Anil Ambani, Share market: ಷೇರುಪೇಟೆಯಿಂದ ಅನಿಲ್ ಅಂಬಾನಿಗೆ ನಿಷೇಧ ಬರೆ ; ರಿಲಯನ್ಸ್ ಹೋಮ್ ಫೈನಾನ್ಸ್ ಸೇರಿ 24 ಕಂಪನಿಗಳಿಗೆ ಸೆಬಿಯಿಂದ ಗದಾಪ್ರಹಾರ 

24-08-24 12:09 pm       HK News Desk   ದೇಶ - ವಿದೇಶ

ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಖ್ಯಾತ ಉದ್ಯಮಿ, ರಿಲಯನ್ಸ್ ಸಂಸ್ಥೆಯ ಮಾಲೀಕನ ಸೋದರ ಅನಿಲ್ ಅಂಬಾನಿಗೆ ಗದಾಪ್ರಹಾರ ಮಾಡಿದೆ.

ಮುಂಬೈ, ಆಗಸ್ಟ್.24: ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಖ್ಯಾತ ಉದ್ಯಮಿ, ರಿಲಯನ್ಸ್ ಸಂಸ್ಥೆಯ ಮಾಲೀಕನ ಸೋದರ ಅನಿಲ್ ಅಂಬಾನಿಗೆ ಗದಾಪ್ರಹಾರ ಮಾಡಿದೆ. ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಹೋಮ್ ಫೈನಾನ್ಸ್ ಕಂಪನಿ (ಆರ್ ಎಚ್ಎಫ್ಎಲ್) ಯಿಂದ ಬೇರೆಡೆಗೆ ಅಕ್ರಮ ಹಣ ವರ್ಗಾಯಿಸಿದ್ದಕ್ಕಾಗಿ ಸೆಬಿಯು(ಮಾರುಕಟ್ಟೆ ನಿಯಂತ್ರಕ ಸಂಸ್ಥೆ) ಅನಿಲ್ ಅಂಬಾನಿಗೆ ಐದು ವರ್ಷಗಳ ಕಾಲ ಷೇರುಪೇಟೆಯಿಂದ ನಿಷೇಧ ಹಾಕಿದೆ.

ಇದಲ್ಲದೆ, ಅನಿಲ್ ಅಂಬಾನಿಗೆ ಬರೋಬ್ಬರಿ 25 ಕೋಟಿ ರೂಪಾಯಿ ದಂಡ ಹಾಕಿದ್ದರೆ, ಆರ್ ಎಚ್ಎಫ್ ಎಲ್ ಮಾಜಿ ಅಧಿಕಾರಿಗಳಾದ ಅಮಿತ್ ಬಾಪ್ನಾ ಅವರಿಗೆ 27 ಕೋಟಿ ರೂ., ಸುಧಾಲತ್ಕರ್ ಅವರಿಗೆ 26 ಕೋಟಿ ರೂ., ಪಿಂಕೇಶ್ ಆರ್. ಶಾಗೆ 21 ಕೋಟಿ ರೂ. ದಂಡ ವಿಧಿಸಲಾಗಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಗೂ 6 ಲಕ್ಷ ದಂಡ ವಿಧಿಸಲಾಗಿದ್ದು ಷೇರು ಪೇಟೆಯಿಂದ 6 ತಿಂಗಳ ಕಾಲ ನಿಷೇಧಿಸಲಾಗಿದೆ.

Sensex, Nifty: Reasons behind the stock market rally today; will gains  sustain? - BusinessToday

ಅನಿಲ್ ಅಂಬಾನಿ ಅವರು ಯಾವುದೇ ಪಟ್ಟಿ ಮಾಡಲಾದ ಕಂಪನಿಯ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬಂದಿ ಹುದ್ದೆ ಇಲ್ಲವೇ ಸೆಬಿಯಿಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಜೊತೆ ಸಂಪರ್ಕ ಸಾಧಿಸುವುದಾಗಲೀ ಮಾಡಬಾರದು ಎಂದು ಆದೇಶಿಸಿದೆ. ಸಾಲ ಪಡೆದವರಲ್ಲಿ ಹೆಚ್ಚಿನವರು ಅದನ್ನು ಮರು ಪಾವತಿಸಲು ವಿಫಲರಾಗಿದ್ದು ಇದರಿಂದ ಆರ್ ಎಚ್ ಎಫ್ಎಲ್ ತನ್ನದೇ ಸಾಲ ಕಟ್ಟಲಾಗದೆ ದಿವಾಳಿಯಾಗಿದೆ. ಇದರಿಂದ ಸಾರ್ವಜನಿಕ ಷೇರುದಾರರು ಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಸೆಬಿ ಹೇಳಿದೆ. ಮಾರ್ಚ್ 2018ರಲ್ಲಿ ಆರ್ ಎಚ್ಎಫ್ಎಲ್ ಷೇರು ದರ 59.60 ರೂ. ಇತ್ತು. ವಂಚನೆ ಸಾಬೀತಾದಂತೆ ಷೇರು ಕುಸಿದು ಈಗ ಕೇವಲ 75 ಪೈಸೆಗೆ ಇಳಿಕೆಯಾಗಿದೆ. 9 ಲಕ್ಷ ಷೇರುದಾರರು ಕಂಪನಿಯಲ್ಲಿ ಹೂಡಿಕೆ ಮಾಡಿದ್ದು ನಷ್ಟಕ್ಕೊಳಗಾಗಿದ್ದಾರೆ.

ಇವೆಲ್ಲವನ್ನು ಗಮನಿಸಿ ಅನಿಲ್ ಅಂಬಾನಿ ಒಡೆತನದ ಕಂಪನಿಗಳಿಗೆ ದಂಡ ವಿಧಿಸಲಾಗಿದೆ. ರಿಲಯನ್ಸ್ ಯೂನಿಕಾರ್ನ್ ಎಂಟರ್ ಪ್ರೈಸಸ್, ರಿಲಯನ್ಸ್ ಎಕ್ಸ್ ಚೇಂಜ್ ನೆಕ್ಸ್ಟ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿ., ರಿಲಯನ್ಸ್ ಕ್ವೀನ್ ಜೆನ್ ಲಿ., ರಿಲಯನ್ಸ್ ಬ್ಯುಸಿನೆಸ್ ಬ್ರಾಡ್ ಕಾಸ್ಕ್ ನ್ಯೂಸ್ ಹೋಲ್ಡಿಂಗ್ಸ್, ರಿಲಯನ್ಸ್ ಬಿಗ್ ಎಂಟರ್ಟೈನ್ಮೆಂಟ್ ಸೇರಿದಂತೆ 24 ಘಟಕ ಕಂಪನಿಗಳಿಗೆ ದಂಡ ಹೇರಲಾಗಿದೆ. ಈ ಹಿಂದೆ 2022ರ ಫೆಬ್ರವರಿಯಲ್ಲಿ ಅನಿಲ್ ಅಂಬಾನಿ ಮತ್ತು ಇತರರ ವಿರುದ್ಧ ಮುಂದಿನ ಆದೇಶದ ವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಭಾಗವಹಿಸದಂತೆ ನಿರ್ಬಂಧ ಹಾಕಿದ್ದರೂ, ಈಗ ಅಂತಿಮ ಆದೇಶ ಹೊರಡಿಸಲಾಗಿದೆ.

222 ಪುಟಗಳ ಅಂತಿಮ ಆದೇಶದಲ್ಲಿ ಸೆಬಿಯು ಅನಿಲ್ ಅಂಬಾನಿ ಒಡೆತನದ ಅಕ್ರಮಗಳ ಬಗ್ಗೆ ಪಟ್ಟಿ ಮಾಡಿದ್ದು, ಪ್ರಮುಖ ವ್ಯವಸ್ಥಾಪಕ ಸಿಬಂದಿಗಳ ನೆರವಿನಿಂದ ಅನಿಲ್ ಅವರೇ ಷೇರಿನಲ್ಲಿದ್ದ ಹಣವನ್ನು ಬೇರೆಡೆಗೆ ವರ್ಗಾಯಿಸಲು ವಂಚನೆಯ ಯೋಜನೆ ರೂಪಿಸಿದ್ದರು. ಸಾಲ ಎಂದು ಹೇಳಿ ತಮಗೆ ಸಂಬಂಧಿಸಿದ ಕಂಪನಿಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದರು. ಆರ್ ಎಚ್ಎಫ್ ಎಲ್ ನಿರ್ದೇಶಕರ ಮಂಡಳಿ ಇಂತಹ ಸಾಲ ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿತ್ತಲ್ಲದೆ, ಕಾರ್ಪೊರೇಟ್ ಸಾಲಗಳನ್ನು ನಿಯಮಿತ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿತ್ತು. ಇದಕ್ಕೆ ಅನಿಲ್ ಅಂಬಾನಿ ಕವಡೆ ಕಿಮ್ಮತ್ತನ್ನೂ ನೀಡಿರಲಿಲ್ಲ.

The Securities and Exchange Board of India (Sebi) has imposed a penalty of Rs 624 crore on 27 individuals and entities, including Reliance Group Chairman Anil Ambani, his group firms, and their former directors, for allegedly siphoning off funds from Reliance Home Finance (RHFL).