ಬ್ರೇಕಿಂಗ್ ನ್ಯೂಸ್
07-08-24 04:51 pm HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್.7: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯರಿಗೆ ಶಾಕ್ ಆಗುವಂತಹ ಸುದ್ದಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ರೆಸ್ಲಿಂಗ್ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿದ್ದ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಗಳಿಸಿದ್ದ ವಿನೇಶ್ ಫೋಗಟ್ ಜಸ್ಟ್ 100 ಗ್ರಾಮ್ ತೂಕದ ಕಾರಣಕ್ಕೆ ಕ್ರೀಡಾಕೂಟದಿಂದಲೇ ಹೊರಬಿದ್ದಿದ್ದಾರೆ.
ಬುಧವಾರ ಬೆಳಗ್ಗೆ ಅಮೆರಿಕದ ಸಾರಾ ಹಿಲ್ಡ್ ಬ್ರಾಂಟ್ ಜೊತೆಗೆ ಫೈನಲಿನಲ್ಲಿ ವಿನೇಶ್ ಫೋಗಟ್ ಆಡಬೇಕಿತ್ತು. 50 ಕೇಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್ ಮಂಗಳವಾರ ರಾತ್ರಿ ಎರಡು ಕೇಜಿ ಹೆಚ್ಚುವರಿ ಭಾರ ತೋರಿಸಿದ್ದರು ಎನ್ನಲಾಗಿತ್ತು. ಹೀಗಾಗಿ ಇಡೀ ರಾತ್ರಿ ನಿದ್ದೆ ಮಾಡದೆ ವರ್ಕೌಟ್ ಮಾಡಿದ್ದರು. ಆಹಾರವನ್ನು ತೆಗೆದುಕೊಳ್ಳದೆ ಮಿತವ್ಯಯ ಮಾಡಿದ್ದರು. ಆದರೆ, ಬುಧವಾರ ಬೆಳಗ್ಗೆ ಫೈನಲ್ ಸ್ಪರ್ಧೆಗೆ ಅಣಿಯಾಗುವುದಕ್ಕೂ ಮುನ್ನ ಕೇಜಿ ಚೆಕ್ ಮಾಡಿದಾಗ, 50 ಕೇಜಿಯಿಂದ 100 ಗ್ರಾಮ್ ಹೆಚ್ಚುವರಿ ಕಂಡುಬಂದಿದೆ. ಹೀಗಾಗಿ ಒಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಚಿನ್ನ ಬಾಚಲು ಲಗ್ಗೆ ಇಟ್ಟಿದ್ದ ಭಾರತೀಯ ನಾರಿಗೆ ತೀವ್ರ ಮುಖಭಂಗ ಆಗಿದೆ. ವಿನೇಶ್ ಫೋಗಟ್ ಅವರನ್ನು ತೀರ್ಪುಗಾರರು ಅನರ್ಹರು ಎಂದು ತೀರ್ಮಾನಿಸಿ ಹೊರಕ್ಕಟ್ಟಿದ್ದಾರೆ.
![]()
ಈ ಬಗ್ಗೆ ಭಾರತ ಒಲಿಂಪಿಕ್ಸ್ ಅಸೋಸಿಯೇಶನ್ ವಿಷಾದ ವ್ಯಕ್ತಪಡಿಸಿದೆ. ಸತತ ಪ್ರಯತ್ನದ ಹೊರತಾಗಿಯೂ ನಾವು ಚಿನ್ನ ಗೆಲ್ಲುವುದರಿಂದ ಜಸ್ಟ್ ಮಿಸ್ ಆದೆವು. ವಿನೇಶ್ ಫೋಗಟ್ ಕ್ರೀಡಾಕೂಟದಿಂದ ಅರ್ಹತೆ ಕಳಕೊಂಡಿದ್ದಾರೆ ಎಂದು ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷೆ ಪಿಟಿ ಉಷಾ ಹೇಳಿದ್ದಾರೆ. ವಿನೇಶ್ ಫೋಗಟ್ ಅರ್ಹತೆ ಕಳಕೊಂಡ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಟಿ ಉಷಾ ಜೊತೆಗೆ ಮಾತನಾಡಿದ್ದು, ಪ್ರಬಲವಾಗಿ ಪ್ರತಿಭಟನೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಕೊನೆಕ್ಷಣದಲ್ಲಿ ಪದಕ ಮಿಸ್ ಆಗಿರುವ ಘಟನೆ ಬಗ್ಗೆ ಕಾರಣಗಳನ್ನು ಕೇಳಿದ್ದಾರೆ.
ವಿನೇಶ್ ಫೋಗಟ್ 53 ಕೇಜಿ ವಿಭಾಗದಲ್ಲಿ ರೆಸ್ಲಿಂಗ್ ಆಡುತ್ತಿದ್ದ ಕ್ರೀಡಾಳುವಾಗಿದ್ದರು. ಸಾಮಾನ್ಯವಾಗಿ 60 ಕೇಜಿ ಇದ್ದವರು 57 ಕೇಜಿ ವಿಭಾಗದ ಸ್ಪರ್ಧೆಯಲ್ಲಿ ಆಟಕ್ಕಿಳಿಯುತ್ತಾರೆ. ಆಟಕ್ಕೆ ಒಂದು ವಾರ ಇರುವಾಗ 2-3 ಕೇಜಿ ಕಳಕೊಂಡು ಸ್ಪರ್ಧೆಗೆ ಅಣಿಗೊಳ್ಳುತ್ತಾರೆ. ಅದೇ ಮಾದರಿಯಲ್ಲಿ ವಿನೇಶ್ ಫೋಗಟ್ 50 ಕೇಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಮಂಗಳವಾರ ಸೆಮಿ ಫೈನಲಿನಲ್ಲಿ ಜಪಾನ್ ದೇಶದ ಸ್ಪರ್ಧಿಯನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ರೆಸ್ಲಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಜಯಿಸುವ ಆಶಾಕಿರಣ ಮೂಡಿಸಿದ್ದರು. ಆದರೆ ಫೈನಲ್ ಸುತ್ತಿನಲ್ಲಿ ಅರ್ಹತೆ ಕಳಕೊಂಡಿದ್ದರಿಂದ ಯಾವುದೇ ಪದಕ ಇಲ್ಲದೆ ವಿನೇಶ್ ಫೋಗಟ್ ಒಲಿಂಪಿಕ್ ಸ್ಪರ್ಧೆಯಿಂದ ಹೊರಬಿದ್ದಿದ್ದು ನಿರಾಸೆ ಮೂಡಿಸಿದ್ದಾರೆ. 50 ಕೇಜಿ ರೆಸ್ಲಿಂಗ್ ಕೂಟದಲ್ಲಿ ಫೈನಲ್ ಸುತ್ತಿಗೆ ಬಂದಿರುವ ಅಮೆರಿಕದ ಕ್ರೀಡಾಳು ಸಾರಾಗೆ ಚಿನ್ನ, ಜಪಾನ್ ದೇಶದ ಯೂ ಸುಸಾಕಿ ಅವರಿಗೆ ಕಂಚಿನ ಪದಕವನ್ನು ಘೋಷಣೆ ಮಾಡಲಾಗಿದೆ. ಬೆಳ್ಳಿ ಪದಕವನ್ನು ಯಾರಿಗೂ ಕೊಟ್ಟಿಲ್ಲ.
ಒಲಿಂಪಿಕ್ ನಲ್ಲಿ ಕೇಜಿ ವಿಭಾಗದಲ್ಲಿ ಅರ್ಹತೆ ಗಳಿಸುವುದು ಅತಿ ಮುಖ್ಯವಾಗಿರುತ್ತದೆ. ಸ್ವಲ್ಪ ಎಡವಿದರೂ, ಹೊರ ಬೀಳುವ ಪ್ರಸಂಗ ಎದುರಾಗುತ್ತದೆ. ಆಕೆ ನಿಜಕ್ಕೂ ಭರವಸೆ ಮೂಡಿಸಿದ್ದಳು. ಕೊನೆಕ್ಷಣದಲ್ಲಿ ಪದಕದಿಂದ ಮಿಸ್ ಆಗಿದ್ದಾಳೆ. ಮುಂದೆ ಖಚಿತವಾಗಿ ಆಕೆ ಪದಕ ಗೆದ್ದೇ ಗೆಲ್ಲುತ್ತಾಳೆ ಎಂದು ಟೆನಿಸ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.
India's ace grappler Vinesh Phogat, on the cusp of ultimate glory in the Paris Olympic Games 2024, was disqualified hours before the final. Vinesh, who was competing in the 50 kg freestyle wrestling category, was found 100 grams over the 50-kg weight limit for her event. Vinesh usually competes in the 53 kg category but brought her weight down to 50 kg for the Paris Olympics. On Day 2 of her weigh-in, she was found over the limit by a small margin of about 100 grams. The Indian Olympic Association (IOA) has appealed her disqualification.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm