ಬ್ರೇಕಿಂಗ್ ನ್ಯೂಸ್
08-12-20 02:24 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.8: ಪಂಜಾಬ್ ಮೂಲದ ಖಲೀಸ್ತಾನ್ ಉಗ್ರರು ಮತ್ತು ಕಾಶ್ಮೀರದ ಐಎಸ್ಐ ಬೆಂಬಲಿತ ಉಗ್ರರು ಜೊತೆಯಾಗಿದ್ದಾರೆಯೇ ಎಂಬ ಅನುಮಾನ ದೆಹಲಿ ಪೊಲೀಸರಿಗೆ ಲಭಿಸಿದೆ. ದೆಹಲಿ ಪೊಲೀಸರು ಸೋಮವಾರ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಇಬ್ಬರು ಪಂಜಾಬ್ ಮೂಲದ ಸಿಖ್ಖರು ಮತ್ತು ಕಾಶ್ಮೀರದ ಮೂವರು ಇಂಡಿಯನ್ ಮುಜಾಹಿದೀನ್ ಉಗ್ರರು ಎನ್ನಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿ ಬಲ್ವಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಉಗ್ರರೊಂದಿಗೆ ಹೋರಾಡಿ ಸದೆಬಡಿದಿದ್ದ ಬಲ್ವಿಂದರ್ ಸಿಂಗ್ ಅವರನ್ನು ಕೇಂದ್ರ ಸರಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ನಡುವೆ, ಪಂಜಾಬ್ ರಾಜ್ಯದ ಗುರುಗ್ರಾಮ್ ತೆರಳಿದ್ದ ಬಲ್ವಿಂದರ್ ಸಿಂಗ್ ಅವರನ್ನು ಖಲೀಸ್ತಾನ್ ಉಗ್ರರು ಗುಂಡು ಹಾರಿಸಿ ಕೊಂದಿದ್ದರು. ಪ್ರಕರಣ ಸಂಬಂಧಿಸಿ ವಿಶೇಷ ತನಿಖಾ ತಂಡ ಕಾರ್ಯಾಚರಣೆಗೆ ಇಳಿದಿತ್ತು.

ಸೋಮವಾರ ಮಧ್ಯಾಹ್ನ ದೆಹಲಿಯಲ್ಲಿ ಬಲ್ವಿಂದರ್ ಅವರನ್ನು ಕೊಂದಿದ್ದ ಉಗ್ರರು ಇದ್ದಾರೆಂಬ ಮಾಹಿತಿ ಪಡೆದು ದಾಳಿ ನಡೆಸಲಾಗಿತ್ತು. ಉಗ್ರರ ಕಡೆಯಿಂದ ಪ್ರತಿದಾಳಿ ನಡೆಸಿದಾಗ, ಪೊಲೀಸರು ಎನ್ ಕೌಂಟರ್ ಮುಂದಾಗಿದ್ದು ಐವರು ಬಂಧಿಸಲ್ಪಟ್ಟಿದ್ದಾರೆ. ಈ ಪೈಕಿ ಗುರ್ಜಿತ್ ಸಿಂಗ್ ಮತ್ತು ಸುಖದೀಪ್ ಸಿಂಗ್ ಪಂಜಾಬ್ ರಾಜ್ಯದ ಗುರುದಾಸ್ ಪುರ ನಿವಾಸಿಗಳಾಗಿದ್ದು, ಬಲ್ವಿಂದರ್ ಸಿಂಗ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಕಾಶ್ಮೀರದ ಶಬೀರ್ ಅಹ್ಮದ್, ಅಯೂಬ್ ಪಠಾಣ್, ರಿಯಾಜ್ ರಾಥೋರ್ ಇತರ ಮೂವರು ಬಂಧಿತರಾಗಿದ್ದು ಇಂಡಿಯನ್ ಮುಜಾಹಿದೀನ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಕಾಶ್ಮೀರ ಮತ್ತು ಪಂಜಾಬಿನ ಸಿಖ್ ಉಗ್ರರು ಜೊತೆಯಾಗಿದ್ದು ಹೇಗೆ ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಪ್ರಮೋದ್ ಕುಮಾರ್ ಖುಷ್ವಾಹ್ ತಿಳಿಸಿದ್ದಾರೆ.
ದೆಹಲಿಯ ಲಕ್ಷ್ಮೀ ನಗರ್ ಎಂಬಲ್ಲಿ ಕಾರ್ಯಾಚರಣೆ ನಡೆದಿದೆ. ಖಲೀಸ್ತಾನ್ ಉಗ್ರರು ಕಾಶ್ಮೀರದ ಮೂವರಿಂದ ಹಣ ಪಡೆದು ಬಲ್ವಿಂದರ್ ಹತ್ಯೆ ಎಸಗಿರುವ ಸಾಧ್ಯತೆ ಇದೆ. ಮೂರು ಪಿಸ್ತೂಲ್, ಎರಡು ಕಿಲೋ ಹೆರಾಯಿನ್, ಒಂದು ಲಕ್ಷ ನಗದನ್ನು ಐವರಿಂದ ವಶಕ್ಕೆ ಪಡೆಯಲಾಗಿದೆ. ಮೂರು ಕಾರುಗಳಲ್ಲಿ ಈ ಐವರು ಆರೋಪಿಗಳು ಪ್ರಯಾಣಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿತ್ತು. ಹೆರಾಯಿನ್ ಮಾರಾಟ ಮಾಡಿದ ಹಣವನ್ನು ವಿಧ್ವಂಸಕ ಕೃತ್ಯಕ್ಕೆ ಬಳಸುತ್ತಿದ್ದರು. ಎಂದು ಪ್ರಮೋದ್ ಖುಷ್ವಾಹ್ ಹೇಳಿದ್ದಾರೆ.

ಖಲೀಸ್ತಾನ್ ಉಗ್ರರ ಮಾಸ್ಟರ್ ಮೈಂಡ್ ಆಗಿರುವ ಸುಖ್ ಬಿಖಾರಿವಾಲ್ ಸಿಂಗ್ ದುಬೈ ಅಥವಾ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗುತ್ತಿದ್ದು, ಅಲ್ಲಿಂದಲೇ ತನ್ನ ಸಹಚರರ ಮೂಲಕ ಕೃತ್ಯ ಮಾಡಿಸುತ್ತಿದ್ದಾನೆ. ಐಎಸ್ಐನಿಂದ ಹಣ ಪಡೆದು ದೆಹಲಿಯಲ್ಲಿ ವಿವಿಧ ಅಧಿಕಾರಿಗಳನ್ನು ಕೊಲ್ಲಲು ಪ್ಲಾನ್ ಹಾಕಿದ್ದ. ಈ ಹಿಂದೆ ಐಎಸ್ಐ ಸೂಚನೆಯಂತೆ, ಅ.16ರಂದು ಶೌರ್ಯ ಚಕ್ರ ವಿಜೇತ ಅಧಿಕಾರಿ ಬಲ್ವಿಂದರ್ ಸಿಂಗ್ ನನ್ನು ಗುರ್ಜಿತ್ ಸಿಂಗ್ ಮತ್ತು ಸುಖದೀಪ್ ಸಿಂಗ್ ಕೊಂದಿದ್ದರು. ಆನಂತರ ತಲೆಮರೆಸಿಕೊಂಡಿದ್ದು, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಇನ್ನಷ್ಟು ಅಧಿಕಾರಿಗಳನ್ನು ಕೊಲ್ಲಲು ಸಂಚು ಹೂಡಿದ್ದರು. ಇದೀಗ ಅವರಿಗೆ ಸಾಥ್ ನೀಡಿದ್ದ ಕಾಶ್ಮೀರಿ ಉಗ್ರರ ಸಹಿತ ಖಲೀಸ್ತಾನ್ ಉಗ್ರರು ಸಿಕ್ಕಿಬಿದ್ದಿದ್ದಾರೆ.

ಸದಾಕತ್ ಹೆಸರಲ್ಲಿ ನಾರ್ಕೋ ಟೆರರಿಸಮ್ !
ಆರೋಪಿಗಳ ಪೈಕಿ ಅಯೂಬ್ ಪಠಾಣ್ ತಳಮಟ್ಟದ ಕಾರ್ಯ ಚಟುವಟಿಕೆಯನ್ನು ನೋಡಿಕೊಂಡಿದ್ದ. ಅಯೂಬ್ ಸೋದರ ಅಬ್ದುಲ್ ಮಜೀದ್ ಖಾನ್, ರಾವಲ್ಪಿಂಡಿಯಲ್ಲಿದ್ದು ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸೀನಿಯರ್ ಆಪರೇಟಿವ್ ಆಫೀಸರ್ ಆಗಿದ್ದಾನೆ. ಮಜೀದ್ ಸಲಹೆಯಂತೆ ಅಯೂಬ್ ಕಾರ್ಯ ಚಟುವಟಿಕೆ ಮಾಡಿಕೊಂಡಿದ್ದ. ಮಜೀದ್ ಖಾನ್, ಪಾಕಿಸ್ತಾನದ ಉಗ್ರ ಸಂಘಟನೆಗಳ ನಡುವೆ ಸದಾಕತ್ ಎಂಬ ಕೋಡ್ ನೇಮ್ ಇಟ್ಟುಕೊಂಡಿದ್ದಾನೆ. ಉತ್ತರ ಭಾರತದಲ್ಲಿ ನಾರ್ಕೋ ಟೆರರಿಸಮ್ ವಿಸ್ತರಿಸಲು ಹಣದ ಪೂರೈಕೆ ಮಾಡುವ ಜಾಲವನ್ನು ಸದಾಕತ್ ನೋಡಿಕೊಂಡಿದ್ದಾನೆ. ಭಾರತಕ್ಕೆ ಒಳನುಸುಳಿ ಬರುವವರ ಜೊತೆ ಹೆರಾಯಿನ್, ಇನ್ನಿತರ ಡ್ರಗ್ಸ್ ಗಳನ್ನು ಕಳಿಸಿಕೊಟ್ಟು ಪಂಜಾಬ್, ಕಾಶ್ಮೀರ, ದೆಹಲಿಯಲ್ಲಿ ಮಾರಾಟ ಆಗುವಂತೆ ಜಾಲ ಹೆಣೆದಿದ್ದ. ಈ ಕೆಲಸವನ್ನು ಖಲೀಸ್ತಾನ್ ಮತ್ತು ಕಾಶ್ಮೀರದ ಉಗ್ರರ ಬೆಂಬಲಿತರಿಂದ ಮಾಡಿಸಿಕೊಳ್ಳುತ್ತಿದ್ದ ಎನ್ನುವ ವಿಚಾರ ಬಯಲಾಗಿದೆ.
The Special Cell of Delhi Police on Monday arrested five suspected terrorists after an encounter with the police in Delhi’s Shakarpur area.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm