IndiGo flight, Microsoft outage impacts: ಮೈಕ್ರೋಸಾಫ್ಟ್ ತಾಂತ್ರಿಕ ದೋಷ ; ಜಗತ್ತಿನಾದ್ಯಂತ ವಿಮಾನ, ಬ್ಯಾಂಕಿಂಗ್ ಸೇವೆ, ಷೇರು ಮಾರುಕಟ್ಟೆ ವ್ಯತ್ಯಯ, ಭಾರತದಲ್ಲಿ 200 ಇಂಡಿಗೋ ವಿಮಾನ ಸೇವೆ ಸ್ಥಗಿತ, ಏರ್ಪೋರ್ಟಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರು, 360 ಏಪ್ಸ್ ಗಳಿಗೂ ತೊಂದರೆ  

19-07-24 10:01 pm       HK News Desk   ದೇಶ - ವಿದೇಶ

ಜಾಗತಿಕ ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ಸೇವೆಯಲ್ಲಿ ಹಠಾತ್ ತಾಂತ್ರಿಕ ದೋಷ ಉಂಟಾಗಿದ್ದು, ಇದರಿಂದಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಉಂಟಾಗಿದೆ.

ನವೆದೆಹಲಿ, ಜುಲೈ.19: ಜಾಗತಿಕ ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ಸೇವೆಯಲ್ಲಿ ಹಠಾತ್ ತಾಂತ್ರಿಕ ದೋಷ ಉಂಟಾಗಿದ್ದು, ಇದರಿಂದಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಉಂಟಾಗಿದೆ. ವಿಮಾನ ನಿಲ್ದಾಣಗಳು, ವಿಮಾನ ಸೇವೆಗಳು, ಷೇರು ಮಾರುಕಟ್ಟೆ ಸೇವೆಗಳು, ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ನಾನಾ ರೀತಿಯಲ್ಲಿ ಕಂಪ್ಯೂಟರ್ ಬಳಕೆಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ವಿಮಾನ ಸೇವೆಯನ್ನು ಸ್ಥಗಿತ ಮಾಡಲಾಗಿದೆ. ಕಂಪ್ಯೂಟರ್ ಪರದೆಗಳಲ್ಲಿ ಬ್ಲೂ ಸ್ಕ್ರೀನ್ ಕಾಣಿಸಿಕೊಂಡು, ಇದ್ದಕ್ಕಿದ್ದಂತೆ ಶಟ್ ಡೌನ್ ಆಗುತ್ತಿವೆ. ತಾಂತ್ರಿಕ ಭಾಷೆಯಲ್ಲಿ ಇದನ್ನು ಬ್ಲೂ ಸ್ಕ್ರೀನ್ ಡೆತ್ ಎಂದು ಕರೆಯಲಾಗಿದೆ. ವಿಮಾನ ನಿಲ್ದಾಣದ ಟಿವಿ ಪರದೆಗಳು, ಡಿಸ್ ಪ್ಲೇ ಬೋರ್ಡ್ ಸೇರಿದಂತೆ ನಾನಾ ಕಡೆ ವೈಪರೀತ್ಯ ಉಂಟಾಗಿದೆ. ಮೈಕ್ರೋ ಸಾಫ್ಟ್ ಸಂಬಂಧಪಟ್ಟ 360 ಏಪ್ಸ್ ಗಳು ತೊಂದರೆಗೀಡಾಗಿವೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ದೇಶಾದ್ಯಂತ ಇಂಡಿಗೋ ಸಂಸ್ಥೆಯ 200ರಷ್ಟು ವಿಮಾನಗಳು ಸಂಚಾರ ಸ್ಥಗಿತಗೊಳಿಸಿವೆ. ಇದರಿಂದಾಗಿ ತುರ್ತು ಸಂಚಾರಕ್ಕೆ ಹೊರಡುವ ಪ್ರಯಾಣಿಕರು ಅರ್ಧದಲ್ಲೇ ಸಿಕ್ಕಿಬಿದ್ದಿದ್ದಾರೆ. ಗೋವಾ, ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬಹುತೇಕ ವಿಮಾನಗಳು ಶುಕ್ರವಾರ ಸಂಚಾರ ನಡೆಸಿಲ್ಲ. ಪ್ರಯಾಣಿಕರಿಗೆ ಸೂಚನೆ, ಸೌಲಭ್ಯ ನೀಡುವಲ್ಲಿ, ಸಂಪರ್ಕ ಕೊರತೆ ಆಗಿದ್ದರಿಂದ ವಿಮಾನ ಸೇವೆಯನ್ನೇ ರದ್ದುಪಡಿಸಲಾಗಿದೆ.

ಅಮೆರಿಕದಲ್ಲಿ ಶುಕ್ರವಾರ ಒಂದೇ ದಿನ ವಿಮಾನ ವ್ಯತ್ಯಯದಿಂದಾಗಿ 3.7 ಮಿಲಿಯನ್ ಜನರು ತೊಂದರೆಗೀಡಾಗಿದ್ದಾರೆ. 24 ಸಾವಿರ ದೇಸೀ ವಿಮಾನ ಸೇವೆ ಮತ್ತು 3 ಸಾವಿರದಷ್ಟು ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತ ಆಗಿವೆ ಎಂದು ಅಮೆರಿಕದ ಫೋರ್ಬ್ಸ್ ಮಾಧ್ಯಮ ವರದಿ ಮಾಡಿದೆ. ಮೈಕ್ರೋಸಾಫ್ಟ್ ತಾಂತ್ರಿಕ ದೋಷದಿಂದಾಗಿ ಅಮೆರಿಕದ ಷೇರು ಮಾರುಕಟ್ಟೆ ತಲ್ಲಣಗೊಂಡಿದ್ದು, 200 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ ಎನ್ನುವ ಮಾಹಿತಿ ಇದೆ.

Budget carrier IndiGo on Friday had to cancel as many as 200 flights across the country following the global outage in Microsoft applications that affected air services in India and abroad. "Flights are cancelled due to the cascading effect of the worldwide travel system outage, beyond our control. We truly appreciate your patience and support," IndiGo said in a statement.