ಕೂಡಲೇ ಲೆಬನಾನ್ ಬಿಟ್ಟು ಬನ್ನಿ ; ತಮ್ಮ ಪ್ರಜೆಗಳಿಗೆ ಅಮೆರಿಕ, ಯುಕೆ, ಫ್ರಾನ್ಸ್ ಕರೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಕಾರ್ಮೋಡ, ಇಸ್ರೇಲ್ ಮೇಲೆ ದಾಳಿಗೆ ಸಜ್ಜಾದ ಉಗ್ರರು

04-08-24 08:35 pm       HK News Desk   ದೇಶ - ವಿದೇಶ

ಇಸ್ರೇಲ್- ಇರಾನ್ ನಡುವೆ ಸಂಘರ್ಷ ಸ್ಥಿತಿ ಏರ್ಪಟ್ಟಿರುವುದರಿಂದ ಮಧ್ಯದ ಲೆಬನಾನ್ ದೇಶದಲ್ಲಿರುವ ಅಮೆರಿಕ ಮತ್ತು ಇಂಗ್ಲೆಂಡಿನ ಪ್ರಜೆಗಳನ್ನು ಕೂಡಲೇ ಜಾಗ ಖಾಲಿ ಬಿಡುವಂತೆ ಸೂಚಿಸಲಾಗಿದೆ.

 ನವದೆಹಲಿ, ಆಗಸ್ಟ್.4: ಇಸ್ರೇಲ್- ಇರಾನ್ ನಡುವೆ ಸಂಘರ್ಷ ಸ್ಥಿತಿ ಏರ್ಪಟ್ಟಿರುವುದರಿಂದ ಮಧ್ಯದ ಲೆಬನಾನ್ ದೇಶದಲ್ಲಿರುವ ಅಮೆರಿಕ ಮತ್ತು ಇಂಗ್ಲೆಂಡಿನ ಪ್ರಜೆಗಳನ್ನು ಕೂಡಲೇ ಜಾಗ ಖಾಲಿ ಬಿಡುವಂತೆ ಸೂಚಿಸಲಾಗಿದೆ. ಯಾವುದೇ ವಿಮಾನ ಸಿಕ್ಕರೂ ಹತ್ತಿಕೊಂಡು ಬೇರೆ ಕಡೆಗೆ ಬನ್ನಿ, ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಯುಕೆ ಮತ್ತು ಅಮೆರಿಕ ಸೂಚನೆ ನೀಡಿದೆ.

ಈಗಾಗಲೇ ಲೆಬನಾನ್ ಮತ್ತು ಇಸ್ರೇಲ್ ದೇಶಕ್ಕೆ ವಿಮಾನ ಸಂಚಾರವನ್ನು ಕೆಲವು ಏರ್ಲೈನ್ಸ್ ಕಂಪನಿಗಳು ನಿಲ್ಲಿಸಿದ್ದು, ಕೆಲವಷ್ಟೇ ಕಾರ್ಯ ವೆಸಗುತ್ತಿವೆ. ಹೀಗಿರುವಾಗಲೇ ಅಮೆರಿಕ, ಯುಕೆ, ಫ್ರಾನ್ಸ್ ದೇಶಗಳು ತಮ್ಮ ಪ್ರಜೆಗಳನ್ನು ಲೆಬನಾನ್ ಬಿಟ್ಟು ಬರುವಂತೆ ಕೇಳಿಕೊಂಡಿವೆ. ಲೆಬನಾನ್ ಸ್ಥಿತಿ ಹದಗೆಟ್ಟಿದ್ದು, ಅಲ್ಲಿ ಏನಾಗುತ್ತೆ ಅಂತ ಹೇಳಕ್ಕೆ ಬರೋದಿಲ್ಲ. ಕೂಡಲೇ ಅಲ್ಲಿಂದ ಎದ್ದು ಬನ್ನಿ ಎಂದು ಇಂಗ್ಲೆಂಡ್ ವಿದೇಶಾಂಗ ಮಂತ್ರಿ ಡೇವಿಡ್ ಲ್ಯಾಮ್ಮಿ ಹೇಳಿದ್ದಾರೆ.

ಕಳೆದ ವಾರ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಮತ್ತು ಲೆಬನಾನ್ ಮೂಲದ ಹೆಜ್ಬುಲ್ಲಾ ನಾಯಕನ ಹತ್ಯೆ ಹಿನ್ನೆಲೆಯಲ್ಲಿ ಇರಾನ್ ಮತ್ತು ಲೆಬನಾನ್ ಇಸ್ರೇಲ್ ದೇಶದ ಮೇಲೆ ಮುಗಿಬೀಳಲು ತಯಾರಾಗಿದೆ. ಇರಾನ್ ನಾಯಕರು, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮೊನ್ನೆ ಜುಲೈ 31ರಂದು ಇಸ್ಮಾಯಿಲ್ ಹನಿಯೆ ಇರಾನ್ ದೇಶದಲ್ಲಿರುವಾಗಲೇ ನಿಗೂಢ ರೀತಿಯಲ್ಲಿ ಹತ್ಯೆಯಾಗಿದ್ದರು. ಕಳೆದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಠಾತ್ ದಾಳಿಗೆ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಕಾರಣ ಎನ್ನಲಾಗಿತ್ತು.

US, UK and France ask their citizens to leave Lebanon as war fears loom

US, UK, Jordan urge citizens to leave Lebanon on 'any ticket available' |  The Times of Israel

ಏಕಾಏಕಿ ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿ ದಾಳಿ ನಡೆಸಿದ್ದು, ಘಟನೆಯಲ್ಲಿ 1100 ಮಂದಿ ಹತರಾಗಿದ್ದರು. ಈ ಘಟನೆಗೆ ಸೇಡು ತೀರಿಸಿಕೊಂಡೇ ತೀರುತ್ತೇವೆ ಎಂದು ಇಸ್ರೇಲ್ ಶಪಥ ಮಾಡಿದ್ದು ಅದರ ಗುಪ್ತಚರ ಸಂಸ್ಥೆ ಮೊಸಾದ್ ಏಜಂಟರನ್ನು ಪ್ರತೀಕಾರಕ್ಕಾಗಿ ಕಳಿಸಿಕೊಟ್ಟಿದೆ. ಹಮಾಸ್ ಪ್ರಮುಖರು ಎಲ್ಲಿ ಅಡಗಿದ್ದರೂ ಅಲ್ಲಿಗೆ ನುಗ್ಗಿ ಸದ್ದಿಲ್ಲದೆ ಕೊಂದು ಹಾಕುವುದಕ್ಕೆ ಮೊಸಾದ್ ಪ್ರಸಿದ್ಧಿ ಪಡೆದಿದ್ದು ಇಸ್ಮಾಯಿಲ್ ಹನಿಯೆ ಹತ್ಯೆಯನ್ನು ಇಸ್ರೇಲ್ ಮಾಡಿದೆ ಎನ್ನಲಾಗುತ್ತಿದೆ.

Calls for foreigners to leave Lebanon as war fears grow

Multiple countries urge citizens to leave Lebanon amid rising tensions |  News.az

ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ

ಹಮಾಸ್ ಉಗ್ರರು ಅಡಗಿಕೊಂಡಿರುವ ಗಾಜಾ ಪಟ್ಟಿ ಮತ್ತು ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿದ್ದು, ಅಲ್ಲಿನ ನೂರಾರು ಉಗ್ರ ಶಿಬಿರಗಳನ್ನು ಪುಡಿಗಟ್ಟಿದೆ. ದಾಳಿ ಘಟನೆಯಲ್ಲಿ ಸಾವಿರಾರು ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಹಮಾಸ್ ನಾಯಕರು ಗಾಜಾ ಪಟ್ಟಿ ಬಿಟ್ಟು ಇರಾನ್, ಲೆಬನಾನ್ ಕಡೆಗೆ ತೆರಳಿ ಆಶ್ರಯ ಪಡೆದಿದ್ದಾರೆ. ಇಸ್ರೇಲ್ ಗುಪ್ತಚರ ಏಜಂಟರು ಅಲ್ಲಿಗೂ ದಾಂಗುಡಿ ಇಟ್ಟಿದ್ದು, ವಿಶೇಷ ತಂತ್ರಜ್ಞಾನ ಬಳಸಿ ಸದ್ದೇ ಇಲ್ಲದಂತೆ ನಾಯಕರನ್ನು ಕೊಂದು ಹಾಕುತ್ತಿರುವುದು ಮುಸ್ಲಿಂ ರಾಷ್ಟ್ರಗಳ ನಿದ್ದೆಗೆಡಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮೇಲೆ ದಾಳಿಗೆ ಮುಸ್ಲಿಂ ರಾಷ್ಟ್ರಗಳು ಒಂದಾಗುತ್ತಿದ್ದರೆ, ಇಸ್ರೇಲ್ ಜೊತೆಗೆ ಅಮೆರಿಕ, ಇಂಗ್ಲೆಂಡ್ ಬೆಂಬಲಕ್ಕೆ ನಿಂತಿದೆ. ನ್ಯಾಟೋ ರಾಷ್ಟ್ರಗಳೆಲ್ಲ ಇಸ್ರೇಲ್ ಬೆಂಬಲಕ್ಕಿರುವುದು ಮುಸ್ಲಿಂ ರಾಷ್ಟ್ರಗಳಿಗೂ ತಲೆನೋವು ಸೃಷ್ಟಿಸಿದೆ. ಆದರೆ ಇರಾನ್, ಲೆಬನಾನ್, ಸಿರಿಯಾ ಮತ್ತಿತರ ಉಗ್ರ ಪೋಷಿತ ರಾಷ್ಟ್ರಗಳಿಗೆ ಯುಎಇ, ಸೌದಿ ಅರೇಬಿಯಾದಂತಹ ಶ್ರೀಮಂತ ದೇಶಗಳು ಬಹಿರಂಗ ಬೆಂಬಲ ನೀಡಿಲ್ಲ.

Multiple countries including the United States, the UK, France, Italy, Sweden, and Jordan have advised their citizens to leave Lebanon amid escalating tensions between Israel and Lebanon-based Hezbollah. Tensions have soared following the killing of Ismail Haniyeh, leader of the Palestinian terrorist group Hamas, in Tehran on Wednesday, a day after an Israeli strike in Beirut killed Fuad Shukr, a top commander from the Hezbollah terrorist group.