ಬ್ರೇಕಿಂಗ್ ನ್ಯೂಸ್
20-07-24 03:34 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 20: ಬಾಂಗ್ಲಾದೇಶದಲ್ಲಿ ಇಡೀ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿದ್ದು, ಮಿಲಿಟರಿ ಮತ್ತು ಪೊಲೀಸರು ಬೀದಿಗಿಳಿದಿದ್ದಾರೆ. ಹಿಂಸೆ ಹತ್ತಿಕ್ಕಲು ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸರಕಾರ ಉದ್ಯೋಗ ಮೀಸಲು ಮಸೂದೆ ಜಾರಿಗೊಳಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿ ಸಮುದಾಯ ಹಿಂಸಾಚಾರಕ್ಕಿಳಿದಿದೆ. ಘಟನೆಯಲ್ಲಿ 105 ಮಂದಿ ಮಡಿದಿದ್ದಾರೆ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ 15 ಸಾವಿರದಷ್ಟು ವಿದ್ಯಾರ್ಥಿಗಳು ಸೇರಿ ಭಾರತೀಯರಿದ್ದು, ಹಿಂದೆ ಬರಲಾಗದೆ ಸಿಕ್ಕಿಬಿದ್ದಿದ್ದಾರೆ. ಆ ಪೈಕಿ 245 ಮಂದಿ ಸುರಕ್ಷಿತವಾಗಿ ವಾಪಸಾಗಿದ್ದಾರೆ. 8500 ಮಂದಿ ವಿದ್ಯಾರ್ಥಿಗಳಿದ್ದು ಸೇಫ್ ಆಗಿದ್ದಾರೆಂದು ಭಾರತದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಹಿಂಸಾಕೋರರು ಸೆಂಟ್ರಲ್ ಬಾಂಗ್ಲಾದೇಶಿ ಜಿಲ್ಲೆಯ ಜೈಲು ಒಂದಕ್ಕೆ ಬೆಂಕಿ ಹಾಕಿದ್ದು, ಅದರೊಳಗಿದ್ದ ಕೈದಿಗಳನ್ನು ಹೊರಕ್ಕೆ ಬಿಟ್ಟಿದ್ದಾರೆ. ನೂರಕ್ಕೂ ಹೆಚ್ಚು ಕೈದಿಗಳು ಜೈಲಿನಿಂದ ಹೊರ ಬಂದಿದ್ದಾರೆ.
ಶೇಖ್ ಹಸೀನಾ ಸರಕಾರ 1971ರ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ 30 ಪರ್ಸೆಂಟ್ ಮೀಸಲಾತಿ ನೀಡಿದ್ದು ಈ ವಿಚಾರವನ್ನು ವಿರೋಧಿಸಿ ಯುವ ಸಮುದಾಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪೊಲೀಸರು ಅಶ್ರುವಾಯು, ಗುಂಡು ಹಾರಿಸಿ ಹತೋಟಿಗೆ ತರುತ್ತಿದ್ದಾರೆ. ಜನರು ಪೊಲೀಸರ ಮೇಲೆ ದೊಣ್ಣೆಯಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ಇಡೀ ದೇಶದಲ್ಲಿ ಲಕ್ಷಾಂತರ ಯುಕವಕರು ಸರಕಾರದ ವಿರುದ್ಧ ಬೀದಿಗಿಳಿದಿದಿದ್ದು, ಶೇಖ್ ಹಸೀನಾ ರಾಜಿನಾಮೆ ನೀಡುವಂತೆ ಪಟ್ಟು ಹಿಡಿದಿದೆ.
ಇದೇ ವೇಳೆ, ಸೆಂಟ್ರಲ್ ಬ್ಯಾಂಕ್, ಪ್ರಧಾನಿ ಕಾರ್ಯಾಲಯದ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಲಾಗಿದೆ. ಹಿಂಸಾಕೋರರಿಗೆ ಹ್ಯಾಕರ್ಸ್ ಕೈಜೋಡಿಸಿದ್ದು, ದಿ ರೆಸಿಸ್ಟೆನ್ಸ್ ಹೆಸರಲ್ಲಿ ವೆಬ್ ಗಳನ್ನು ಹ್ಯಾಕ್ ಮಾಡಿ ಒಟ್ಟು ವ್ಯವಸ್ಥೆಯನ್ನು ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ನೆರವಾಗುವ ರೀತಿ ಉದ್ಯೋಗ ಮೀಸಲು ತಂದಿದ್ದಾರೆ. ಈ ಕಾಯ್ದೆಯನ್ನು ಬದಲಿಸಿ, ಮೆರಿಟ್ ಆಧರಿತ ವ್ಯವಸ್ಥೆ ತರಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
At least 105 people have been killed in this week’s violent student protests against quotas for government jobs in Bangladesh. According to the Dhaka Medical College Hospital, at least 52 people were killed in the capital city on Friday.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am