ಬ್ರೇಕಿಂಗ್ ನ್ಯೂಸ್
25-07-24 01:03 pm HK News Desk ದೇಶ - ವಿದೇಶ
ಮಧ್ಯಪ್ರದೇಶ, ಜುಲೈ 25: ಬಯಲು ಶೌಚಕ್ಕೆಂದು ಪೊದೆಯ ಬಳಿ ಹೋಗಿ ಕುಳಿತ ವ್ಯಕ್ತಿಯೊಬ್ಬನ ಮೇಲೆ ದೈತ್ಯ ಹೆಬ್ಬಾವೊಂದು ಅಟ್ಯಾಕ್ ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ವ್ಯಕ್ತಿಯನ್ನು ಸುತ್ತುವರಿದಿದ್ದ ಹೆಬ್ಬಾವನ್ನು ಕೊಂದು, ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಭೀಕರ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.
ಮಳೆಗಾಲ ಬಂತೆಂದರೆ ಸಾಕು ಹಾವುಗಳ ಕಾಟ ಹೆಚ್ಚಾಗುತ್ತದೆ. ಶೀತ ವಾತಾವರಣಕ್ಕೆ ಬೆಚ್ಚನೆಯ ಸ್ಥಳವನ್ನರಸುತ್ತಾ ಬರುವ ಈ ಹಾವುಗಳು ಮನೆಯ ಮೂಲೆಗಳಲ್ಲಿ, ಪೊದೆಗಳಲ್ಲಿ ಅಡಗಿ ಕೂರುತ್ತವೆ. ಹಾವುಗಳು ಪೊದೆಗಳ ಬಳಿ ಅಡಗಿ ಕುಳಿತಿರುತ್ತವೆ ಎಂಬ ಕಾರಣಕ್ಕೆ ಪೊದೆಯ ಬಳಿ, ಗುಡ್ಡ ಪ್ರದೇಶಗಳಿಗೆ ಹೋಗ್ಬಾರ್ದು ಅಂತ ಎಚ್ಚರಿಕೆಯನ್ನು ನೀಡುವುದು ಕೂಡಾ ಉಂಟು. ಆದ್ರೆ ಇಲ್ಲೊಬ್ಬ ವ್ಯಕ್ತಿ ಪೊದೆಯ ಬಳಿಯೇ ಬಯಲು ಶೌಚಕ್ಕೆಂದು ಹೋಗಿದ್ದು, ಆ ಸಂದರ್ಭದಲ್ಲಿ ಅಲ್ಲಿದ್ದ ದೈತ್ಯ ಹೆಬ್ಬಾವು ಆತನ ಮೇಲೆ ಅಟ್ಯಾಕ್ ಮಾಡಿದೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದ್ದು, ಸೋಮವಾರದಂದು (ಜುಲೈ 22) ಇಲ್ಲಿನ ಗ್ರಾಮಸ್ಥನೊಬ್ಬ ಮಲವಿಸರ್ಜನೆಗೆಂದು ಪೊದೆಯ ಬಳಿ ಹೋಗಿದ್ದ, ಆ ಸಂದರ್ಭದಲ್ಲಿ 13 ಅಡಿ ಉದ್ದ ದೈತ್ಯ ಹೆಬ್ಬಾವೊಂದು ಆ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿದೆ. ಹೆಬ್ಬಾವು ತನ್ನ ಬಾಲವನ್ನು ಆ ವ್ಯಕ್ತಿಯ ಕುತ್ತಿಗೆಗೆ ಸುತ್ತಿ ಅವನನ್ನು ಜೀವಂತವಾಗಿ ನುಂಗಲು ಪ್ರಯತ್ನಿಸಿದೆ. ಆಗ ಆ ವ್ಯಕ್ತಿ ಜೋರಾಗಿ ಕಿರುಚಿದ್ದು, ತಕ್ಷಣವೇ ಸಹಾಯಕ್ಕಾಗಿ ಸ್ಥಳೀಯರು ಧಾವಿಸಿದ್ದಾರೆ. ಇನ್ನೇನೂ ಹಾವು ವ್ಯಕ್ತಿಯನ್ನು ನುಂಗಿ ಬಿಡುತ್ತದೆ ಎಂದು ಹೆದರಿದ ಸ್ಥಳೀಯರು, ಆ ವ್ಯಕ್ತಿಯ ಪ್ರಾಣ ಉಳಿಸುವ ಉದ್ದೇಶದಿಂದ ಕೊಡಲಿ ಏಟಿನಿಂದ ಹೆಬ್ಬಾವನ್ನು ಕೊಂದು, ಆ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?
ಮಳೆಗಾಲವಾದ್ದರಿಂದ ಹಾವುಗಳು ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುವುದು ಸಹಜ. ಹಾಗೇ ಹೆಬ್ಬಾವು ವ್ಯಕ್ತಿ ಮೇಲೆ ದಾಳಿ ಮಾಡಿದೆ. ಯಾರ ಮೇಲಾದರೂ ಕಾಡು ಪ್ರಾಣಿಗಳು ದಾಳಿ ಮಾಡಿದರೆ ಅಂತಹ ವ್ಯಕ್ತಿಗೆ ವನ್ಯಜೀವಿ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಪರಿಹಾರ ನೀಡಲಾಗುತ್ತದೆ.
ಇಲ್ಲಿ ವ್ಯಕ್ತಿಯೊಬ್ಬನ ಜೀವ ಉಳಿಸಲು ಸ್ಥಳೀಯರು ಹೆಬ್ಬಾವನ್ನು ಕೊಂದು ಹಾಕಿದ್ದಾರೆ. ಆದ್ದರಿಂದ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿ ಮಹೇಶ್ ಚಂದ್ರ ಕುಶ್ವಾಹ ತಿಳಿಸಿದ್ದಾರೆ.
मध्य प्रदेश के जबलपुर में शौच करने बैठे एक शख्स पर 13 फुट लंबे अजगर ने अटैक कर दिया। अजगर ने शख्स की गर्दन को बुरी तरह जकड़ लिया और उसे निगलने की कोशिश करने लगा। कैसे बची शख्स की जान? खौफनाक VIDEO...#viralvideo #viralnews #MPNews #MadhyaPradeshNews pic.twitter.com/OtrEaCDgqW
— Krishna Bihari Singh (@KrishnaBihariS2) July 21, 2024
A 13 feet long python reportedly attacked a man who was sitting in the bushes to defecate. The incident took place in Jabalpur in Madhya Pradesh. The video of the incident has gone viral on social media.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am