ಬ್ರೇಕಿಂಗ್ ನ್ಯೂಸ್
09-11-26 10:02 pm HK News Staffer ಕರಾವಳಿ
ಮಂಗಳೂರು, ನ.9: ಕರಾವಳಿಯ ಪಕ್ಷಿ ಪ್ರೇಮಿಗಳಿಗೆ ಅಪರೂಪದ ಅತಿಥಿಯ ದರ್ಶನವಾಗಿದೆ. ಸಾಮಾನ್ಯವಾಗಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಕಾಣಸಿಗುವ ಕಪ್ಪು ಎದೆಯ ನೇಯ್ಗೆ ಹಕ್ಕಿ ಇದೀಗ ಮಂಗಳೂರಿನಲ್ಲೂ ಪತ್ತೆಯಾಗಿದೆ.
ಮಂಗಳೂರಿನ ಸಮೀಪದ ಜೋಕಟ್ಟೆಯಲ್ಲಿ ಪಕ್ಷಿ ವೀಕ್ಷಕರು ಹಾಗೂ ಉದ್ಯಮಿಗಳಾದ ಕೆ. ವಿವೇಕ್ ಆರ್. ನಾಯಕ್ ಮತ್ತು ಅಭಯ್ ಯೆಲ್ಲೋರೆ ಈ ಹಕ್ಕಿಯನ್ನು ಗುರುತಿಸಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಪಕ್ಷಿ ವೀಕ್ಷಣೆಯಲ್ಲಿ ತೊಡಗಿಸಿರುವ ವಿವೇಕ್ ನಾಯಕ್, ಈ ಹಿಂದೆ ಹಳದಿ ಎದೆಯ ಬಂಟಿಂಗ್, ಆರ್ಟೋಲನ್ ಬಂಟಿಂಗ್ ಮತ್ತು ಕಿಂಗ್ ಕ್ವೇಲ್ ಸೇರಿದಂತೆ ಹಲವು ಅಪರೂಪದ ಪಕ್ಷಿಗಳನ್ನು ಗುರುತಿಸಿದ ಅನುಭವ ಹೊಂದಿದ್ದಾರೆ.
ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ ಸಂದರ್ಭದಲ್ಲಿ ಪಕ್ಷಿ ವೀಕ್ಷಕಿ ಶ್ವೇತಾ ಭಾರತಿ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಇದೇ ಪ್ರಭೇದವನ್ನು ಗುರುತಿಸಿದ್ದರು. ಅದಕ್ಕೂ ಮೊದಲು ಕೇರಳದ ಕಣ್ಣೂರಿನಲ್ಲೂ ಇದರ ಇರುವಿಕೆ ದಾಖಲಾಗಿತ್ತು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದೇ ಮೊದಲ ಬಾರಿಗೆ ಈ ಹಕ್ಕಿ ಪತ್ತೆಯಾಗಿದೆ ಎಂದು ವಿವೇಕ್ ನಾಯಕ್ ತಿಳಿಸಿದ್ದಾರೆ.
ಏನಿದು ಕಪ್ಪು ಎದೆಯ ನೇಯ್ಗೆ ಹಕ್ಕಿ?
'ಬ್ಲ್ಯಾಕ್ ಬ್ರೆಸ್ಟೆಡ್ ವೀವರ್' (Black-breasted Weaver) ಎಂದು ಕರೆಯಲ್ಪಡುವ ಈ ಹಕ್ಕಿಯ ವೈಜ್ಞಾನಿಕ ಹೆಸರು 'Ploceus benghalensis'. ಗುಬ್ಬಚ್ಚಿಯ ಗಾತ್ರದ ಈ ಹಕ್ಕಿ ಮುಖ್ಯವಾಗಿ ಹುಲ್ಲುಗಾವಲು ಮತ್ತು ಜೌಗು ಪ್ರದೇಶಗಳಲ್ಲಿ ವಾಸಿಸುತ್ತದೆ. ಉತ್ತರ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಪ್ರಭೇದ ಕರಾವಳಿ ಭಾಗದಲ್ಲೂ ಕಾಣಸಿಕ್ಕಿರುವುದು ಪಕ್ಷಿ ವೀಕ್ಷಕರ ಗಮನ ಸೆಳೆದಿದೆ.
ಇನ್ನು, ಕರಾವಳಿ ಭಾಗದಲ್ಲಿ ಚಳಿಗಾಲದ ವಲಸೆ ಹಕ್ಕಿಗಳ ಆಗಮನವೂ ಹೆಚ್ಚಾಗಿದೆ. ಈ ವರ್ಷ ಗುರುಪುರದ ಸುತ್ತಮುತ್ತ ಯುರೋಪಿಯನ್ ರೋಲರ್ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ನಾರ್ದರ್ನ್ ಶಾವೆಲರ್ ಹಕ್ಕಿಗಳೂ ಆಗಮಿಸಿವೆ. ಇದರ ಜೊತೆಗೆ ನಾರ್ದರ್ನ್ ಪಿಂಟೇಲ್, ಕಾಮನ್ ಟೀಲ್, ಸ್ಪಾಟ್ ಬಿಲ್ಡ್ ಡಕ್, ಬ್ಲ್ಯಾಕ್ ಟೇಲ್ಡ್ ಗಾಡ್ವಿಟ್, ಗ್ಲಾಸಿ ಐಬಿಸ್ ಮತ್ತು ರಫ್ ಸೇರಿದಂತೆ ಹಲವು ವಲಸೆ ಹಕ್ಕಿಗಳು ಕಂದಾವರ, ಗುರುಪುರ ಹಾಗೂ ಜೋಕಟ್ಟೆ ಪ್ರದೇಶಗಳಲ್ಲಿ ಪತ್ತೆಯಾಗಿವೆ.
ಈ ಭಾಗದಲ್ಲಿ ಈಗಾಗಲೇ ಕನಿಷ್ಠ 10ರಿಂದ 15 ವಲಸೆ ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿದೆ. ಉತ್ತರದ ಪ್ರದೇಶಗಳಲ್ಲಿ ಬದಲಾಗುತ್ತಿರುವ ಹವಾಮಾನ ಮತ್ತು ಹೆಚ್ಚುತ್ತಿರುವ ತಾಪಮಾನ ಪಕ್ಷಿಗಳ ವಲಸೆಯ ಮೇಲೂ ಪರಿಣಾಮ ಬೀರಿರಬಹುದು ಎಂಬ ಅಭಿಪ್ರಾಯವನ್ನು ವಿವೇಕ್ ನಾಯಕ್ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದಿದ್ದಾರೆ.
09-11-26 07:45 pm
HK News Staffer
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5...
03-11-26 09:48 pm
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
09-11-26 04:45 pm
HK News Staffer
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
09-11-26 10:03 pm
HK News Staffer
ಮಂಗಳೂರಿನಲ್ಲಿ ಅಪರೂಪದ ಹಕ್ಕಿ ಪತ್ತೆ: ಕರಾವಳಿಯ ಪಕ್ಷ...
09-11-26 10:02 pm
ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ದೂರು...
09-11-26 06:57 pm
ವಿಗ್ರಹ ಮಾರಾಟ ಆರೋಪದ ಬೆನ್ನಲ್ಲೇ ತಲಕಾವೇರಿಯಲ್ಲಿ ಬಾ...
08-11-26 10:43 pm
ಬ್ರಿಟಿಷ್ ಕಾಲದ ಶತಮಾನ ಪೂರೈಸಿದ ಹಾಸ್ಟೆಲ್ ಕಟ್ಟಡ ನೆ...
08-11-26 10:13 pm
07-11-26 11:07 pm
HK News Desk
15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...
07-11-26 10:39 am
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am