ಒಲಿಂಪಿಕ್ಸ್ ಮೊದಲ ದಿನ ಆಘಾತದ ಬಳಿಕ ಮೂಡಿದ ಭರವಸೆ ; ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಭಾರತಕ್ಕೆ ಹಿನ್ನಡೆ, ಪಿಸ್ತೂಲ್ ವಿಭಾಗದಲ್ಲಿ ಮನು ಬಾಕರ್ ಫೈನಲ್ ಪ್ರವೇಶ 

27-07-24 10:50 pm       HK News Desk   ದೇಶ - ವಿದೇಶ

ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನ ಆರಂಭದಲ್ಲಿ ಭಾರತೀಯರಿಗೆ ನಿರಾಸೆ ಉಂಟಾಗಿದ್ದು ಬಳಿಕ ಹೊಸ ಭರವಸೆ ಮೂಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿಸ್ತೂಲ್ ದೋಷದಿಂದ ಫೈನಲ್ ಪ್ರವೇಶಿಸಲು ವಿಫಲರಾಗಿದ್ದ ಮನು ಬಾಕರ್ ಈ ಬಾರಿ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. 

ಪ್ಯಾರಿಸ್, ಜುಲೈ 27 : ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನ ಆರಂಭದಲ್ಲಿ ಭಾರತೀಯರಿಗೆ ನಿರಾಸೆ ಉಂಟಾಗಿದ್ದು ಬಳಿಕ ಹೊಸ ಭರವಸೆ ಮೂಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿಸ್ತೂಲ್ ದೋಷದಿಂದ ಫೈನಲ್ ಪ್ರವೇಶಿಸಲು ವಿಫಲರಾಗಿದ್ದ ಮನು ಬಾಕರ್ ಈ ಬಾರಿ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. 

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮನು, ಮೊದಲ ಸೀರಿಸ್​ನಲ್ಲಿ 100ಕ್ಕೆ 97 ಅಂಕ ಕಲೆಹಾಕಿದರು‌. ಎರಡನೇ ಸೀರಿಸ್​ನಲ್ಲಿ 97 ಅಂಕ ಸಂಪಾದಿಸಿ, ಮೊದಲಾರ್ಧ ಮುಗಿಯುವ ವೇಳೆಗೆ 300ಕ್ಕೆ 292 ಅಂಕ ಪಡೆದಿದ್ದರು. ಇದೇ ಪ್ರದರ್ಶನ ಮಟ್ಟ ಕಾಯ್ದುಕೊಂಡು ಅಂತಿಮವಾಗಿ 580 ಅಂಕ ಪಡೆದು ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ಪದಕ ನಿರ್ಣಯ ಸ್ಪರ್ಧೆ ಜುಲೈ 28ರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.

10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಶೂಟರ್‌ಗಳು ಹಿನ್ನಡೆ ಅನುಭವಿಸಿದರು. ರಮಿತಾ ಮತ್ತು ಅರ್ಜುನ್ ಬಬುಟಾ ಜೋಡಿ 628.7 ಅಂಕಗಳೊಂದಿಗೆ ಕೇವಲ ಒಂದು ಅಂಕದಿಂದ ಫೈನಲ್ ಪ್ರವೇಶ ಪಡೆಯಲು ವಿಫಲರಾದರು. ಇದೇ ವಿಭಾಗದಲ್ಲಿ ಎಲವೆನಿಲ್ ವಲರಿವನ್ ಮತ್ತು ಸಂದೀಪ್ ಸಿಂಗ್ 626.3 ಅಂಕಗಳೊಂದಿಗೆ 12ನೇ ಸ್ಥಾನ ಪಡೆದರು. 

ರೋವಿಂಗ್ ಸ್ಪರ್ಧೆಯ ಪುರುಷರ ಸಿಂಗಲ್ ಸ್ಕಲ್ ಸ್ಪರ್ಧೆಯ ಹೀಟ್ 1ರಲ್ಲಿ ಭಾರತದ ಏಕೈಕ ರೋವರ್ ಬಲರಾಜ್ ಪನ್ವಾರ್ ನಾಲ್ಕನೇ ಸ್ಥಾನ ಗಳಿಸಿದರು. ಇದರಿಂದ ಫೈನಲ್ ಗೇರಲು ವಿಫಲರಾದರು.

After a disappointing start to the opening day of the Olympic Games, the Indians got a new hope. Manu Bhaker, who failed to make it to the final of the Tokyo Olympics due to a pistol error, has qualified for the final this time.