಂಬುದನ್ನು ಅರಿತುಕೊಂಡೆ. ಅಷ್ಟರಲ್ಲಾಗಲೇ ಬುಲೆಟ್ ನನ್ನ ಕಿವಿಯನ್ನು ಸೀಳಿತ್ತು. ನಮ್ಮ ದೇಶದಲ್ಲಿ ಈ ರೀತಿ ಕೃತ್ಯ ನಡೆಯುತ್ತಿದೆ ಎಂಬುದನ್ನೇ ನಂಬಲಾಗುತ್ತಿಲ್ಲ" ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

Former United States President Donald Trump has been shot in the ear during a campaign rally in an attack that drew condemnation from leading Republicans and Democrats and is being investigated as an assassination attempt.