Vijay Diwas, PM Modi, Kargil: ಕಾರ್ಗಿಲ್ ಯುದ್ಧ ಗೆದ್ದ ದ್ರಾಸ್ ನಲ್ಲೇ ವಿಜಯ್ ದಿವಸ್ ಆಚರಿಸಿದ ಪ್ರಧಾನಿ ಮೋದಿ ; ಪಾಕಿಸ್ತಾನ ಚರಿತ್ರೆಯಿಂದ ಪಾಠ ಕಲಿತಿಲ್ಲ ಎಂದು ಮೋದಿ ಕೌಂಟರ್, 25 ವರ್ಷಗಳ ಹಿಂದೆ ಕಾರ್ಗಿಲ್ ಸೈನಿಕರೊಂದಿಗಿದ್ದ ಮೋದಿ ಫೋಟೋ ಬಿಡುಗಡೆ  

26-07-24 05:51 pm       HK News Desk   ದೇಶ - ವಿದೇಶ

1999ರ ಜುಲೈ 26 ಪಾಕಿಸ್ತಾನ ಮತ್ತು ಅದರ ಭಯೋತ್ಪಾದಕರನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ ದಿನ. ಪಾಕಿಸ್ತಾನ ವಿರುದ್ಧ ಯುದ್ಧ ಜಯಿಸಿದ ಜುಲೈ 26ರ ಈ ದಿನವನ್ನು ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ.

ನವದೆಹಲಿ, ಜುಲೈ.26: 1999ರ ಜುಲೈ 26 ಪಾಕಿಸ್ತಾನ ಮತ್ತು ಅದರ ಭಯೋತ್ಪಾದಕರನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ ದಿನ. ಪಾಕಿಸ್ತಾನ ವಿರುದ್ಧ ಯುದ್ಧ ಜಯಿಸಿದ ಜುಲೈ 26ರ ಈ ದಿನವನ್ನು ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ, 25ರ ವರ್ಷಾಚರಣೆ ಸಲುವಾಗಿ ಜಮ್ಮು ಕಾಶ್ಮೀರದ ಲಡಾಖ್ ಗೆ ಭೇಟಿ ಕೊಟ್ಟಿದ್ದು, ಸೈನಿಕರು ಹುತಾತ್ಮರಾದ ಅದೇ ಜಾಗದಲ್ಲಿ ವಿಜಯ್ ದಿವಸ್ ಆಚರಣೆ ಮಾಡಿದ್ದಾರೆ.

ಇದೇ ವೇಳೆ, ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ಮೊದಲ ಬಾರಿಗೆ ಬ್ಲಾಸ್ಟ್ ಆಗಿದ್ದ ಶಿಂಕುನ್ ಲಾ ಕಣಿವೆಗೂ ಮೋದಿ ಭೇಟಿ ನೀಡಿದ್ದಾರೆ. ಆನಂತರ, ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮೋದಿ, ಪಾಕಿಸ್ತಾನ ತನ್ನ ಚರಿತ್ರೆಯಿಂದ ಎಂದೂ ಪಾಠ ಕಲಿಯಲಿಲ್ಲ. ಇವತ್ತು ನಾನು ಭಯೋತ್ಪಾದಕರು ಅಡಗಿರುವ ಜಾಗದ ಪಕ್ಕದಲ್ಲೇ ಇದ್ದೇನೆ. ನನ್ನ ಧ್ವನಿಯನ್ನು ಅವರು ನೇರವಾಗಿ ಕೇಳಿಸಿಕೊಳ್ಳಬಹುದು. ಭಯೋತ್ಪಾದಕರ ನೀಚ ಬುದ್ಧಿ ಎಂದಿಗೂ ಫಲ ಕೊಡದು ಎಂದು ಮತ್ತೆ ಅವರಿಗೆ ಹೇಳುತ್ತಿದ್ದೇನೆ. ನಮ್ಮ ಯೋಧರು ಶುತ್ರಗಳನ್ನು ಹಿಮ್ಮೆಟ್ಟಿಸಿ ಭಯೋತ್ಪಾದನೆಯನ್ನು ಸಂಪೂರ್ಣ ತೊಲಗಿಸಲಿದ್ದಾರೆ ಎಂದು ಹೇಳಿದರು.

On Kargil war anniversary, PM Modi warns Pakistan against supporting  terrorism and proxy war against India - The Hindu

Kargil Diwas 2024: PM Modi to mark 25th anniversary of Vijay Diwas, pay  tribute to 545 martyrs-India's 'brave heroes' | Today News

ನರೇಂದ್ರ ಮೋದಿ ಅಂದು 1999ರಲ್ಲಿ ಕಾರ್ಗಿಲ್ ಯುದ್ಧ ಆಗುತ್ತಿದ್ದಾಗಲೂ ಸೈನಿಕರೊಂದಿಗೆ ಇದೇ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇಂದು ಕಾರ್ಗಿಲ್ ವಿಜಯ್ ದಿವಸದ 25ನೇ ವರ್ಷಾಚರಣೆ ಸಲುವಾಗಿ ಮೋದಿ ಲಡಾಖ್ ಪ್ರಾಂತ್ಯದ ದ್ರಾಸ್ ಸೆಕ್ಟರ್ ಗೆ ಭೇಟಿ ನೀಡಿದ್ದಾರೆ. 25 ವರ್ಷಗಳ ಹಿಂದೆ ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ ಇದ್ದರು. ಬಿಜೆಪಿ ನೇತೃತ್ವದ ಸರಕಾರವೇ ಅಸ್ತಿತ್ವದಲ್ತಿತ್ತು. ಜುಲೈ 26ರಂದು ಭಾರತ ನೆಲದಿಂದ ಶತ್ರು ಸೈನಿಕರನ್ನು ಸಂಪೂರ್ಣ ಹಿಮ್ಮೆಟ್ಟಿಸುತ್ತಿದ್ದಂತೆ ವಾಜಪೇಯಿ ವಿಜಯ್ ಪತಾಕೆಯ ಘೋಷಣೆ ಮಾಡಿದ್ದರು. ಅಂದಿನ ಸಂದರ್ಭದಲ್ಲಿ ನರೇಂದ್ರ ಮೋದಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಆಗಿದ್ದರು. ಇದರ ಜೊತೆಗೆ, ಸೈನಿಕರ ಜೊತೆಗೆ ಸರಕಾರದ ಪ್ರತಿನಿಧಿಯಾಗಿ ಯುದ್ಧ ನಡೆಯುತ್ತಿದ್ದ ಜಾಗಕ್ಕೆ ಹೋಗಿ ಬರುತ್ತಿದ್ದರು.

ಅಂದು ಸೈನಿಕರ ಜೊತೆಗಿದ್ದ ಫೋಟೋಗಳನ್ನು ಮೋದಿ ಆರ್ಚೀವ್ ಎನ್ನುವ ಟ್ವಿಟರ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಮೋದಿ ಅಂದು ಮತ್ತು ಇಂದು ಎನ್ನುವ ರೀತಿ ಹೋಲಿಕೆ ಮಾಡಲಾಗಿದೆ. ಯುದ್ಧ ನಡೆಯುತ್ತಿದ್ದಲ್ಲಿಗೆ ಸೈನಿಕರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ತಲುಪಿಸುತ್ತಿದ್ದ ಹೊಣೆಗಾರಿಕೆ ಮೋದಿ ಅವರಿಗಿತ್ತು. ,ಸೈನಿಕರ ಜೊತೆ ಮಾತನಾಡುತ್ತಿದ್ದಾಗ, ಬಲಿಷ್ಠ ಪ್ರಧಾನಿ ವಾಜಪೇಯಿ ಅವರಿಂದಾಗಿ ಈ ಗೆಲುವಾಯ್ತು ಎನ್ನುತ್ತಿದ್ದ ಮಾತುಗಳನ್ನು ಕೇಳಿ, ದೇಶಕ್ಕೆ ಬಲಿಷ್ಠ ನಾಯಕತ್ವ ಬೇಕು ಎನ್ನುವುದನ್ನು ಮೋದಿ ಅಂದೇ ಅರಿತುಕೊಂಡಿದ್ದರು. ಅಲ್ಲದೆ, ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನೂ ಕಂಡು ಮಾತನಾಡಿಸಿದ್ದರು.

ಮೂರು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು, ಪಾಕಿಸ್ತಾನಿ ಸೈನಿಕರನ್ನು ಹಿಮಶಿಖರಗಳ ಮೇಲಿನ ಸಮರದಲ್ಲಿ ವಿರಾವೇಶದಿಂದ ಹೋರಾಡಿ ಸೋಲಿಸಿದ್ದರು. ಮೋದಿ ಅಂದು ಬಿಜೆಪಿ ಜನರಲ್ ಸೆಕ್ರೆಟರಿಯಾಗಿ ಲಡಾಖ್ ತಲುಪಿದ್ದರೆ, 25 ವರ್ಷಗಳ ಬಳಿಕ ದೇಶದ ಪ್ರಧಾನಿಯಾಗಿ ಅದೇ ಲಡಾಖ್ ಭೇಟಿ ನೀಡಿದ್ದು ವಿಶೇಷವಾಗಿದೆ. 

Prime Minister Narendra Modi on Friday paid to a visit to Kargil War Memorial in Ladakh’s Drass to commemorate the 25th anniversary of ‘Kargil Vijay Diwas’, India’s victory over Pakistan in the 1999 war.