ಪ್ಯಾರಿಸ್ ಒಲಿಂಪಿಕ್ಸ್ ಗೆ ಭಯೋತ್ಪಾದಕ ದಾಳಿ ಬೆದರಿಕೆ ; ಇಸ್ರೇಲ್ ಜೊತೆಗೂಡಿದರೆ ರಕ್ತದ ಹೊಳೆ ಹರಿಯಲಿದೆ ಎಂದು ವಿಡಿಯೋ ಹರಿಯಬಿಟ್ಟ ಉಗ್ರರು 

24-07-24 12:25 pm       HK News Desk   ದೇಶ - ವಿದೇಶ

ಬಹು ನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಹಬ್ಬಕ್ಕೆ ಎರಡು ದಿನ ಇರುವಾಗಲೇ ಭಯೋತ್ಪಾದಕ ದಾಳಿಯ ಬೆದರಿಕೆ ಹಾಕಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ರಕ್ತದ ಹೊಳೆ ಹರಿಸುವುದಾಗಿ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನವದೆಹಲಿ, ಜುಲೈ 24: ಬಹು ನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಹಬ್ಬಕ್ಕೆ ಎರಡು ದಿನ ಇರುವಾಗಲೇ ಭಯೋತ್ಪಾದಕ ದಾಳಿಯ ಬೆದರಿಕೆ ಹಾಕಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ರಕ್ತದ ಹೊಳೆ ಹರಿಸುವುದಾಗಿ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಜುಲೈ 26 ರಿಂದ ಫ್ರಾನ್ಸ್ ನಲ್ಲಿ ಒಲಿಂಪಿಕ್ಸ್ ಆರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಒಲಿಂಪಿಕ್ಸ್‌ ನಲ್ಲಿ ಇಸ್ರೇಲ್ ಸಹ ಭಾಗವಹಿಸುತ್ತಿದ್ದು ಅದೇ ವಿಚಾರವನ್ನು ಮುಂದಿಟ್ಟು ಮುಸುಕುಧಾರಿ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. 

ಮಂಗಳವಾರ ಬಿಡುಗಡೆಯಾದ ವೀಡಿಯೊದಲ್ಲಿ ಮುಸುಕುಧಾರಿ ವ್ಯಕ್ತಿ ಫ್ರಾನ್ಸ್ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ನೇರ ಬೆದರಿಕೆ ಹಾಕಿದ್ದಾನೆ. ಪ್ಯಾಲೆಸ್ತೀನ್‌ ಜೊತೆಗಿನ ಸಂಘರ್ಷದ ಮಧ್ಯೆ ‘ಝಿಯೋನಿಸ್’ ಪರವಾಗಿ ತೆಗೆದುಕೊಳ್ಳುವ ಪರಿಣಾಮಗಳನ್ನು ಎದುರಿಸಲು ನೀವು ಸಿದ್ಧರಾಗಿರಬೇಕು. ಪ್ಯಾರಿಸ್ ಬೀದಿಗಳಲ್ಲಿ ರಕ್ತದ ಕೋಡಿಯೇ ಹರಿಯಲಿದೆ ಎಂದು ಹೇಳಿದ್ದಾನೆ.

ತನ್ನ ಎದೆಯ ಮೇಲೆ ಪ್ಯಾಲೇಸ್ತೀನ್ ಧ್ವಜವನ್ನು ಹೊದ್ದು ಕಪ್ಪು ಬಟ್ಟೆಯನ್ನು ಧರಿಸಿರುವ ವ್ಯಕ್ತಿ, ಮುಖ ಮತ್ತು ತಲೆಗೆ ಪೂರ್ತಿಯಾಗಿ ಅರಬ್ಬಿಗಳ ಬಟ್ಟೆ ಧರಿಸಿದ್ದಾನೆ. ನೀವು ಇಸ್ರೇಲ್ ಜೊತೆಗೂಡಿದರೆ ಪ್ಯಾರಿಸ್ ನಲ್ಲಿ “ರಕ್ತದ ಹೊಳೆ ಹರಿಯಲಿದೆ” ಎಂದು ಘೋಷಿಸಿದ್ದು, ಇದು ದಾಳಿಯ ಸೂಚನೆ ಎನ್ನುವಂತಿದೆ. ವಿಡಿಯೋ ಕೊನೆಯಲ್ಲಿ ನಕಲಿ ಕತ್ತರಿಸಿದ ತಲೆಯನ್ನು ಹಿಡಿದಿರುವ ದೃಶ್ಯವೂ ಇದೆ. 

ವೀಡಿಯೊ ಯಾರು ಮಾಡಿದ್ದಾರೆ, ಯಾವ ಸಂಘಟನೆ ಬೆಂಬಲ ನೀಡಿದೆ ಎನ್ನುವ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ ಮತ್ತು ಅದನ್ನು ಅಧಿಕೃತ ಹಮಾಸ್ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾಗಿಲ್ಲ. ಆದರೆ ಇದು ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಭದ್ರತಾ ಅಪಾಯಗಳ ಬಗ್ಗೆ ಕಳವಳ ಹೆಚ್ಚಿಸಿದೆ. 1972 ರ ಮ್ಯೂನಿಚ್ ಗೇಮ್ಸ್ ಮತ್ತು 1996 ರ ಅಟ್ಲಾಂಟಾ ಕ್ರೀಡಾಕೂಟಗಳಂತಹ ಹಿಂದಿನ ಒಲಿಂಪಿಕ್ಸ್ ಗಳಲ್ಲಿ ಭಯೋತ್ಪಾದಕ ದಾಳಿಯಾಗಿತ್ತು.

The National Security Council issues guidelines to Israelis traveling to Paris for the Olympics, warning that it believes that global jihadist and Iran-backed terror organizations “are seeking to carry out attacks on Israeli/Jewish targets around the Olympics.”