ಬ್ರೇಕಿಂಗ್ ನ್ಯೂಸ್
05-08-24 12:10 pm HK News Desk ದೇಶ - ವಿದೇಶ
ಢಾಕಾ, ಆ.05: ಬಾಂಗ್ಲಾದೇಶದಲ್ಲಿ ಮತ್ತೆ ಮೀಸಲು ನೀತಿ ವಿರೋಧಿಸಿ ಹಿಂಸಾಚಾರ ಭುಗಿಲೆದ್ದಿದೆ. ಭಾನುವಾರ ನಡೆದ ಹೋರಾಟ ಹಿಂಸಾರೂಪ ತಾಳಿದ ಪರಿಣಾಮವಾಗಿ 100 ಮಂದಿ ಮೃತಪಟ್ಟಿದ್ದು, ನೂರಾರು ನಾಗರಿಕರು ಗಾಯಗೊಂಡಿದ್ದಾರೆ. ದೇಶಾದ್ಯಂತ ಕರ್ಪ್ಯೂ ಜಾರಿಗೊಳಿಸಲಾಗಿದೆ.
1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ನಿರ್ಧಾರವನ್ನು ವಿದ್ಯಾರ್ಥಿ ಒಕ್ಕೂಟ ಬಲವಾಗಿ ವಿರೋಧಿಸಿದೆ. ಸರಕಾರ ನಿರ್ಧರಿಸಿದ್ದ ಶೇ. 30ರಷ್ಟು ಮೀಸಲನ್ನು ಸುಪ್ರೀಂ ಕೋರ್ಟ್, ಶೇ. 5ಕ್ಕೆ ಇಳಿಸಿದೆ. ಆ ತೀರ್ಪಿನ ಬಳಿಕವೂ ಹೋರಾಟ ಮುಂದುವರಿದಿದ್ದು, ಭಾನುವಾರ ದೇಶದ ವಿವಿಧೆಡೆ ಘರ್ಷಣೆ ನಡೆದಿದೆ.
ಪ್ರತಿಭಟನಾಕಾರರು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಅಶ್ರುವಾಯು, ಗ್ರೆನೇಡ್ ಬಳಸಿದ್ದಾರೆ. ಢಾಕಾದ ಶೇಖ್ ಮುಜೀಬ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ನುಗ್ಗಿದ ಹೋರಾಟಗಾರರು ಹಿಂಸಾಚಾರ ನಡೆಸಿದ್ದಾರೆ. ಸರಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ.
ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದಂತೆಯೇ ಸರಕಾರ, ದೇಶಾದ್ಯಂತ ಅನಿರ್ದಿಷ್ಟಾವಧಿ ಕರ್ಪ್ಯೂ ಜಾರಿಗೊಳಿಸಿದೆ. ಪರಿಸ್ಥಿತಿ ತಹಬಂದಿಗೆ ತರಲು ರಾಜಧಾನಿ ಢಾಕಾ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಪಹರೆ ಹಾಕಲಾಗಿದ್ದು, ಶಾಂತಿ ಕಾಪಾಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಇಂಟರ್‌ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಮೀಸಲು ವಿವಾದ ಕುರಿತಂತೆ ಚರ್ಚೆ ನಡೆಸಲು ಪ್ರಧಾನಿ ಶೇಖ್ ಹಸೀನಾ ನೀಡಿದ ಆಹ್ವಾನ ತಿರಸ್ಕರಿಸಿರುವ ಹೋರಾಟಗಾರರು, ರಾಷ್ಟ್ರವ್ಯಾಪಿ ಪ್ರತಿಭಟನೆ ಜತೆಗೆ ಅಸಹಕಾರ ಚಳವಳಿಗೆ ಕರೆ ನೀಡಿದ್ದಾರೆ. ಬಂಧನದಲ್ಲಿರುವ ವಿದ್ಯಾರ್ಥಿಗಳನ್ನು ಮೊದಲು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಹೋರಾಟಕ್ಕೆ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಬೆಂಬಲ ಘೋಷಿಸಿದ್ದು, 'ಅಸಹಕಾರ ಚಳವಳಿ' ನಡೆಸುವಂತೆ ಜನತೆಗೆ ಕರೆ ನೀಡಿದೆ. ''ತೆರಿಗೆ, ವಿವಿಧ ಶುಲ್ಕಗಳನ್ನು ಪಾವತಿ ಮಾಡಬೇಡಿ, ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಸರಕಾರದ ನೀತಿ ವಿರುದ್ಧ ಹೋರಾಟ ನಡೆಸಿ,'' ಎಂದು ಮಾಜಿ ಪ್ರಧಾನಿ ಬೇಗಂ ಖಲಿದಾ ಜಿಯಾ ಅವರ ಬಿಎನ್‌ಪಿ ಮನವಿ ಮಾಡಿದೆ.
ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿರುವ ದೇಶದ ಪ್ರಜೆಗಳಿಗೆ ಎಚ್ಚರಿಕೆ ನೀಡಿರುವ ಭಾರತ ಸರಕಾರ, ಆದಷ್ಟು ಸುರಕ್ಷಿತ ಪ್ರದೇಶದಲ್ಲಿರುವಂತೆ ಸೂಚನೆ ನೀಡಿದೆ. ತುರ್ತು ಸನ್ನಿವೇಶದಲ್ಲಿ ಸಹಾಯಕ್ಕೆ ರಾಯಭಾರ ಕಚೇರಿ ಜತೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಕಳೆದೊಂದು ತಿಂಗಳಿಂದ ಮೀಸಲು ನೀತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 200 ಮಂದಿ ಅಸು ನೀಗಿದ್ದಾರೆ.
"ದೇಶದಲ್ಲಿಅಶಾಂತಿ ಸೃಷ್ಟಿಸಿದ ದುಷ್ಕರ್ಮಿಗಳನ್ನು ಮಟ್ಟ ಹಾಕಿ. ನಾಗರಿಕರನ್ನು ಪ್ರಚೋದಿಸಿದ ಪುಂಡರು, ಸರಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು," ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಗುಡುಗಿದ್ದಾರೆ.
ಇನ್ನು ಪರಿಸ್ಥಿತಿ ನಿಯಂತ್ರಿಸುವ ದೃಷ್ಟಿಯಲ್ಲಿ ರಾಜಧಾನಿ ಢಾಕಾ ಸೇರಿದಂತೆ ರಾಷ್ಟ್ರವ್ಯಾಪಿ ಕರ್ಫ್ಯೂ ಸೆಕ್ಷನ್ 144ಅನ್ನು ವಿಧಿಸಲಾಗಿದ್ದು, ನಿನ್ನೆ (ಆಗಸ್ಟ್ 04) ಸಂಜೆ 6ಗಂಟೆಯಿಂದ ಅನಿರ್ದಿಷ್ಟಾವಧಿಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
Dozens of people have been killed and hundreds injured as renewed anti-government protests swept across Bangladesh, with protesters calling for the prime minister to resign as mobile internet access was cut off in an attempt to quell the unrest. The country’s leading Bengali-language daily newspaper, Prothom Alo, said at least 95 people, including at least 14 police officers, had died on Sunday in the violence. Channel 24 reported at least 85 deaths.
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 10:33 pm
Mangalore Correspondent
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
Ullal news, Mangalore, Batapady; ಭ್ರಷ್ಟ ಅಧಿಕಾ...
22-11-24 11:55 am
22-11-24 10:47 pm
Mangalore Correspondent
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm