ಬ್ರೇಕಿಂಗ್ ನ್ಯೂಸ್
31-07-24 03:36 pm HK News Desk ದೇಶ - ವಿದೇಶ
ವಯನಾಡ್, ಜುಲೈ.31: ಭೀಕರ ಭೂಕುಸಿತ ಸಂಭವಿಸಿದ್ದರಿಂದ ಚೂರಲ್ಮಲ ಎಸ್ಟೇಟ್ ಕ್ವಾಟರ್ಸ್ ಕೊಚ್ಚಿಕೊಂಡು ಹೋಗಿ 9 ಜನ ಕನ್ನಡಿಗರು ನಾಪತ್ತೆಯಗಿದ್ದಾರೆ.
ಗುರುಮಲ್ಲಣ್ಣ (60), ಸಾವಿತ್ರಿ (54), ಸಬೀತಾ (43), ಶಿವಣ್ಣ (50), ಅಪ್ಪಣ್ಣ (39), ಅಶ್ವಿನ್ (13), ಜೀತು (11), ದಿವ್ಯ (35), ರತ್ನ (48) ಜಲಪ್ರಳಯದಲ್ಲಿ ನಾಪತ್ತೆಯಾಗಿರುವ ಕನ್ನಡಿಗರು.
ಘಟನೆಯಲ್ಲಿ 11 ಜನ ನಾಪತ್ತೆಯಾಗಿದ್ದು, ಇಬ್ಬರ ಮೃತದೇಹ ಸಿಕ್ಕಿದೆ. ಇನ್ನೂ 9 ಜನರ ಮೃತದೇಹ ಸಿಗಲಿಲ್ಲ ಎಂದು ತಿಳಿದು ಬಂದಿದೆ.



ನೀರಲ್ಲಿ ಯಾರಿಗೂ ಇಳಿಯುವುದಕ್ಕೆ ಆಗುತ್ತಿಲ್ಲ. ಅವರನ್ನು ಹುಡುಕಬೇಕೆಂದರೆ 90 ಕಿ.ಮೀ. ದೂರ ಹೋಗಿ ಹುಡುಕಬೇಕು. ಆದರೆ ಅವರು ಅಲ್ಲಿ ಇದ್ದಾರೋ, ಇಲ್ವೋ ಗೊತ್ತಿಲ್ಲ? ಇವಾಗ 30-40 ಶವಗಳು ಸಿಕ್ಕಿದ್ದಾವೆ ಎಂದು ಹೇಳುತ್ತಿದ್ದಾರೆ ನೋಡಬೇಕು ಎಂದು ನಾಪತ್ತೆಯಾದವರ ಸಂಬಂಧಿಕ ರವಿ ಅಸಾಹಾಯಕತೆಯನ್ನು ತೊಡಿಕೊಂಡಿದ್ದಾರೆ.
ನಾವು ಸರಕಾರದಿಂದ ಕೊಡಿಸಲಾಗಿದ್ದ ಮನೆಯಲ್ಲಿದ್ದಿವಿ. ನಮ್ಮ ಸಂಬಂಧಿಕರು ಅವರಿದ್ದ ಸ್ವಂತ ಮನೆಯಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಮನೆಯಲ್ಲಿರುವುದರಿಂದ ಹೀಗೆ ಆಗುವುದಿಲ್ಲವೆಂದು ನಂಬಿ ಅವರು ಅಲ್ಲೇ ಉಳಿದುಕೊಂಡಿದ್ದರು. ಹೀಗೆ ಆಗುತ್ತೆ ಎಂದು ಯಾರು ತಿಳಿದುಕೊಂಡಿಲ್ಲ. ಇವಾಗ ಹೋದವರು ನಮ್ಮ ನಾದಿನಿಯ ಕುಟುಂಬದವರು ಎಂದು ಹೇಳುತ್ತಾ, ನಮ್ಮ ದೊಡ್ಡಪ್ಪನ ಮಗಳು ಮತ್ತು ಭಾವನಿಗೆ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ದುಃಖತಪ್ತರಾಗಿ ತಿಳಿಸಿದರು.
2018-19 ರಲ್ಲಿಯೂ ಕೂಡ ಇಲ್ಲಿ ಸ್ವಲ್ಪ ಭೂಕುಸಿತ ಸಂಭವಿಸಿತ್ತು. ಅದರ ಅನುಭವ ನಮಗಿದೆ. ಆ ಹೆದರಿಕೆಯಿಂದ ಜನರು ಬೇರೆ ಕಡೆಗೆ ಸ್ಥಳಾಂತರ ಆಗಿದ್ದರು. ನಾವು ಬಂದಾಗ ಹೆಚ್ಚು ಜನ ಕನ್ನಡಿಗರು ಇಲ್ಲಿ ಇದ್ದರು. ಹೀಗೆ ಆಗಿದ್ದರಿಂದ ಇವಾಗ ಎಲ್ಲರೂ ವಾಪಸ್ ಹೋಗಿದ್ದಾರೆ. ಇವಾಗ 500 ಜನ ಕನ್ನಡಿಗರು ಇಲ್ಲಿ ಇರಬಹುದು ಎಂದವರು ನೆನಪಿಸಿಕೊಂಡರು.
ರವಿ ಮತ್ತು ಅವರ ಸಂಬಂಧಿಕರು ಮೂಲತಃ ಕರ್ನಾಟಕದ ಗುಂಡ್ಲುಪೇಟೆಯ ನಿವಾಸಿಯಾಗಿದ್ದಾರೆ. ಕನ್ನಡಿಗರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕೇರಳದಲ್ಲಿ ಉಂಟಾಗಿರುವ ಭೂ ಕುಸಿತದಲ್ಲಿ ಒಟ್ಟು 9 ಮಂದಿ ಕನ್ನಡಿಗರ ಶವ ಪತ್ತೆಯಾಗಿವೆ. ಚಾಮರಾಜನಗರ ಮೂಲದ ನಾಲ್ವರು, ಮಂಡ್ಯ ಜಿಲ್ಲೆಯ ಮೂವರು, ಕೆಆರ್ ಪೇಟೆ ಮೂಲದ ಇಬ್ಬರು ಕನ್ನಡಿಗರು ಸಾವನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kerala Wayanad landslide, nine from Karnataka found dead. Four people from chamarajanagar, three from mandya and two from KR Pete.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm