ಬ್ರೇಕಿಂಗ್ ನ್ಯೂಸ್
08-08-24 10:42 am HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್.8: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ದಾಪುಗಾಲಿಟ್ಟು ಕೇವಲ ನೂರು ಗ್ರಾಮ್ ಭಾರಕ್ಕೆ ಅನರ್ಹಗೊಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ಕುಸ್ತಿ ಪಂದ್ಯಾಟಕ್ಕೇ ನಿವೃತ್ತಿ ಘೋಷಿಸಿದ್ದಾರೆ. ಇನ್ನೇನು ಚಿನ್ನದ ಪದಕಕ್ಕೆ ಒಂದೇ ಹೆಜ್ಜೆ ಎನ್ನುವಷ್ಟರಲ್ಲಿ ಅನರ್ಹತೆಯ ಬರಸಿಡಿಲು ಎದುರಿಸಿದ್ದ ಹೆಣ್ಣುಹುಲಿ ವಿನೇಶ್ ಫೋಗಟ್ ಕೋಟ್ಯಂತರ ಭಾರತೀಯರಿಗೆ ಶಾಕ್ ನೀಡಿದ್ದಾರೆ.
ಕೇವಲ 100 ಗ್ರಾಮ್ ಹೆಚ್ಚುವರಿ ತೂಕದ ಕಾರಣಕ್ಕೆ ಅನರ್ಹಗೊಂಡಿದ್ದು ತೀವ್ರ ನಿರಾಸೆ ಉಂಟುಮಾಡಿತ್ತು. ಹೀಗಾಗಿ ಅದಾದ ಒಂದೇ ದಿನದಲ್ಲಿ ಕುಸ್ತಿಗೆ ವಿದಾಯ ಹೇಳಿದ್ದಾರೆ. ನನ್ನಲ್ಲಿ ಮುಂದೆ ಕುಸ್ತಿ ಆಡುವ ಶಕ್ತಿ ಇಲ್ಲ. ಬಾಯ್ ಬಾಯ್ ರಸ್ಲಿಂಗ್ ಎಂದು ಭಾವನಾತ್ಮಕ ಸಂದೇಶ ಹಾಕಿದ್ದು, ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.
“ನನ್ನ ಮುಂದೆ ಕುಸ್ತಿ ಗೆದ್ದಿತು, ನಾನು ಸೋತು ಹೋದೆ... ನಿಮ್ಮ ಕನಸುಗಳೊಂದಿಗೆ ನನ್ನ ಧೈರ್ಯವೂ ಛಿದ್ರವಾಗಿದೆ. ನನ್ನಲ್ಲಿ ಇನ್ನೂ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ. ನಿಮ್ಮೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಬರೆದುಕೊಂಡಿದ್ದಾರೆ.
ಆಮೂಲಕ ಭಾರತೀಯ ಕುಸ್ತಿ ಇತಿಹಾಸಲ್ಲಿ ವಿನೇಶ್ ಫೋಗಟ್ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ಎದುರಾಳಿ ಎಷ್ಟೇ ಬಲಿಷ್ಠ ಕುಸ್ತಿಪಟುವಾದರೂ, ಧೈರ್ಯದಿಂದ ಎದುರಿಸಿ ಗೆಲ್ಲುವ ಛಾತಿ ಹೊಂದಿದ್ದ ವಿನೇಶ್ ಫೋಗಟ್ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಶಾಕ್ ಎದುರಿಸಿದ್ದಾರೆ. ಸೋಲನ್ನೇ ಕಾಣದ ಜಪಾನ್‌ನ ಬಲಿಷ್ಠ ಕುಸ್ತಿಪಟು ಯೂಯು ಸುಸಾಕಿ ಅವರನ್ನು ಸೋಲಿಸಿದಾಗ, ಈ ಸಲ ಚಿನ್ನ ಖಚಿತ ಎನ್ನುವ ವಿಶ್ವಾಸ ಕುದುರಿತ್ತು. ಆದರೆ ಕೊನೆ ಕ್ಷಣದಲ್ಲಿ ಅನರ್ಹತೆಯ ಬೀಸು ಗತ್ತಿಯ ಇರಿತಕ್ಕೆ ಫೋಗಟ್ ಸೇರಿದಂತೆ ಕೋಟ್ಯಂತರ ಭಾರತೀಯರು ತೀವ್ರ ಶಾಕ್ ಆಗಿದ್ದಾರೆ.
ಮೂರು ಒಲಿಂಪಿಕ್ಸ್‌ಗಳಲ್ಲಿ ಆಡಿರುವ ವಿನೇಶ್, ಮೂರು ಬಾರಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಎರಡು ಕಂಚು ಮತ್ತು ಒಂದು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಒಮ್ಮೆ ಏಷ್ಯನ್ ಚಾಂಪಿಯನ್ ಕೂಡ ಆಗಿದ್ದಾರೆ. 2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ವಿನೇಶ್ ಅವರ ಅಂತಾರಾಷ್ಟ್ರೀಯ ಪದಕಗಳ ಬೇಟೆ ಆರಂಭವಾಗಿತ್ತು. 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಫೋಗಟ್, ಕ್ವಾರ್ಟರ್ ಫೈನಲ್ ತಲುಪಿದರೂ ಪದಕ ಒಲಿಯಲಿಲ್ಲ. ಬಲ ಮೊಣಕಾಲಿಗೆ ಗಾಯಗೊಂಡು ಕೂಟದಿಂದ ಹೊರಬಿದ್ದಿದ್ದರು. ಮತ್ತೆ ಹಠ ಹಿಡಿದು ಬಂಗಾರ ಗೆಲ್ಲುವ ಪಣತೊಟ್ಟ ವಿನೇಶ್, 2018ರ ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಬಂಗಾರ ಜಯಿಸಿದ್ದರು.
Wrestler Vinesh Phogat announced her retirement on Thursday, a day after she was disqualified from the gold medal bout in the 50 kg women's category at the Paris Olympics 2024.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am