ಬ್ರೇಕಿಂಗ್ ನ್ಯೂಸ್
19-07-24 10:50 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 19: ಕೆಲವರು ಸೂಪರ್‌ಮ್ಯಾನ್ ಆಗಲು ಬಯಸುತ್ತಾರೆ, ನಂತರ ದೇವರಾಗಲು ಬಯಸುತ್ತಾರೆ, ಆದರೆ ಭವಿಷ್ಯದ ಅನಿಶ್ಚಿತತೆಗಳ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಜಾರ್ಖಂಡ್ ರಾಜ್ಯದ ಬಿಷ್ಣಾಪುರದಲ್ಲಿ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮೋಹನ್ ಭಾಗವತ್ ಅವರು ಭಾಷಣ ಮಾಡಿದರು. ಈ ವೇಳೆ ಕೆಲವು ಜನರು ಸೂಪರ್ ಮ್ಯಾನ್‌ಗಳಾಗಲು ಬಯಸುತ್ತಾರೆ. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ಬಳಿಕ ಜನರು ದೇವರಾಗಲು ಬಯಸುತ್ತಾರೆ. ಆದರೆ ಭಗವಂತ ಹೇಳುತ್ತಾರೆ, ತಾನು ವಿಶ್ವರೂಪ ಅಂತ. ಆದರೆ ವಿಶ್ವರೂಪಕ್ಕೂ ದೊಡ್ಡದು ಇದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಅಂತಿಮವಾಗಿ ಅಭಿವೃದ್ದಿಗೆ ಯಾವುದೇ ಕೊನೆ ಎಂಬುದೇ ಇಲ್ಲ. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲಿ ಹೆಚ್ಚಿನದ್ದನ್ನು ಸಾಧಿಸಲು ದುಡಿಯಬೇಕು ಎಂದು ಹೇಳಿದ್ದಾರೆ. ಮೋಹನ್ ಭಾಗವತ್ ಅವರು ಹೇಳಿರುವ ಈ ಮಾತು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಇದು ದೆಹಲಿಯ 7 ಲೋಕಕಲ್ಯಾಣ್ ಮಾರ್ಗವನ್ನು ಗುರಿಯಾಗಿಸಿಕೊಂಡು ಭಾಗವತ್ ಹೇಳಿಕೆ ನೀಡಿದ್ದಾರೆ ಎಂದು ಕಟಕಿಯಾಡಿದೆ. ಭಾಗವತ್ ಅವರ ವಿಶ್ವರೂಪದ ಮಾತು ಪರೋಕ್ಷವಾಗಿ ಮೋದಿ ಅವರನ್ನೇ ಗುರಿಯಾಗಿಸಿರೋದು ಎಂಬ ರೀತಿಯಲ್ಲಿ ಬಹಳ ಚರ್ಚೆಗೆ ಗುರಿಯಾಗಿದೆ. ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪರೋಕ್ಷ ದಾಳಿ ಎಂದು ಕಾಂಗ್ರೆಸ್ ಹೇಳಿದೆ.
ಆಂತರಿಕ ಮತ್ತು ಬಾಹ್ಯ ಆತ್ಮದ ಬೆಳವಣಿಗೆ ಎಂದಿಗೂ ಅಂತ್ಯವಿಲ್ಲದ ಪ್ರಕ್ರಿಯೆಯಾಗಿದೆ. ಅದಕ್ಕಾಗಿಯೇ ಮಾನವೀಯತೆಗಾಗಿ ಪಟ್ಟು ಬಿಡದೆ ಕೆಲಸ ಮಾಡಬೇಕು. ಒಬ್ಬ ಕೆಲಸಗಾರ ತನ್ನ ಕೆಲಸದಿಂದ ಎಂದಿಗೂ ತೃಪ್ತನಾಗಬಾರದು ಎಂದು ಅವರು ಹೇಳಿದರು.
ಸನಾತನ ಧರ್ಮದ ಸಾರದ ಕುರಿತು ಮಾತನಾಡಿದ ಅವರು, “ಸನಾತನ ಸಂಸ್ಕೃತಿ ಮತ್ತು ಧರ್ಮವು ರಾಜ ಮನೆತನದಿಂದ ಬಂದಿಲ್ಲ. ಆದರೆ ಆಶ್ರಮಗಳು ಮತ್ತು ಕಾಡುಗಳಿಂದ ಬಂದಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಉಡುಪುಗಳು ಬದಲಾಗಬಹುದು, ಆದರೆ ನಮ್ಮ ಸ್ವಭಾವವು ಎಂದಿಗೂ ಬದಲಾಗುವುದಿಲ್ಲ ಎಂದಿದ್ದಾರೆ.
Stating that men want to become “superman”, then “devta”, “bhagwan” and even aspire for “vishwaroop”, RSS chief Mohan Bhagwat Thursday said that people should work for the welfare of mankind since there is no end to the pursuit of development.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am