ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ; ಕಂಚಿಗೆ ಗುರಿಯಿಟ್ಟ ಶೂಟರ್ ಮನು ಭಾಕರ್ 

28-07-24 04:59 pm       HK News Desk   ದೇಶ - ವಿದೇಶ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಮೊದಲ ಪದಕ ಗೆದ್ದುಕೊಂಡಿದ್ದು, ಶೂಟಿಂಗ್ ನಲ್ಲಿ ಮನು ಭಾಕರ್ ಕಂಚಿನ ಪದಕಕ್ಕೆ ಗುರಿಯಿಟ್ಟಿದ್ದಾರೆ.

ಪ್ಯಾರಿಸ್, ಜುಲೈ 28:  ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಮೊದಲ ಪದಕ ಗೆದ್ದುಕೊಂಡಿದ್ದು, ಶೂಟಿಂಗ್ ನಲ್ಲಿ ಮನು ಭಾಕರ್ ಕಂಚಿನ ಪದಕಕ್ಕೆ ಗುರಿಯಿಟ್ಟಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಬಾಕರ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಸಾಧನೆಯ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಶೂಟಿಂಗ್ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡರು. ಈ ಮಧ್ಯೆ ಅರ್ಜುನ್ ಬಬುಟಾ ಮತ್ತು ರಮಿತಾ ಜಿಂದಾಲ್ ಪುರುಷರ ಮತ್ತು ಮಹಿಳೆಯರ ಏರ್ ರೈಪಲ್ ವಿಭಾಗದಲ್ಲಿ ಪೈನಲ್ ಪ್ರವೇಶಿಸಿದ್ದು ಭಾರತದ ಪದಕದ ಆಸೆಯನ್ನು ಜೀವಂತವಿರಿಸಿಕೊಂಡಿದ್ದಾರೆ. ರೋವಿಂಗ್ ಸ್ಪರ್ಧೆಯಲ್ಲಿ ಬಲರಾಜ್ ಪನ್ವಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 

Olympics 2024: Manu Bhaker Makes History, Becomes First Indian Woman Shooter  To Win Olympics Medal | Olympics News

News on AIR

Manu Bhaker shoots bronze, India's first medal of Paris 2024 | Olympics -  Hindustan Times

Shooting, Olympics 2024: Manu Bhaker only Indian to make it to final on Day  1 in

Manu Bhaker Makes History: Shooter Becomes First Indian Woman To Bag Olympic  Medal

Who is Manu Bhaker: Meet India's first-ever female Olympic medalist in  shooting - India Today

Paris Olympics 2024: Manu Bhaker Aims For Gold Medal Today

ಒಲಿಂಪಿಕ್ಸ್ ಹಾಕಿ, ಭಾರತ ಶುಭಾರಂಭ

ಒಲಿಂಪಿಕ್ಸ್‌ ಕ್ರೀಡಾಕೂಟದ ಹಾಕಿ ಟೂರ್ನಿಯಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು 3-2ರಿಂದ ಸೋಲಿಸಿ  ಶುಭಾರಂಭ ಮಾಡಿದೆ.

ಮೊದಲಾರ್ಧದಲ್ಲಿ ಒಂದು ಗೋಲಿನ ಹಿನ್ನಡೆ ಕಂಡಿದ್ದ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಮುಂದಿನ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ, ಹಿನ್ನಡೆ ನೀಗಿಸಿ ಗೆಲುವು ಸಾಧಿಸಿತು. ಎಂಟನೇ ನಿಮಿಷದಲ್ಲೇ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ನ್ಯೂಜಿಲೆಂಡ್ ಮುನ್ನಡೆ ಸಾಧಿಸಿತು. 
ದ್ವಿತೀಯ ಅವಧಿಯಲ್ಲಿ  ಭಾರತ, ನ್ಯೂಜಿಲೆಂಡ್ ತಂಡದ ರಕ್ಷಣೆಯನ್ನು ಬೇಧಿಸಿತು. ದ್ವಿತೀಯ ಅವಧಿ ಮುಗಿಯಲು ಕೆಲವೇ ಕ್ಷಣಗಳಿರುವಾಗ ಮಂದೀಪ್‌ ಸಿಂಗ್‌ ಗೋಲು ಬಾರಿಸಿ ಸಮಬಲಕ್ಕೆ ತಂದರು. ಮೂರನೇ ಅವಧಿಯ ನಾಲ್ಕನೇ ನಿಮಿಷದಲ್ಲಿ ವಿವೇಕ್ ಸಾಗರ್‌ ಪ್ರಸಾದ್‌ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ಅಂತಿಮ ಅವಧಿಯಲ್ಲಿ ಮೊದಲಿಗೆ ನ್ಯೂಜಿಲೆಂಡ್ ಗೋಲು ಬಾರಿಸಿ ಅಂತರ ಸಮಬಲ ಮಾಡಿದರೂ, ನಾಯಕ ಹರ್ಮನ್ ಪ್ರೀತ್ ಸಿಂಗ್ ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಭಾರತದ ಗೆಲುವಿಗೆ ಕಾರಣರಾದರು.

Indian shooter Manu Bhaker and the women's archery team are set to compete for India's first medal at the Paris 2024 Olympics on Sunday, July 28. Additionally, badminton star PV Sindhu and two-time boxing world champion Nikhat Zareen will begin their quests for Olympic glory on the same day.