ಬ್ರೇಕಿಂಗ್ ನ್ಯೂಸ್
08-08-24 11:11 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 8: ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರ ವಿರೋಧದ ನಡುವೆಯೇ ಗುರುವಾರ ವಕ್ಫ್ ಕಾಯ್ದೆ ತಿದ್ದುಪಡಿಯ ಮಸೂದೆ ಮಂಡನೆಯಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಕ್ಫ್ ಬೋರ್ಡ್‌ಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿದರು.
ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ನಾಯಕರು ಇದು ಧರ್ಮದ ಆಧಾರದಲ್ಲಿ ವಿಭಜಿಸುವ ಯತ್ನ, ಮುಸ್ಲಿಮರನ್ನು ಟಾರ್ಗೆಟ್ ಮಾಡಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕಿರಣ್ ರಿಜಿಜು, ನಾವು ಎಲ್ಲಿಯೂ ಓಡಿಹೋಗುತ್ತಿಲ್ಲ. ಆದ್ದರಿಂದ, ಮಸೂದೆ ಕುರಿತು ಚರ್ಚಿಸಲು ಜಂಟಿ ಸದನ ಸಮಿತಿಗೆ ಒಪ್ಪಿಸಲು ಸಿದ್ಧರಿದ್ದೇವೆ. ವಿವರವಾದ ಚರ್ಚೆ ನಡೆಸಲು ಜಂಟಿ ಸಂಸದೀಯ ಸಮಿತಿ (JPC) ರಚಿಸಲಾಗುವುದು ಎಂದು ಹೇಳಿದರು.
ತಿದ್ದುಪಡಿ ಕಾಯ್ದೆಯಲ್ಲೇನಿದೆ ?
ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಈ ಮಸೂದೆ ವಕ್ಫ್ ಕಾಯಿದೆ, 1995ರಲ್ಲಿ ದೂರಗಾಮಿ ಬದಲಾವಣೆಗಳನ್ನು ತರುತ್ತದೆ. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದು ಸೇರಿದಂತೆ ಕೆಲ ಬದಲಾವಣೆಗೆ ಉದ್ದೇಶಿಸಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯು ಕಾಯ್ದೆಗೆ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ 1995 ಎಂದು ಮರುನಾಮಕರಣ ಮಾಡಲಿದೆ. ಮಂಗಳವಾರ ರಾತ್ರಿಯೇ ಸದನದ ಸದಸ್ಯರಿಗೆ ಮಸೂದೆಯ ಪ್ರತಿಯನ್ನು ಹಂಚಲಾಗಿತ್ತು. ಮಸೂದೆ ಮಂಡನೆಗೆ ರಿಜಿಜು ಅನುಮತಿ ಕೇಳುತ್ತಿದ್ದಂತೆ ಮಸೂದೆ ವಿರೋಧಿಸಿ ವಿಪಕ್ಷಗಳ ಹಲವು ನಾಯಕರು ನೋಟಿಸ್ ನೀಡಿದರು. ಉದ್ದೇಶಿತ ಮಸೂದೆಯು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದು ಆರೋಪಿಸಿದರು.
ವಕ್ಫ್ ಬಳಿ 9.4 ಲಕ್ಷ ಹೆಕ್ಟೇರ್ ಆಸ್ತಿ
ಒಮ್ಮೆ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಗುರ್ತಿಸಿದರೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಭಾರತ ದೇಶದಲ್ಲಿ ಒಟ್ಟು 30 ವಕ್ಫ್ ಮಂಡಳಿಗಳಿದ್ದು, ಒಟ್ಟು 9.4 ಲಕ್ಷ ಎಕರೆ ಭೂಮಿಯನ್ನ ನಿರ್ವಹಿಸುತ್ತಿವೆ ಈ ಭೂಮಿಯ ಒಟ್ಟು ಮೌಲ್ಯ ಸುಮಾರು 1.2 ಲಕ್ಷ ಕೋಟಿ ರೂ. ಎನ್ನಲಾಗಿದೆ. ಇದೇ ಕಾರಣಕ್ಕಾಗಿ ವಕ್ಫ್ ಬೋರ್ಡ್ ಇಡೀ ಭಾರತದಲ್ಲೇ ಅತಿ ಹೆಚ್ಚು ಭೂಮಿಯ ಮಾಲೀಕತ್ವ ಹೊಂದಿರುವ ಮೂರನೇ ಸಂಸ್ಥೆಯಾಗಿದೆ. ರೈಲ್ವೆ ಹಾಗೂ ರಕ್ಷಣಾ ಇಲಾಖೆ ಬಳಿಕ ವಕ್ಫ್ ಮಂಡಳಿ ಬಳಿಯಲ್ಲೇ ಹೆಚ್ಚು ಭೂಮಿ ಇದೆ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.
ವಕ್ಫ್ ಮಸೂದೆಯಲ್ಲಿ ಮಹತ್ತರ ಸುಧಾರಣೆ
ಮಹತ್ವದ ಸುಧಾರಣೆಗಳನ್ನ ಈ ತಿದ್ದುಪಡಿ ಮಸೂದೆ ಪ್ರಸ್ತಾಪಿಸಿದೆ. ಪ್ರಮುಖವಾಗಿ ರಾಜ್ಯಗಳ ವಕ್ಫ್ ಮಂಡಳಿ ಜೊತೆಯಲ್ಲೇ ಕೇಂದ್ರೀಯ ವಕ್ಫ್ ಸಮಿತಿ ರಚನೆ, ಮುಸ್ಲಿಂ ಮಹಿಳೆ ಹಾಗೂ ಮುಸ್ಲಿಮೇತರ ಸದಸ್ಯರ ನೇಮಕ, ಪ್ರತಿ ರಾಜ್ಯಗಳ ಬೋರ್ಡ್‌ಗಳು ಹಾಗೂ ಕೇಂದ್ರೀಯ ಪರಿಷತ್‌ನಲ್ಲೂ ತಲಾ ಇಬ್ಬರು ಮಹಿಳೆಯರನ್ನು ನೇಮಕ ಮಾಡಬೇಕೆಂದು ತಿದ್ದುಪಡಿ ಮಸೂದೆ ಹೇಳುತ್ತದೆ. ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಅಥವಾ ಸರ್ಕಾರಿ ಭೂಮಿ ಎಂದು ನಿರ್ಧರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕೈಗೆ ನೀಡಬೇಕು ಎಂದು ಮಸೂದೆ ಹೇಳುತ್ತದೆ. ಈ ಮೂಲಕ ವಕ್ಫ್ ನ್ಯಾಯಾಧಿಕರಣದಿಂದ ಅಧಿಕಾರವು ಡಿಸಿಗೆ ಹಸ್ತಾಂತರ ಆಗುತ್ತದೆ. ಈ ಬದಲಾವಣೆಗೆ ವಿರೋಧ ವ್ಯಕ್ತವಾಗುತ್ತಿದೆ. ಏಕೆಂದರೆ ಈ ರೀತಿ ಅಧಿಕಾರ ಹಸ್ತಾಂತರ ಮಾಡಿದರೆ ಆಸ್ತಿಗಳ ದುರ್ಬಳಕೆ ಆಗಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಮುಸ್ಲಿಮರ ಬೋಹರಾಸ್ ಹಾಗೂ ಅಘಖಾನಿ ಪಂಗಡದ ಆಸ್ತಿಗಳ ನಿರ್ವಹಣೆಗೆ ಪ್ರತ್ಯೇಕ ಔಕಾಫ್ ಮಂಡಳಿ ಸ್ಥಾಪನೆ ಮಾಡಬೇಕೆಂದು ಮಸೂದೆ ಹೇಳುತ್ತದೆ. ಜೊತೆಯಲ್ಲೇ ವಕ್ಫ್ ಮಂಡಳಿಯಲ್ಲಿ ಶಿಯಾ, ಸುನ್ನಿ, ಬೋಹರಾಸ್ ಹಾಗೂ ಅಘಖಾನಿ ಪಂಗಡಗಳ ಪ್ರಾತಿನಿಧ್ಯ ಇರಲೇಬೇಕು ಎಂದು ಹೇಳುತ್ತದೆ. ಭಾರತ ಸರ್ಕಾರದ ಸಿಎಜಿ ನೇಮಕ ಮಾಡುವ ಆಡೀಟರ್‌ಗಳು ವಕ್ಫ್ ಆಸ್ತಿಗಳ ಲೆಕ್ಕ ಪರಿಶೀಲನೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ನೀಡುತ್ತದೆ.
Today in the ongoing monsoon session of the Parliament, the Union Minority Affairs Minister Kiren Rijiju introduced the Waqf (Amendment) Bill, 2024 in Lok Sabha. It proposes to bring approximately 40 amendments to the existing Waqf Act, 1995 (as amended in 2013).
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm