ಬ್ರೇಕಿಂಗ್ ನ್ಯೂಸ್
27-07-24 09:15 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 27: ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳು ಜನಸಂಖ್ಯಾ ಸ್ಫೋಟದ ಬಗ್ಗೆ ಚಿಂತೆಯಲ್ಲಿದ್ದರೆ, ಪೂರ್ವೋತ್ತರ ರಾಷ್ಟ್ರ ಜಪಾನ್ ಮಾತ್ರ ಜನಸಂಖ್ಯೆ ಇಳಿಕೆಯಾಗುತ್ತಿರುವ ಚಿಂತೆಯಲ್ಲಿದೆ. ಕಳೆದ 15 ವರ್ಷಗಳಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚು ದಾಖಲಾಗುತ್ತಿದ್ದು ಜಪಾನ್ ಸರಕಾರದ ಚಿಂತೆಗೆ ಕಾರಣವಾಗಿದೆ.
2023ರಲ್ಲಿ ಜಪಾನ್‌ನ ಒಟ್ಟು ಜನಸಂಖ್ಯೆಯಲ್ಲಿ 5.32 ಲಕ್ಷ ಜನರು ಕಡಿಮೆಯಾಗಿದ್ದಾರೆ. ಈ ವರ್ಷ ದೇಶದಲ್ಲಿ 7.30 ಲಕ್ಷ ಮಕ್ಕಳು ಜನಿಸಿದ್ದು, ಇದು ಸಾರ್ವಕಾಲಿಕವಾಗಿ ಅತಿ ಕಡಿಮೆ ಜನನ ಸಂಖ್ಯೆಯಾಗಿದೆ. ಇದೇ ವರ್ಷ ಜಪಾನ್‌ನಲ್ಲಿ 15.8 ಲಕ್ಷ ಜನ ಮೃತಪಟ್ಟಿದ್ದಾರೆ. 2024ರ ಜನವರಿ ವರೆಗಿನ ಲೆಕ್ಕಾಚಾರದಲ್ಲಿ ಜಪಾನ್‌ನ ಒಟ್ಟು ಜನಸಂಖ್ಯೆ 12.49 ಕೋಟಿಗೆ ಕುಸಿತ ಕಂಡಿದೆ. ಉದಾಹರಣೆಗೆ ನಮ್ಮ ದೇಶದ ಉತ್ತರ ಪ್ರದೇಶ ರಾಜ್ಯವೊಂದರ ಜನಸಂಖ್ಯೆಯೇ 24 ಕೋಟಿ ಇದೆ.
ಒಂದು ವೇಳೆ ಜಪಾನ್‌ನ ಜನಸಂಖ್ಯೆ ಇದೇ ಪ್ರಮಾಣದಲ್ಲಿ ಕುಸಿದರೆ 2070ರ ವೇಳೆ ದೇಶದ ಜನಸಂಖ್ಯೆಯು ಶೇ. 30ಕ್ಕಿಂತ ಹೆಚ್ಚು ಕುಸಿತಗೊಂಡು ಒಟ್ಟು ಸಂಖ್ಯೆ 5.8 ಕೋಟಿಗೆ ಇಳಿಯಬಹುದು. ಈ ಪೈಕಿ 10 ಜನರಲ್ಲಿ ನಾಲ್ಕು ಮಂದಿ 65 ವರ್ಷದ ಮೇಲ್ಪಟ್ಟವರು ಇರಲಿದ್ದಾರೆ. ಹಾಗಾಗಿಯೇ ಜಪಾನ್‌ಗೆ ಇದು ತಲೆನೋವಿನ ವಿಚಾರವಾಗಿದೆ.
15 ವರ್ಷಗಳಿಂದ ಜನಸಂಖ್ಯೆ ಇಳಿಯುತ್ತಲೇ ಇರುವುದರಿಂದ ಜಪಾನ್ ಸರಕಾರ ದೇಶದಲ್ಲಿ ಜನರ ಸಂಖ್ಯೆ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಕ್ಕಳು ಮಾಡಿಕೊಳ್ಳುವ ದಂಪತಿಗಳಿಗೆ ಪ್ರೋತ್ಸಾಹಧನ ನೀಡಲು ಬಜೆಟ್‌ನಲ್ಲಿ ಬರೋಬ್ಬರಿ 5.30 ಟ್ರಿಲಿಯನ್ ಯೆನ್ (ಭಾರತೀಯ ರೂಪಾಯಿ ಲೆಕ್ಕದಲ್ಲಿ 2.85 ಲಕ್ಷ ಕೋಟಿ ರೂ.) ಹಣವನ್ನು ಮೀಸಲಿಟ್ಟಿತ್ತು. ಆದರೆ ಈ ಕ್ರಮವೂ ಫಲಕೊಟ್ಟಿಲ್ಲ ಎನ್ನಲಾಗುತ್ತಿದೆ. ಮಹಿಳೆಯರು ಶೋಕಿ ಜೀವನಕ್ಕೆ ಶರಣಾಗಿರುವುದು, ಮದುವೆ ಮಾಡಿ ಮಕ್ಕಳನ್ನು ಸಾಕುವುದಕ್ಕೆ ಹಿಂದೇಟು ಹಾಕುತ್ತಿರುವುದು, ಕುಟುಂಬ ಜೀವನ ತೊರೆಯುವುದು, ಮದುವೆ ಸಂಬಂಧ ಮಾಡಿಕೊಳ್ಳದೇ ಇರುವುದು ಜನಸಂಖ್ಯೆ ಇಳಿಕೆಗೆ ಕಾರಣ ಎನ್ನಲಾಗುತ್ತದೆ.
Japan is currently grappling with a population crisis - as recent government data showed that the country has registered a decline of over half a million (531,700) people in 2023. The number of births in 2023 reached a record low at 730,000, while deaths in Japan also reached a record high at 1.58 million. Japan's total population was 124.9 million as of January 1, according to the Internal Affairs Ministry
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am