ಬ್ರೇಕಿಂಗ್ ನ್ಯೂಸ್
23-08-24 01:56 pm HK News Desk ದೇಶ - ವಿದೇಶ
ಕೀವ್, ಆಗಸ್ಟ್ 22: ಪೋಲೆಂಡ್ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಯುದ್ಧ ಭೂಮಿ ಉಕ್ರೇನ್ಗೆ ಬಂದಿಳಿದಿದ್ದಾರೆ. ತಮ್ಮ ಈ ಐತಿಹಾಸಿಕ ಭೇಟಿ ವೇಳೆ ಅವರು ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ಜೊತೆಗೆ ಸಂಘರ್ಷದ ಸಂಧಾನ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
1991ರಲ್ಲಿ ಉಕ್ರೇನ್ ಸ್ವಾತಂತ್ರ್ಯಗಳಿಸಿದ ಬಳಿಕ ಭಾರತದ ಪ್ರಧಾನಿ ಉಕ್ರೇನ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ರೈಲ್ ಫೋರ್ಸ್ ಒನ್ ಬಿಗಿ ಭದ್ರತೆಯಲ್ಲಿ ಪೋಲೆಂಡ್ನಿಂದ ಕೀವ್ಗೆ ಪ್ರಧಾನಿ ಭೇಟಿ ನೀಡಿದ್ದಾರೆ. ಕಳೆದ ಆರು ವಾರಗಳ ಹಿಂದೆ ರಷ್ಯಾಗೆ ಭೇಟಿ ನೀಡಿದ್ದ ಅವರು ಇದೀಗ ಉಕ್ರೇನ್ಗೆ ಭೇಟಿ ನೀಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇನ್ನು ಪ್ರಧಾನಿಯ ಉಕ್ರೇನ್ ರಾಜಧಾನಿ ಭೇಟಿ ವೇಳಾಪಟ್ಟಿಯನ್ನು ಭದ್ರತಾ ದೃಷ್ಟಿಯಿಂದ ಬಹಿರಂಗಪಡಿಸಿಲ್ಲ. ಈ ಭೇಟಿಯಲ್ಲಿ ಅವರು ಅನೇಕ ದ್ವಿಪಕ್ಷೀಯ ಕಾರ್ಯಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ.
ಪೋಲೆಂಡ್ ಭೇಟಿಯಲ್ಲಿ ಪೋಲಿಶ್ ಪ್ರಧಾನಿ ಡೋನಾಲ್ಡ್ ಟಸ್ಕ್ ಜೊತೆ ಮಾತುಕತೆ ವೇಳೆ ಉಕ್ರೇನ್ ಸಂಘರ್ಷದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಇದು ಅತ್ಯಂತ ಕಾಳಜಿ ವಿಚಾರವಾಗಿದ್ದು, ಶಾಂತಿ ಪುನರ್ಸ್ಥಾಪಿಸುವ ನಿಟ್ಟುನಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕ ದಾರಿ ಮುಖ್ಯವಾಗಿದೆ ಎಂದಿದ್ದರು.
2022ರಿಂದ ಆರಂಭವಾಗಿರುವ ಈ ಯುದ್ಧ ಸಂಘರ್ಷವನ್ನು ಶಾಂತಿಯುತ ಮಾತುಕತೆ ಮೂಲಕ ಪರಿಹಾರ ನಡೆಸಬೇಕು ಎಂದು ಭಾರತ ಕರೆ ನೀಡಿದೆ. ಯುದ್ಧದಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ ಎಂಬುದು ಭಾರತದ ನಂಬಿಕೆಯಾಗಿದೆ. ಯಾವುದೇ ಬಿಕ್ಕಟ್ಟಿನಲ್ಲಿನ ಮುಗ್ದ ಜನರ ಪ್ರಾಣ ತ್ಯಾಗವೂ ಇಡೀ ಮಾನವೀಯತೆಗೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆ ಪುನರ್ಸ್ಥಾಪಿಸುವಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ನಾವು ಬೆಂಬಲ ನೀಡುತ್ತೇವೆ. ಇದಕ್ಕಾಗಿ ಭಾರತ ಮತ್ತು ಸ್ನೇಹ ರಾಷ್ಟ್ರಗಳು ಸಾಧ್ಯವಾದ ಎಲ್ಲಾ ಬೆಂಬಲ ನೀಡಲು ಸಿದ್ಧ ಎಂದ ಟಸ್ಕ್ ಜೊತೆಗಿನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದರು.
ಜೂನ್ನಲ್ಲಿ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಝೆಲನ್ಸ್ಕಿ ಜೊತೆಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಕೂಡ ಪ್ರಧಾನಿ ಮೋದಿ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಮೂಲಕ ಎಲ್ಲಾ ರೀತಿ ಬೆಂಬಲ ಮುಂದುವರೆಸಲು ಸಿದ್ಧ ಎಂದಿದ್ದರು. ಈ ಭೇಟಿ ಸಂದರ್ಭದಲ್ಲಿ ಝೆಲಕ್ಸ್ಕಿ ಪ್ರಧಾನಿ ಮೋದಿ ಅವರನ್ನು ಉಕ್ರೇನ್ಗೆ ಅಹ್ವಾನಿಸಿದ್ದರು.
ಅಷ್ಟಕ್ಕೂ ಇದೀಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವು ಘೋರವಾಗಿದೆ. ಅದರಲ್ಲೂ ಈ ಯುದ್ಧದಲ್ಲಿ ವೈಮಾನಿಕ ದಾಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಅವರನ್ನ ಉಕ್ರೇನ್ ನೆಲಕ್ಕೆ ತೆರಳುವಂತೆ ವ್ಯವಸ್ಥೆ ಮಾಡಲು ರೈಲು ಮಾರ್ಗದ ವ್ಯವಸ್ಥೆ ಮಾಡಲಾಯಿತು . 'ಟ್ರೇನ್ ಪೋರ್ಸ್ ಒನ್' ಹೆಸರಿನ ವಿಶೇಷ ರೈಲಿನಲ್ಲಿ ಪ್ರಧಾನಿ 20 ಗಂಟೆಗಳ ಕಾಲ ಪ್ರಯಾಣಿಸಿದ್ದು, ಒಂದ್ಕಡೆ ಉಕ್ರೇನ್ ರಾಜಧಾನಿಗೆ 10 ಗಂಟೆ ಪ್ರಯಾಣ ಮಾಡಿ ತಲುಪಿದ್ದಾರೆ. ಚರ್ಚೆ ನಂತರ ಮತ್ತೆ ಪೋಲೆಂಡ್ ವಾಪಸ್ ಬರಲು ಪ್ರಧಾನಿ ಸಜ್ಜಾಗಲಿದ್ದು ಆಗ ಕೂಡ 10 ಗಂಟೆಗಳ ಕಾಲ ಮತ್ತೆ ರೈಲು ಪ್ರಯಾಣ ಮಾಡಲಿದ್ದಾರೆ.
PM Narendra Modi is in Ukraine for his much-anticipated trip after wrapping up his two-day visit to Poland this morning. He is scheduled to meet the Ukrainian PM Volodymyr Zelenskyy, upon whose invite he is visiting the conflict-hit nation-state.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm