ಬ್ರೇಕಿಂಗ್ ನ್ಯೂಸ್
14-07-24 06:14 pm HK News Desk ದೇಶ - ವಿದೇಶ
ತಿರುವನಂತಪುರ, ಜುಲೈ.14: ಮಹಾಭಾರತದಲ್ಲಿ ಕೌರವ- ಪಾಂಡವರ ಯುದ್ಧ ಆಗೋದು, ಅದರಲ್ಲಿ 100 ಜನ ಕೌರವರು ಮತ್ತು ಅವರ ಸೈನ್ಯ ಕೊಲ್ಲಲ್ಪಡುವುದನ್ನು ಕೇಳಿದ್ದೇವೆ. ಆದರೆ, ಸೋದರ ಮಾತ್ಸರ್ಯದಿಂದ ಅನ್ಯಾಯ ಎಸಗಿರುವ ದುರ್ಯೋಧನ ಮತ್ತು ಆತನ ನೂರು ಜನ ಕೌರವ ಸೋದರರನ್ನು ಜನರು ಈಗಲೂ ದೇವರಂತೆ ಪೂಜಿಸುವುದನ್ನು ಕೇಳಿದ್ದೀರಾ..? ಕೇರಳ ರಾಜ್ಯದ ಕೊಲ್ಲಂ ಮತ್ತು ಪತ್ತನಂತಿಟ್ಟ ಜಿಲ್ಲೆಯಲ್ಲಿ ಕೌರವರನ್ನು ಪೂಜಿಸುವ ದೇವಸ್ಥಾನಗಳಿವೆ ಎಂದರೆ ಅಚ್ಚರಿ ಪಡಲೇಬೇಕು.
ಕೊಲ್ಲಂ ಜಿಲ್ಲೆಯ ಬೆಟ್ಟದ ಶಿಖರದಲ್ಲಿ ದುರ್ಯೋಧನನ್ನು ಪೂಜಿಸುವ ದೇವಸ್ಥಾನವಿದ್ದು, ಲಕ್ಷಾಂತರ ಭಕ್ತರು ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಾರೆ. ಮದುವೆಯಾದ ಹೊಸತರಲ್ಲಿ ಈ ದೇವಸ್ಥಾನಕ್ಕೆ ಬರುವುದು, ಇಲ್ಲಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆ ಇದೆ. ಹೀಗಾಗಿ ನವ ವಧೂವರರು ದುರ್ಯೋಧನ ದೇವಸ್ಥಾನಕ್ಕೆ ಬರುವುದು ರೂಢಿಯಾಗಿ ಬೆಳೆದಿದೆ. ಅಂದಹಾಗೆ, ಇಲ್ಲಿನ ಸುತ್ತಲಿನ 50 ಕಿಮೀ ವ್ಯಾಪ್ತಿಯಲ್ಲಿ ದುರ್ಯೋಧನ ಆಪ್ತಮಿತ್ರ ಕರ್ಣ, ಧೂರ್ತ ಬುದ್ಧಿಯ ಶಕುನಿ ಸೇರಿದಂತೆ ಇತರ 99 ಜನ ಕೌರವರ ಹೆಸರಲ್ಲಿ ದೇವಸ್ಥಾನಗಳಿವೆ ಎನ್ನುವ ಮಾತನ್ನು ಸ್ಥಳೀಯರು ಹೇಳುತ್ತಾರೆ.
ಮಹಾಭಾರತದಲ್ಲಿ ಖಳರಾಗಿದ್ದವರನ್ನೂ ಇಲ್ಲಿ ಪೂಜಿಸುತ್ತಾರೆ ಎನ್ನುವುದು ವಿಶೇಷವಾಗಿದ್ದು, ಸ್ಥಳೀಯರ ಪ್ರಕಾರ, ಹಿಂದಿನಿಂದಲೂ ಕೌರವರ ವಂಶಸ್ಥರೇ ಇಲ್ಲಿ ಪೂಜೆ ಮಾಡಿಕೊಂಡು ಬಂದಿದ್ದಾರಂತೆ. ಸ್ಥಳೀಯವಾಗಿ ಈ ದೇವಸ್ಥಾನವನ್ನು ದುರ್ಯೋಧನ ಮಲನಾಡ ಕೊಲ್ಲಂ ಎಂದು ಹೇಳುತ್ತಾರೆ. ಮಲ ಅಂದರೆ, ಬೆಟ್ಟ ಎಂದು ಅರ್ಥ. ಬೆಟ್ಟದ ಮೇಲಿನ ಆಲಯವನ್ನು ನಾಡ ಎನ್ನುತ್ತಾರೆ. ಆದರೆ ಉತ್ತರ ಭಾರತದಲ್ಲಿ ಹಸ್ತಿನಾವತಿ ಎನ್ನುವುದು ಈಗಲೂ ಉತ್ತರ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಹೆಸರು. ಹಸ್ತಿನಾವತಿಯಲ್ಲಿದ್ದ ಕೌರವ- ಪಾಂಡವರು ದೂರದ ಕೇರಳದ ಹಳ್ಳಿಗಾಡಿಗೆ ಹೇಗೆ ಬಂದರು? ಇಲ್ಲಿ ಅವರ ವಂಶಸ್ಥರು ಬೆಳೆದಿದ್ದು ಹೇಗೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ದುರ್ಯೋಧನನಿಗೂ ಶೇಂದಿ ಕೊಟ್ಟಿದ್ದರಂತೆ
ಇಲ್ಲಿರುವ ಪ್ರತೀತಿ ಪ್ರಕಾರ, ಪಾಂಡವರು ಒಮ್ಮೆ ಹಸ್ತಿನಾವತಿಯಿಂದ ತಪ್ಪಿಸಿಕೊಂಡು ತೆರಳುತ್ತಾರೆ. ಅದರ ಬೆನ್ನಲ್ಲೇ ಕೌರವರು ಕೂಡ ಪಾಂಡವರ ಪತ್ತೆಗಾಗಿ ಹುಡುಕಾಟ ಶುರು ಮಾಡುತ್ತಾರೆ. ಅದೇ ವೇಳೆಗೆ, ಊರೂರು ತಿರುಗಾಡಿ ದಣಿದಿದ್ದ ದುರ್ಯೋಧನ ತನ್ನವರ ಜೊತೆಗೆ ಕೇರಳದ ಈ ಮಲೆನಾಡ ಪ್ರದೇಶಕ್ಕೆ ಬರುತ್ತಾನೆ. ಈ ಜಾಗದಲ್ಲಿ ಅರ್ಚಕ ಕೆಲಸ ಮಾಡುತ್ತಿದ್ದ, ಕೌರವ ಸಮುದಾಯದ ಅಪ್ಪೊಪ್ಪಾನ್ ಎಂಬವರ ಮನೆಗೆ ಬರುತ್ತಾನಂತೆ. ಮನೆಯಲ್ಲಿದ್ದ ಹಿರಿಯಾಕೆ ಬಂದವರಿಗೆ ಆತಿಥ್ಯ ಕೊಟ್ಟು ದುರ್ಯೋಧನನಿಗೆ ತೆಂಗಿನ ಮರದಿಂದ ತೆಗೆದಿದ್ದ ಶೇಂದಿಯನ್ನು ಕುಡಿಯಲು ಕೊಡುತ್ತಾರಂತೆ. ಆತಿಥ್ಯದಿಂದ ಆನಂದಗೊಂಡ ದುರ್ಯೋಧನ ಮುಂದಿನ ಶುಕ್ರವಾರವೂ ಬರುತ್ತೇನೆ. ಒಂದು ವೇಳೆ ಬರದೇ ಇದ್ದರೆ, ನಾನು ಸತ್ತಿದ್ದೇನೆಂದು ತಿಳಿದು ನನ್ನ ಹೆಸರಲ್ಲಿ ಅಂತ್ಯವಿಧಿಗಳನ್ನು ಕೈಗೊಳ್ಳಿ ಎಂದು ಹೇಳಿದ್ದ. ದುರ್ಯೋಧನ ಮತ್ತೆಂದೂ ಇಲ್ಲಿಗೆ ಬರಲಿಲ್ಲ. ಹೀಗಾಗಿ ದುರ್ಯೋಧನನ ಆತ್ಮ ಇಲ್ಲಿಯೇ ಇದ್ದು ಪರಮಾತ್ಮನ ರೂಪದಲ್ಲಿ ಪೂಜಿಸುತ್ತಿದ್ದೇವೆಂಬ ಭಾವನೆ ಜನರಲ್ಲಿದೆ. ಇದೇ ಕಾರಣಕ್ಕೆ ಪ್ರತಿ ಶುಕ್ರವಾರ ಇಲ್ಲಿ ವಿಶೇಷವಾಗಿದೆ ಎಂದು ದೇವಸ್ಥಾನದ ಮ್ಯಾನೇಜಿಂಗ್ ಕಮಿಟಿ ಅಧ್ಯಕ್ಷ ರವಿ ಮಲನಾಡ ಇಂಡಿಯಾ ಟುಡೇಗೆ ಹೇಳಿದ್ದಾರೆ.
ಇಲ್ಲಿಗೆ ದುರ್ಯೋಧನ ಬಂದಿದ್ದಾನೋ, ಇಲ್ಲವೋ ಎನ್ನುವುದರ ಬಗ್ಗೆ ಕೆಲವರಲ್ಲಿ ಜಿಜ್ಞಾಸೆ ಇದೆ. ಆದ್ರೆ, ಈಗಲೂ ದುರ್ಯೋಧನ ಹೆಸರಿನಲ್ಲಿಯೇ ಇಲ್ಲಿ ಭೂ ತೆರಿಗೆಯನ್ನು ಸರಕಾರಕ್ಕೆ ಕಟ್ಟಲಾಗುತ್ತದೆ. ದೇವಸ್ಥಾನದ ಕುರಿತಾಗಿ ನಾನಾ ರೀತಿಯ ಕತೆಗಳೂ ಇಲ್ಲಿವೆ. ಆದರೆ ಅಪ್ಪೊಪ್ಪಾನ್ ಕಟ್ಟಿಸಿದ ದೇವಸ್ಥಾನವೆಂದು ಜಾತಿ, ಧರ್ಮದ ಭೇದವಿಲ್ಲದೆ ಇಲ್ಲಿಗೆ ಭಕ್ತರು ಬರುತ್ತಾರೆ ಎಂದು ರವಿ ಮಲನಾಡ ಹೇಳುತ್ತಾರೆ.
ಶಕುನಿ, ಕರ್ಣ, ದುಶ್ಶಲೆಗೂ ದೇವಸ್ಥಾನ
ಪಾಂಡವ- ಕೌರವರ ಮಧ್ಯೆ ಸೇಡು ಮೂಡಿಸಿ, ಮಹಾಭಾರತ ಯುದ್ಧಕ್ಕೆ ಕಾರಣವಾಗಿದ್ದ ಮಾವ ಶಕುನಿಯ ಹೆಸರಿನಲ್ಲೂ ಕೊಲ್ಲಂ ಜಿಲ್ಲೆಯಲ್ಲಿ ದೇವಸ್ಥಾನ ಇದೆ. ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಶಕುನಿ, ಇಲ್ಲಿನ ಪವಿತ್ರೇಶ್ವರಮ್ ದೇವಸ್ಥಾನದಲ್ಲಿ ಬಂದು ನೆಲೆಗೊಂಡಿದ್ದಾನೆಂದು ಜನರು ನಂಬುತ್ತಾರೆ. ಹಿಂದು ಪುರಾಣಗಳ ಬಗ್ಗೆ ಅಧ್ಯಯನ ಮಾಡಿರುವ ಸುನಿಲ್ ಇಲಿಯಾಡಮ್ ಪ್ರಕಾರ, ನಾವು ರಾಮಾಯಣ, ಮಹಾಭಾರತವನ್ನು ಏಕಪ್ರಕಾರದಲ್ಲಿ ನೋಡುವುದು ಸರಿಯಲ್ಲ. ಬೇರೆ ಬೇರೆ ಸಮಾಜಗಳಲ್ಲಿ ಇದರ ಬಗ್ಗೆ ತಮ್ಮದೇ ಆದ ಅಭಿಪ್ರಾಯ, ನಂಬಿಕೆಗಳಿರುತ್ತವೆ. ಇತಿಹಾಸ, ಸಾಮಾಜಿಕ ದೃಷ್ಟಿಕೋನ ಆಧರಿಸಿ ತಮ್ಮದೇ ಕತೆಗಳನ್ನು ನಂಬುತ್ತಾರೆ. ಹಿಂದು ಪುರಾಣ ಗ್ರಂಥಗಳು ಇಡೀ ದೇಶವ್ಯಾಪಿಯಾಗಿ ಹರಡಿಕೊಂಡಿರುವುದಕ್ಕೆ ಇದೇ ಸಾಕ್ಷಿ ಎಂದು ಹೇಳುತ್ತಾರೆ.
ದುರ್ಯೋಧನ ದೇವಸ್ಥಾನಕ್ಕಿಂತ 14 ಕಿಮೀ ದೂರದಲ್ಲಿ ಪವಿತ್ರೇಶ್ವರಮ್ ದೇವಾಲಯ ಇದೆ. ಇದನ್ನು ಮಲನಾಡ ಮಹಾದೇವ ಶಕುನಿ ದೇಗುಲ ಎಂದು ಕರೆಯಲಾಗುತ್ತದೆ. ಇದೇ ದೇಗುಲ ಪರಿಸರದಲ್ಲಿ ಶಕುನಿ ಮತ್ತು ಇತರ ಕೌರವರು ಸೇರಿ ತಮ್ಮ ಆಯುಧಗಳನ್ನು ಮೊನೆಗೊಳಿಸಿ, ಯುದ್ಧಕ್ಕೆ ತಯಾರಾಗಿದ್ದರಂತೆ. ಅದಕ್ಕೆ ಸಾಕ್ಷಿ ಎನ್ನುವಂತೆ, ಈಗಲೂ ಇಲ್ಲಿನ ಆವರಣದಲ್ಲಿ ಬಾಣ, ಕತ್ತಿಗಳನ್ನು ಹರಿತಗೊಳಿಸುವ ವಿಶೇಷ ರೀತಿಯ ಕಲ್ಲುಗಳಿವೆಯಂತೆ. ಇಲ್ಲಿರುವ ಕಪ್ಪು ಕಲ್ಲಿನ ಬಂಡೆಯಲ್ಲಿ ಕುಳಿತು ಶಕುನಿ, ಮೋಕ್ಷಕ್ಕಾಗಿ ಶಿವನನ್ನು ಆರಾಧಿಸಿದ್ದನಂತೆ. ಹೀಗಾಗಿ ಅದು ಪವಿತ್ರ ಕಲ್ಲು ಎಂದು ಸ್ಥಳೀಯರು ನಂಬುತ್ತಾರೆ. ಇಲ್ಲಿಂದ 30 ಕಿಮೀ ಪ್ರಯಾಣಿಸಿದರೆ, ಕುನ್ನತ್ತೂರಿನಲ್ಲಿ ಕರ್ಣನ ದೇವಸ್ಥಾನ ಸಿಗುತ್ತದೆ.
ಪೊರುವಾಝಿಯಲ್ಲಿರುವ ದುರ್ಯೋಧನ ದೇವಸ್ಥಾನದಿಂದ 6 ಕಿಮೀ ಅಂತರದಲ್ಲಿ 100 ಕೌರವರ ಒಬ್ಬಳೇ ತಂಗಿ ದುಶ್ಶಲೆಯ ಹೆಸರಿನಲ್ಲಿ ದೇವಸ್ಥಾನ ಇದೆ. ಈ ಜಾಗಕ್ಕೆ ಸೂರನಾಡ್ ಎಂದು ಕರೆಯುತ್ತಾರೆ. ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ದುಶ್ಶಲೆ ಇಲ್ಲಿಗೆ ಬರುತ್ತಾಳಂತೆ. ಇಲ್ಲಿನ ಭತ್ತದ ಗದ್ದೆಯ ನಡುವೆ ಕುಡಿಯಲು ನೀರಿಗಾಗಿ ಒಂದು ಕೋಲನ್ನು ಬಳಸಿ ಗುಂಡಿ ತೋಡುತ್ತಾಳಂತೆ. ಆಕೆಯ ಹೆಸರಿನ ದೇವಸ್ಥಾನದಲ್ಲಿ ಈಗಲೂ ಇಲ್ಲಿನದ್ದೇ ನೀರನ್ನು ಬಳಸುತ್ತಾರೆ. ಮತ್ತು ಇದೇ ಗದ್ದೆಯ ಭತ್ತವನ್ನೂ ಬಳಸುತ್ತಿದ್ದಾರೆ. ದಕ್ಷಿಣ ಕೇರಳದಲ್ಲಿ ಕೌರವರ ಹೆಸರಿನಲ್ಲಿ 101 ದೇವಸ್ಥಾನಗಳು ಹರಡಿಕೊಂಡಿದ್ದು, ಆದರೆ ಅವು ಎಲ್ಲೆಲ್ಲಿ ಇದೆಯೆಂದು ಸ್ಪಷ್ಟವಾಗಿ ಗುರುತಿಸುವುದು ಕಷ್ಟ ಎಂದು ರವಿ ಮಲನಾಡ ಹೇಳುತ್ತಾರೆ.
ದುರ್ಯೋಧನ, ಶಕುನಿಯ ದೇವಸ್ಥಾನ ಆಗಿದ್ದರೂ, ಇಲ್ಲಿ ಹಿಂದು ಪದ್ಧತಿಯ ರೀತಿ ಹೆಚ್ಚಿನ ಕಟ್ಟುನಿಟ್ಟು ಇಲ್ಲ. ಭಕ್ತರು ತಮ್ಮ ಪೂರ್ವಜ ಅಪ್ಪೊಪ್ಪಾನ್ ಅವರು ಕಟ್ಟಿಸಿದ ದೇವಸ್ಥಾನ ಎಂದು ಭಕ್ತಿಯಿಂದ ನಮಿಸುತ್ತಾರೆ. ಭಕ್ತರು ತಮಗೆ ತೋಚಿದ ರೀತಿ ಅರ್ಚನೆ ಮಾಡುತ್ತಾರೆ. ಭಜನೆ, ಜಾಗಟೆ, ಡ್ರಮ್ ಬಾರಿಸುವುದನ್ನು ಮಾಡುತ್ತಾರೆ. ನಿರ್ದಿಷ್ಟವಾಗಿ ಇಂಥದ್ದೇ ಮಾಡಬೇಕೆಂಬ ನಿಯಮ ಎಂಬುದಿಲ್ಲ. ದುರ್ಯೋಧನ ದೇವಸ್ಥಾನದಲ್ಲಿ ಮೂರ್ತಿ ಇಲ್ಲದಿದ್ದರೂ, ಭಕ್ತರು ತಮ್ಮಲ್ಲೇ ಕಲ್ಪಿಸಿಕೊಂಡು ಪೂಜೆ ನೆರವೇರಿಸುತ್ತಾರೆ. ಕೌರವ ಸಮುದಾಯ ಕೇರಳದಲ್ಲಿ ಹಿಂದುಳಿದ ಜನಾಂಗವಾಗಿದ್ದು, ಹೆಚ್ಚಿನ ಹಿಂದುಳಿದವರು ತಮ್ಮದೇ ದೇವಸ್ಥಾನ ಎಂದು ಇಲ್ಲಿ ಬರುತ್ತಿದ್ದಾರೆ. ದೇವರಿಗೆ ಶೇಂದಿ, ಮದ್ಯ, ಕೋಳಿ, ಆಡಿನ ಪದಾರ್ಥವನ್ನೇ ಅರ್ಪಣೆ ಮಾಡುತ್ತಿದ್ದು, ಇದನ್ನೇ ಪ್ರಸಾದ ಎಂದು ಭಕ್ತರಿಗೆ ನೀಡುತ್ತಾರೆ. 2019ರಲ್ಲಿ ಭಕ್ತರೊಬ್ಬರು ಓಲ್ಡ್ ಮಾಂಕ್ ರಮ್ ಬ್ರಾಂಡಿನ 101 ಬಾಟಲಿಗಳನ್ನು ದೇವರಿಗೆ ಅರ್ಪಿಸಿದ್ದು ಸುದ್ದಿಯಾಗಿತ್ತು. (ಮಾಹಿತಿ- ಇಂಡಿಯಾ ಟುಡೇ)
Duryodhana is worshipped in a temple in Kerala's Kollam that attracts lakhs of devotees every year. It's not just Duryodhana, the 100 Kaurava siblings, Shakuni and Karna all have temples dedicated to them within a radius of 50 km. This is why the Kuruvas of Kerala worship the Kauravas as their ancestors.
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 10:33 pm
Mangalore Correspondent
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
Ullal news, Mangalore, Batapady; ಭ್ರಷ್ಟ ಅಧಿಕಾ...
22-11-24 11:55 am
22-11-24 10:47 pm
Mangalore Correspondent
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm