Oil tanker capsizes off Omans coast: ಒಮಾನ್ ಸಮುದ್ರದಲ್ಲಿ ತೈಲ ಟ್ಯಾಂಕರ್ ಹಡಗು ಮುಳುಗಡೆ ; 13 ಭಾರತೀಯ ಸಿಬಂದಿ ನಾಪತ್ತೆ, ಶೋಧಕ್ಕಿಳಿದ ಭಾರತೀಯ ನೌಕಾಪಡೆ 

17-07-24 03:13 pm       HK News Desk   ದೇಶ - ವಿದೇಶ

ಒಮಾನ್ ಕರಾವಳಿಯ ಸಮುದ್ರದಲ್ಲಿ 117 ಮೀಟರ್ ಉದ್ದದ ಬೃಹತ್ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು 13 ಮಂದಿ ಭಾರತೀಯರು ಸೇರಿ 16 ಸಿಬಂದಿ ನಾಪತ್ತೆಯಾಗಿದ್ದಾರೆ.

ನವದೆಹಲಿ, ಜುಲೈ.17: ಒಮಾನ್ ಕರಾವಳಿಯ ಸಮುದ್ರದಲ್ಲಿ 117 ಮೀಟರ್ ಉದ್ದದ ಬೃಹತ್ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು 13 ಮಂದಿ ಭಾರತೀಯರು ಸೇರಿ 16 ಸಿಬಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 13 ಭಾರತೀಯ ಪ್ರಜೆಗಳು ಹಾಗೂ ಮೂವರು ಶ್ರೀಲಂಕಾ ನಾಗರಿಕರು ಎಂದು ಕಡಲ ಭದ್ರತಾ ಕೇಂದ್ರ ಮಾಹಿತಿ ನೀಡಿದೆ. 

ಕಾಣೆಯಾದವರ ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ. ಆದರೆ ಇಲ್ಲಿಯವರೆಗೆ ಅವರಲ್ಲಿ ಯಾರೊಬ್ಬರ ಕುರುಹೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ‘ಪ್ರೆಸ್ಟೀಜ್ ಫಾಲ್ಕನ್’ ಹೆಸರಿನ ತೈಲ ಟ್ಯಾಂಕರ್ ಒಮಾನ್ ದೇಶದ ಡುಗ್ಮ್ ಬಂದರಿನಿಂದ ಹೊರಟಿದ್ದು ಯೆಮೆಬ್ ದೇಶದತ್ತ ತೆರಳುತ್ತಿತ್ತು.‌

13 Indian Crew Members Among 16 Missing After Ship Capsizes Off Oman

13 Indians among 16 member-crew missing after oil tanker capsizes off Oman  coast | India News - The Indian Express

13 Indians among 16 crew members missing after oil tanker sinks off Oman  coast - India Today

ಶೋಧ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆ ಕೈಜೋಡಿಸಿದ್ದು, ಟ್ಯಾಂಕರ್ ಪತ್ತೆಗೆ ಹುಡುಕಾಟ ಆರಂಭಿಸಿದೆ. ಭಾರತೀಯ ನೌಕಾಪಡೆಯು ಯುದ್ಧ ನೌಕೆ ಐಎನ್ಎಸ್ ನೊಂದಿಗೆ ಹುಡುಕಾಟ ಕಾರ್ಯ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಸಮುದ್ರದಲ್ಲಿ ಹಡಗು ಪಲ್ಟಿಯಾಗಿದೆ ಎನ್ನಲಾಗುತ್ತಿದ್ದು ಅದರಿಂದ ತೈಲ ಸೋರಿಕೆ ಆಗಿದೆಯೇ ಎಂಬ ಬಗ್ಗೆ ದೃಢಪಟ್ಟಿಲ್ಲ.

A Comorian-flagged oil tanker capsized off Oman on Monday, the sultanate's Maritime Security Centre (MSC) said, adding that a search was under way for its missing crew of 16.